ಭಾರತಕ್ಕೂ ಬಂತಾ ಝೋಂಬಿ ಡ್ರಗ್: ನಿಂತಲ್ಲೇ ಗಂಟೆಗಳ ಕಾಲ ತೂಕಾಡಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

Published : Mar 25, 2026, 10:22 PM ISTUpdated : Mar 25, 2026, 10:29 PM IST
blinkit delivery boy

ಸಾರಾಂಶ

Zombie drug in Punjab: ಪಂಜಾಬ್‌ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.

ಭಾರತಕ್ಕೂ ಎಂಟ್ರಿ ಕೊಡ್ತಾ ಝೋಂಬಿ ಡ್ರಗ್

ಪಂಜಾಬ್‌ನಲ್ಲಿ ಮಾದಕ ಜಾಲದ ದಂಧೆ ತೀವ್ರವಾಗಿದ್ದು, ನವತರುಣರು ಈ ಡ್ರಗ್‌ ಚಟಕ್ಕೆ ಬಿದ್ದು, ಜೀವನ ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ನಮ್ಮ ರಾಜ್ಯದಲ್ಲಿ ಮದ್ಯವರ್ಜನ ಶಿಬಿರಗಳಿರುವಂತೆ ಅಲ್ಲಿ ಡ್ರಗ್ ನಿರ್ಮೂಲನೆಗೆ ಶಿಬಿರಗಳಿವೆ. ಅಷ್ಟರ ಮಟ್ಟಿಗೆ ಅಲ್ಲಿನ ಯುವಕರು ತರುಣರು ಡ್ರಗ್‌ಗೆ ದಾಸರಾಗಿದ್ದಾರೆ. ಪಂಜಾಬ್‌ನ ಡ್ರಗ್ ಜಾಲಕ್ಕೆ ಹೇಗೆ ಅಲ್ಲಿನ ಯುವ ಸಮೂಹದ ಜನರು ಬಲಿಯಾಗ್ತಿದ್ದಾರೆ ಎಂಬುದನ್ನು ನೀವು 2016ರ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನೋಡಬಹುದಾಗಿದೆ.

ಈ ಸಿನಿಮಾದಲ್ಲಿ ಅಲ್ಲಿನ ರಾಕ್ ಸ್ಟಾರ್‌ನಿಂದ ಹಿಡಿದು ವಲಸೆ ಕಾರ್ಮಿಕ, ವೈದ್ಯ ಮತ್ತು ಪೊಲೀಸರು ಕೂಡ ಈ ಡ್ರಗ್‌ಗೆ ಬಲಿಯಾಗಿ ಜೀವನದೊಂದಿಗೆ ಹೋರಾಡುವುದನ್ನು ಕಾಣಬಹುದು. ಆಲಿಯಾ ಭಟ್ ಹಾಗೂ ಶಾಹೀದ್ ಕಪೂರ್ ನಟನೆಯ ಈ ಉಡ್ತಾ ಪಂಜಾಬ್ ಸಿನಿಮಾವೇನೋ ಕೋಟಿ ಕೋಟಿ ಬಾಚುವಲ್ಲಿ ಯಶಸ್ವಿಯಾಯ್ತು. ಆದರೆ ಪಂಜಾಬ್‌ನ ಸ್ಥಿತಿಯಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಲಿಲ್ಲ. ಹತ್ತಿರವೇ ಪಾಕಿಸ್ತಾನದ ಗಡಿಯೂ ಇರುವುದರಿಂದ ಇಲ್ಲಿಗೆ ಎಷ್ಟು ತಡೆಗಟ್ಟಲು ಪ್ರಯತ್ನಿಸಿದರು ಯಾವುದಾದರೊಂದು ಕಳ್ಳದಾರಿಯಲ್ಲಿ ಡ್ರಗ್ಸ್ ಬರುತ್ತಲೇ ಇರುತ್ತದೆ. ಹೀಗಿರುವಾಗ ಇಲ್ಲೊಂದು ಕಡೆ ಡ್ರಗ್ ಜಾಲಕ್ಕೆ ತುತ್ತಾಗಿ ಯುವಕನೋರ್ವ ಝೋಂಬಿಯಂತೆ ನಿಂತಲೇ ತೂಗಾಡುತ್ತಿರುವ ವೀಡಿಯೋವೊಂದು ಭಾರಿ ವೈರಲ್ ಆಗಿದ್ದು, ಅಲ್ಲಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದನ್ನು ತೋರಿಸುತ್ತಿದೆ.

2 ಗಂಟೆಗೂ ಅಧಿಕ ಕಾಲ ಚಲನೆ ಇಲ್ಲದೇ ನಿಂತಲೇ ತೂಗಾಡಿದ ಡೆಲಿವರಿ ಬಾಯ್

ಹೌದು ಡೆಲಿವರಿ ಕೆಲಸ ಮಾಡುವ ಯುವಕನೋರ್ವ ಬೆನ್ನಿಗೆ ಬ್ಲಿಂಕಿಟ್ ಬ್ಯಾಗ್ ನೇತು ಹಾಕಿಕೊಂಡು ನಿಂತಲ್ಲೇ ತೂಗಾಡುತ್ತಿದ್ದಾನೆ. ಕೆಲ ವರದಿಗಳ ಪ್ರಕಾರ ಈತ ಸುಮಾರು 2 ಗಂಟೆಗಳ ಕಾಲ ಇದೇ ಸ್ಥಿತಿಯಲ್ಲಿದ್ದ ಎಂದು ವರದಿಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಇದ್ದ ಇಂತಹ ಝೋಂಬಿ ಡ್ರಗ್ ಭಾರತಕ್ಕೂ ಕಾಲಿಟ್ಟಿದೆಯಾ ಎಂಬ ಅನುಮಾನ ಹಲವರನ್ನು ಕಾಡಿದೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಬೆನ್ನಿಗೆ ಬ್ಲಿಂಕಿಟ್ ಬ್ಯಾಗ್ ನೇತು ಹಾಕಿರುವ ಯುವಕ ನಿಂತಲೇ ಮಂಕಾಗಿ ತೂಗಾಡುತ್ತಿದ್ದು, ಸುತ್ತಮುತ್ತಲಿನ ಚಟುವಟಿಕೆಗೆ ಆತನಿಂದ ಯಾವುದೇ ಸ್ಪಂದನೆ ಬಂದಿಲ್ಲ, ಈ ವೇಳೆ ಅಲ್ಲಿ ಸ್ಥಳೀಯರು ಸೇರಿದ್ದು, ಸುಮಾರು ಗಂಟೆಯಿಂದ ಒಂದೇ ರೀತಿ ನಿಂತಿರುವ ಆತನ ಸ್ಥಿತಿಯಿಂದ ಗೊಂದಲದ ಜೊತೆ ಗಾಬರಿಗೆ ಬಿದ್ದಿದ್ದಾರೆ. ಅನೇಕ ಬಳಕೆದಾರರು ಇದನ್ನು ಕ್ಸೈಲಾಜಿನ್‌ಗೆ( Xylazine)ಹೋಲಿಸಿದ್ದಾರೆ. 

ಏನಿದು ಜೊಂಬಿ ಡ್ರಗ್ (ಕ್ಸೈಲಾಜಿನ್)

ಕ್ಸೈಲಾಜಿನ್‌ ಎಂಬುದು ಹಲವಾರು ದೇಶಗಳಲ್ಲಿ, ವಿಶೇಷವಾಗಿ ಅಮೆರಿಕಾದಲ್ಲಿ ಮಾದಕವಸ್ತು ಒಪಿಯಾಯ್ಡ್‌ಗಳೊಂದಿಗೆ ಹೆಚ್ಚಾಗಿ ಬೆರೆಸಲಾಗುವ ಪ್ರಬಲ ಪಶುವೈದ್ಯಕೀಯ ನಿದ್ರಾಜನಕವಾಗಿದೆ. ಸಾಮಾನ್ಯವಾಗಿ ಜೊಂಬಿ ಡ್ರಗ್ ಎಂದು ಕರೆಯಲ್ಪಡುವ ಕ್ಸೈಲಾಜಿನ್ ಮೆದುಳಿನ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ, ಉಸಿರಾಟವನ್ನು ನಿಗ್ರಹಿಸುತ್ತದೆ ಮತ್ತು ಇದನ್ನು ಬಳಸುವ ವ್ಯಕ್ತಿಯನ್ನು ಟ್ರಾನ್ಸ್‌ನಂತೆ ಮುಂದೆ ಚಲಿಸಲಾಗದ ನಿಶ್ಚಲ ಸ್ಥಿತಿಗೆ ತಂದು ಬಿಡುತ್ತದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:  ಹೊಸ ಬೆಡ್ಶಿಟ್ ವಾಷ್ ಮಾಡದೇ ಬಳಸಿದವನಿಗೆ ಆಘಾತ: ಬೆಳಗಾಗುತ್ತಲೇ ನೀಲಿ ಬಣ್ಣಗೆ ತಿರುಗಿದ ದೇಹ: ಆಗಿದ್ದೇನು?

ಒಪಿಯಾಯ್ಡ್‌ಗಳೊಂದಿಗೆ ಸಂಯೋಜಿಸಿದಾಗ, ಈ ಔಷಧವು ಮನುಷ್ಯನ ಕೇಂದ್ರ ನರಮಂಡಲವನ್ನು ತೀವ್ರವಾಗಿ ಕುಗ್ಗಿಸುತ್ತದೆ ಎಂದು ವೈದ್ಯಕೀಯ ತಜ್ಞರು ಈ ಹಿಂದೆ ಎಚ್ಚರಿಸಿದ್ದಾರೆ. ಬಳಕೆದಾರರು ಪ್ರಜ್ಞೆಯಲ್ಲಿರುತ್ತಾರೆ. ತೋರಬಹುದು ಆದರೆ ಚಲಿಸಲು ಅಥವಾ ಪ್ರತಿಕ್ರಿಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದರ ಬಳಕೆ ಅಮೆರಿಕಾದಂತಹ ದೇಶದ ಕೆಲ ಭಾಗದಲ್ಲಿ ಸಾಮಾನ್ಯ ಎನಿಸಿದೆ.

ಇದನ್ನೂ ಓದಿ:  ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು

ಆದರೆ ಪಂಜಾಬ್‌ನ ನಡೆದ ಈ ಘಟನೆಯಲ್ಲಿ ಯುವಕ ಸೇವಿಸಿರುವ ವಸ್ತು ಕ್ಸಿಲಾಜಿನ್ ಎಂಬುದೇ ಎಂಬ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ವೈದ್ಯಕೀಯ ವರದಿ ಅಥವಾ ವಿಷಶಾಸ್ತ್ರದ ಸಂಶೋಧನೆಗಳನ್ನು ಬಿಡುಗಡೆ ಮಾಡಿಲ್ಲ. ಭಾರತದಲ್ಲಿ ಇದುವರೆಗೆ ಕ್ಸೈಲಾಜಿನ್ ದುರುಪಯೋಗದ ಪ್ರಕರಣಗಳು ವರದಿಯಾಗಿಲ್ಲ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್‌ನಿಂದ ಏಕಕಾಲಕ್ಕೆ ಟೇಕಾಫ್ ಆದ Mig-29ಕೆ ಫೈಟರ್ ಜೆಟ್: ವೀಡಿಯೋ ಭಾರಿ ವೈರಲ್
ತಾನೇ ನಟಸಿದ 'ದುರಂಧರ್-2' ಸಿನಿಮಾ ನೋಡಲೂ ಕಾಸಿಲ್ಲ; ಸಹನಟ ಬದ್ರುಲ್ ಇಸ್ಲಾಂ ಅಳಲು ನೀವೇ ಕೇಳಿ!