ಪುನಃ ಕೋವಿಡ್​ನಂಥ ಸ್ಥಿತಿ ಎಂದ ಪ್ರಧಾನಿ, ಲಾಕ್​ಡೌನ್​ ಬಗ್ಗೆ ಹೇಳಿದ್ರಾ? ಸಂಸತ್ತಿನಲ್ಲಿ ಮೋದಿ ಭಾಷಣವೇನು

Published : Mar 25, 2026, 06:17 PM IST
PM Narendra Modi

ಸಾರಾಂಶ

ಕೋವಿಡ್ ಸಂಕಷ್ಟದ ನೆನಪು ಮಾಸುವ ಮುನ್ನವೇ ಮಧ್ಯಪ್ರಾಚ್ಯದ ಯುದ್ಧ ಹೊಸ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಮಯದಂತೆ ಒಗ್ಗಟ್ಟು ಮತ್ತು ಸಂಯಮದಿಂದ ಇರಲು ಕರೆ ನೀಡಿದ್ದಾರೆ. ಅವರ ಈ ಹೇಳಿಕೆಯು ಮತ್ತೊಮ್ಮೆ ಲಾಕ್‌ಡೌನ್ ಆಗಬಹುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಮೊನ್ನೆ ಮೊನ್ನೆಯಷ್ಟೇ ಕೋವಿಡ್​ ಮಹಾಮಾರಿಯ ಆರನೆಯ ವರ್ಷದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಜಗತ್ತು ಕಂಡ, ಜನರಿಗೆ ಹಲವಾರು ಜೀವನದ ಸಂದೇಶವನ್ನು ನೀಡುವ ಜೊತೆ ಜೊತೆಗೆನೇ ಅಸಂಖ್ಯ ಜನರನ್ನು ಬಲಿ ಪಡೆದ ಮಹಾಮಾರಿಯನ್ನು ನೆನಪಿಸಿಕೊಂಡರೆ ಈಗಲೂ ಮೈ ಝುಂ ಎನ್ನುವಂಥ ಸ್ಥಿತಿ ಇದೆ. ಅದೆಷ್ಟೋ ಜನರು ಕೆಲಸ ಕಳೆದುಕೊಂಡರೆ, ಕೋವಿಡ್​ನಲ್ಲಿಯೇ ಸ್ವ ಉದ್ಯೋಗ ಮಾಡಿ ಅಲ್ಲಿಂದಲೇ ಉನ್ನತ ಸ್ಥಾನಕ್ಕೆ ಏರಿದವರೂ ಸಾಕಷ್ಟು ಮಂದಿ ಇದ್ದಾರೆ. ಸ್ವಚ್ಛತೆಯ ಬಗ್ಗೆ ಪಾಠ ಮಾಡುವುದರ ಜೊತೆಗೆನೇ ಜೀವನದಲ್ಲಿ ಇಂಥದ್ದೊಂದು ಭಯಾನಕ ಸ್ಥಿತಿ ಯಾವ ರೂಪದಲ್ಲಿಯಾದರೂ ಬರಬಹುದು ಎಂದು ಎಚ್ಚರಿಕೆಯ ಪಾಠವನ್ನೂ ಕಲಿಸಿದ ಕೋವಿಡ್​ ಕಾಲವದು.

ಯುದ್ಧದ ಭೀತಿ

ಅದರ ಭಯಾನಕ ನೋವು, ಆ ಕರಾಳ ದಿನಗಳು ನೆನಪಿನಾಳದಿಂದ ಮರೆಯಾಗುವ ಮೊದಲೇ ಇದೀಗ ಮತ್ತೊಂದು ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾಗಿದೆ. ಎಲ್ಲಾ ದೇಶಗಳೂ ಪರಸ್ಪರ ಒಂದಕ್ಕೊಂದು ಅವಲಂಬಿತವಾಗಿಯೇ ಇವೆ. ಭಾರತದ ಆಹಾರ ಸಾಮಗ್ರಿಗಳ ಮೇಲೆ ಹಲವಾರು ದೇಶಗಳು ಅವಲಂಬಿತವಾಗಿದ್ದರೆ, ಬೇರೆ ಬೇರೆ ದೇಶಗಳಿಂದ ಒಂದೊಂದು ಸಾಮಗ್ರಿಗಳಿಗೆ ಭಾರತ ಅವಲಂಬಿತವಾಗಿದ್ದು, ಅದರಲ್ಲಿ ಪೆಟ್ರೋಲ್​, ಎಲ್​ಪಿಜಿಯ ಬರೆ ಇದಾಗಲೇ ಶುರುವಾಗಿದೆ. ಸದ್ಯದ ಪರಿಸ್ಥಿತಿಗೆ ಬೇಕಾಗುವಷ್ಟು ಎಲ್​ಪಿಜಿ ವ್ಯವಸ್ಥೆ ಮಾಡಿಕೊಂಡಿದ್ದರೂ, ಒಂದಷ್ಟು ಮಂದಿ ಕಾಳಸಂತೆಕೋರರ ಹಾವಳಿಯಿಂದ ಅಕ್ರಮವಾಗಿ ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಕೃತಕ ಅಭಾವವೂ ಸೃಷ್ಟಿಯಾಗಿದೆ. ಆದರೆ ಯುದ್ಧ ಇನ್ನೂ ಮುಂದುವರೆದರೆ ನಿಜವಾಗಿಯೂ ಅಭಾವ ಎದುರಾಗುತ್ತದೆ.

ಲಾಕ್​ಡೌನ್​ ಬಗ್ಗೆ ಮಾತನಾಡಿದ್ರಾ?

ಇದರ ಬಗ್ಗೆ ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಮತ್ತೆ ಅದು ಜನರನ್ನು ಬೆಚ್ಚಿ ಬೀಳಿಸಿದೆ. ಕೋವಿಡ್​ ಸಮಯಲ್ಲಿ ಯಾವ ಸ್ಥಿತಿಯ ಪರಿಸ್ಥಿತಿ ಇತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ. ಆ ಸಮಯದಲ್ಲಿ ಜನರು ಎಲ್ಲರೂ ಒಗ್ಗಟ್ಟಾಗಿ ಸಂಯಮದಿಂದ ವರ್ತಿಸಿದರು. ಇದೀಗ ಮತ್ತೆ ಅಂಥದ್ದೇ ಸ್ಥಿತಿ ಉಂಟಾಗಿದೆ. ಎಲ್ಲರೂ ಪುನಃ ಒಗ್ಗಟ್ಟಾಗುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ. ತಾಳ್ಮೆ ಮತ್ತು ಸಂಯಮ ನಮ್ಮ ಶಕ್ತಿ. ಅದರಿಂದ ಎಲ್ಲದರಿಂದ ಮುಕ್ತಿ ಪಡೆಯಬೇಕಿದೆ ಎಂದಿದ್ದಾರೆ. ಆದರೆ ಪ್ರಧಾನಿ ಅವರು ಲಾಕ್​ಡೌನ್​ ಬಗ್ಗೆ ಮಾತನಾಡಿದ್ದು, ಮತ್ತೊಮ್ಮೆ ಲಾಕ್​ಡೌನ್​ ಆಗುವ ಸಾಧ್ಯತೆ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಬರುತ್ತಿವೆ!

ತಾಳ್ಮೆಯಿಂದ ಇರಿ

ನನಗೆ ಸಾಕಷ್ಟು ತಾಳ್ಮೆಯಿಂದ ಇರಬೇಕು ಎಂದಿರುವ ಪ್ರಧಾನಿ, ಇಂಥ ಸಮಯದಲ್ಲಿ ರಾಜಕೀಯ ದುರುದ್ದೇಶದಿಂದ ಕೆಟ್ಟ ಕೆಟ್ಟ ಪ್ರಚಾರ ಮಾಡುವವರು ಜೊತೆಗೆ ಇಂಥ ಪರಿಸ್ಥಿತಿಯ ಲಾಭ ಪಡೆದು ಅಪಪ್ರಚಾರ ಮಾಡುವುದು, ಜನರಲ್ಲಿ ಭಯ ಹುಟ್ಟಿಸುವವರ ಬಗ್ಗೆಯೂ ಜನರು ಜಾಗರೂಕರಾಗಿ ಇರಬೇಕು ಎಂದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Fuel Crisis: ದೇಶಾದ್ಯಂತ ಪೆಟ್ರೋಲ್, ಡೀಸೆಲ್‌ಗೆ ಹಾಹಾಕಾರ? ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ!
ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​: ರಾಜಕೀಯ ತಿರುವು ಪಡೆದ ಘಟನೆ