2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಭಾರತೀಯ ಕಂಪನಿಗಳು ಮುಂದೆ ಬಂದಿವೆ. ಬೈಜೂಸ್ ಈಗಾಗಲೇ ಭಾರತ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.07): 2020ರ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೊಬೈಲ್ ಕಂಪನಿ ವಿವೋ ಹಿಂದೆ ಸರಿದಿದೆ ಎಂದು ಬಿಸಿಸಿಐ ಗುರುವಾರ ಅಧಿಕೃತ ಪ್ರಕಟಣೆ ನೀಡಿದ ಬೆನ್ನಲ್ಲೇ 1 ವರ್ಷದ ಅವಧಿಗೆ ಪ್ರಾಯೋಜಕತ್ವ ಹಕ್ಕಿಗೆ ಬಿಡ್ ಸಲ್ಲಿಸಲು ಭಾರತದ ಕೆಲ ಪ್ರಮುಖ ಸಂಸ್ಥೆಗಳು ಆಸಕ್ತಿ ತೋರಿವೆ.
ಕೋಕಾ ಕೋಲಾ ಇಂಡಿಯಾ, ಬೈಜೂಸ್ ಈ ಪೈಕಿ ಮುಂಚೂಣಿಯಲ್ಲಿವೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಬೈಜೂಸ್ ಈಗಾಗಲೇ ಭಾರತ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ.
IPL 2020: ಟೈಟಲ್ ಪ್ರಾಯೋಜಕತ್ವದಿಂದ ವಿವೋ ಔಟ್, ಬಿಸಿಸಿಐ ಕನ್ಫರ್ಮ್..!
ವಾರ್ಷಿಕ 440 ಕೋಟಿ ರು. ಒಪ್ಪಂದ ಹೊಂದಿದ್ದ ವಿವೋ, ಮುಂದಿನ ವರ್ಷ ಹೊಸ ಗುತ್ತಿಗೆಯೊಂದಿಗೆ ಪ್ರಾಯೋಜಕತ್ವಕ್ಕೆ ವಾಪಸಾಗಬಹುದು. ಆದರೆ ಈ ವರ್ಷದ ಮಟ್ಟಿಗೆ ಕೇವಲ 1 ತಿಂಗಳ ಸಮಯದಲ್ಲಿ ಹೊಸ ಪ್ರಾಯೋಜಕರನ್ನು ಹುಡುಕುವ ಒತ್ತಡಕ್ಕೆ ಬಿಸಿಸಿಐ ಸಿಲುಕಿದೆ. ಐಪಿಎಲ್‌ಗಿರುವ ಜನಪ್ರಿಯತೆಯ ಕಾರಣ, ಪ್ರಾಯೋಜಕರನ್ನು ಹುಡುಕುವುದು ಕಷ್ಟದ ಕೆಲಸವೇನಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಇದೇ ವೇಳೆ ಫೋನ್ ಪೇ, ಅಮೇಜಾನ್ ಇಂಡಿಯಾ, ಜಿಯೋ ಸಂಸ್ಥಗಳು ಸಹ ಪ್ರಾಯೋಜಕತ್ವದ ಹಕ್ಕು ಪಡೆಯುವ ರೇಸ್‌ನಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.