ಐಪಿ​ಎಲ್‌ ಪ್ರಾಯೋ​ಜ​ಕತ್ವ: ರೇಸ್‌ನಲ್ಲಿ ಅಮೆ​ಜಾನ್ ಎಂಟ್ರಿ..!

Kannadaprabha News   | Asianet News
Published : Aug 08, 2020, 11:06 AM IST
ಐಪಿ​ಎಲ್‌ ಪ್ರಾಯೋ​ಜ​ಕತ್ವ:  ರೇಸ್‌ನಲ್ಲಿ ಅಮೆ​ಜಾನ್ ಎಂಟ್ರಿ..!

ಸಾರಾಂಶ

ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವಕ್ಕೆ ಹಲವು ಕಂಪನಿಗಳು ಮುಂದೆ ಬಂದಿವೆ. ಈ ಪೈಕಿ ಅಮೆಜಾನ್ ರೇಸ್‌ನಲ್ಲಿ ಹೆಚ್ಚು ಒಲವು ತೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಆ.08): ಚೀನಾ ಮೊಬೈಲ್‌ ಕಂಪನಿ ವಿವೋ ಐಪಿಎಲ್‌ ಪ್ರಾಯೋ​ಜಕತ್ವದಿಂದ ಹಿಂದೆ ಸರಿದ ಬಳಿಕ, ಈ ವರ್ಷದ ಐಪಿ​ಎಲ್‌ಗೆ ಹಲವು ಕಂಪನಿಗಳು ಪ್ರಯೋಜಕತ್ವಕ್ಕೆ ಆಸಕ್ತಿ ತೋರಿವೆ. ಅಮೆ​ಜಾನ್‌, ಬೈಜೂಸ್‌, ಕೋಕಾ ಕೋಲಾ ಇಂಡಿಯಾ ಸೇರಿ​ದಂತೆ ಹಲವು ಸಂಸ್ಥೆಗಳು ಪ್ರಾಯೋ​ಜ​ಕತ್ವಕ್ಕೆ ಆಸಕ್ತಿ ವಹಿ​ಸಿವೆ ಎಂದು ವರ​ದಿ​ಯಾದ ಬೆನ್ನಲ್ಲೇ, ಇದೀಗ ಮತ್ತಷ್ಟು ಕಂಪ​ನಿ​ಗಳು ಪೈಪೋ​ಟಿ​ಗಿ​ಳಿ​ಯಲು ಸಿದ್ಧ​ವಾ​ಗಿವೆ. 

ಅನ್‌ಅಕಾ​ಡೆಮಿ, ಮೈ ಸರ್ಕಲ್‌ 11, ಡ್ರೀಮ್‌ 11 ಕಂಪ​ನಿ​ಗಳು ಪ್ರಾಯೋ​ಜ​ಕತ್ವ ಹಕ್ಕು ಸಂಪಾ​ದಿ​ಸಲು ಪ್ರಯ​ತ್ನಿ​ಸ​ಲಿವೆ ಎನ್ನ​ಲಾ​ಗಿದೆ. ಇದೇ ವೇಳೆ ಬಿಸಿ​ಸಿಐ ವಿವೋ ಜಾಗಕ್ಕೆ ಒಂದ​ಕ್ಕಿಂತ ಹೆಚ್ಚು ಕಂಪ​ನಿ​ಗ​ಳನ್ನು ಪ್ರಾಯೋ​ಜ​ಕ​ರಾಗಿ ಪಡೆ​ಯುವ ಲೆಕ್ಕಾ​ಚಾರ ನಡೆ​ಸಿದೆ ಎನ್ನ​ಲಾ​ಗಿದೆ. ಟೈಟಲ್‌ ಪ್ರಾಯೋ​ಜ​ಕ​ತ್ವವನ್ನು ಒಂದು ಕಂಪ​ನಿಗೆ ನೀಡಿ, ಅಧಿ​ಕೃತ ಪ್ರಾಯೋ​ಜ​ಕರು ಎನ್ನುವ ಹೆಸ​ರಲ್ಲಿ ಪ್ರಾಯೋ​ಜ​ಕತ್ವ ಹಕ್ಕು ಮಾರಾಟ ಮಾಡಲು ಯೋಜನೆ ರೂಪಿ​ಸು​ತ್ತಿದೆ ಎಂದು ವರ​ದಿ​ಯಾ​ಗಿದೆ.

ಐಪಿ​ಎಲ್‌ ಪ್ರಾಯೋ​ಜ​ಕ​ತ್ವ​ಕ್ಕೆ ಕೋಕ್‌, ಬೈಜೂಸ್‌ ಆಸಕ್ತಿ?

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಈ ಚುಟುಕು ಕ್ರಿಕೆಟ್ ಟೂರ್ನಿಯು ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಕಳೆದೆರಡು ತಿಂಗಳ ಹಿಂದಷ್ಟೇ ಪೂರ್ವ ಲಡಾಖ್‌ನ ಗಡಿ ಭಾಗವಾದ ಗಲ್ವಾನ್ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತದ 20 ಯೋಧರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಚೀನಿ ಉತ್ಫನ್ನಗಳ ವಿರುದ್ಧ ಘೋಷಣೆ ಜೋರಾಗಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI