
ನವದೆಹಲಿ(ಆ.07): ಕೊರೋನಾ ಸಂಕಷ್ಟದ ನಡುವೆಯೂ ಈ ವರ್ಷ ಐಪಿಎಲ್ ನಡೆಸಲು ಬಿಸಿಸಿಐ ವ್ಯವಸ್ಥೆ ಮಾಡಿದ್ದರೂ, ಫ್ರಾಂಚೈಸಿಗಳಿಗೆ ದೊಡ್ಡ ನಷ್ಟ ಎದುರಾಗಲಿದೆ ಎಂದು ವರದಿಯಾಗಿದೆ.
ಟೈಟಲ್ ಪ್ರಾಯೋಜಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿಸಿಐಗೆ ವಾರ್ಷಿಕ 440 ಕೋಟಿ ರು. ಪಾವತಿಸುತ್ತಿತ್ತು. ಇದರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿಸಿಐ, ಫ್ರಾಂಚೈಸಿಗಳಿಗೆ ಹಂಚುತ್ತಿತ್ತು. ಅಂದರೆ ಪ್ರತಿ ಫ್ರಾಂಚೈಸಿಗೆ 27.5 ಕೋಟಿ ರು. ಸಿಗುತ್ತಿತ್ತು. ಆದರೆ ಈ ವರ್ಷ ವಿವೋ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು, ನೂತನ ಪ್ರಾಯೋಜಕತ್ವದ ಮೌಲ್ಯ, ಗರಿಷ್ಠ 300 ಕೋಟಿಯಷ್ಟು ಇರಬಹುದು ಎಂದು ವಿಶ್ಲೇಷಿಸಲಾಗಿದೆ.
ಐಪಿಎಲ್ ಪ್ರಾಯೋಜಕತ್ವಕ್ಕೆ ಕೋಕ್, ಬೈಜೂಸ್ ಆಸಕ್ತಿ?
ಹೀಗಾಗಿ, ಫ್ರಾಂಚೈಸಿಗಳಿಗೆ ಏನಿಲ್ಲವೆಂದರೂ 12ರಿಂದ 15 ಕೋಟಿ ರು. ಕಡಿಮೆ ಸಿಗಲಿದೆ. ಜತೆಗೆ ಟಿಕೆಟ್ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈಸಿಗಳಿಗೆ ಅಂದಾಜು 25 ಕೋಟಿ ಸಿಗುತ್ತಿತ್ತು. ಈ ವರ್ಷ ಪ್ರೇಕ್ಷಕರಿಗೆ ನಿರ್ಬಂಧ ಹೇರಲಿರುವ ಕಾರಣ, ಆ ಮೊತ್ತವೂ ಸಿಗುವುದಿಲ್ಲ. ಇತರ ಪ್ರಾಯೋಜಕತ್ವದ ಮೌಲ್ಯವೂ ಕಡಿತಗೊಳ್ಳುವ ಸಾಧ್ಯತೆ ಇದೆ.
ಕೊರೋನಾ ಭೀತಿಯಿಂದಾಗಿ ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಿಂದ ಯುಎಇಗೆ ಸ್ಥಳಾಂತರವಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.