ಮೇಲಿಂದ ಮೇಲೆ ಗುಡ್ ನ್ಯೂಸ್, ಆರ್ಡರ್ ಮಾಡಿದ್ರೆ ಸಾಕು ಎಣ್ಣೆ ಬರುತ್ತೆ!

By Suvarna NewsFirst Published May 26, 2020, 4:49 PM IST
Highlights

ಕೊರೋನಾ ವೈರಸ್ ಲಾಕ್ ಡೌನ್/ಮನೆ ಬಾಗಿಲಿಗೆ ಮದ್ಯ/ ಜೊಮ್ಯಾಟೋದಿಂದ ಸೇವೆ/ ಗ್ರಾಹಕ ಬಾರ್ ಗೆ ಬರುವಂತೆ ಇಲ್ಲ/ ಅಸ್ಸಾಂನಲ್ಲಿ ಆರಂಭ

ನವದೆಹಲಿ(ಮೇ 26) ಮಹಾರಾಷ್ಟ್ರದ ಮಹಾ ವಿಕಾಸ್ ಸರ್ಕಾರ   ಕರೋನಾ ವೈರಸ್ ಲಾಕ್ ಡೌನ್ ಮುಗಿಯುವವರೆಗೆ ಮನೆ ಬಾಗಿಲಿಗೆ ಮದ್ಯ ವಿತರಣೆಯನ್ನು ಪ್ರಾರಂಭಿಸಲು ಮುಂದಾಗಿತ್ತು. ಇದಾದ ಮೇಲೆ ಜಾರ್ಖಂಡ್ ನಲ್ಲಿಯೂ ಮನೆ ಬಾಗಿಲಿಗೆ ಮದ್ಯ ಎನ್ನಲಾಗಿತ್ತು, ಇದೀಗ ಓರಿಸ್ಸಾದ ಸರದಿ.

ಆಹಾರ ಮತ್ತು ತಿನಿಸುಗಳ ಜತೆ ಇದೀಗ ಜೊಮ್ಯಾಟೋ ಭುವನೇಶ್ವರದಿಂದ ಆರಂಭಿಸಿ ಮನೆ ಬಾಗಿಲಿಗೆ ಮದ್ಯ ತಲುಪಿಸಲಿದೆ. ಭುವನೇಶ್ವರದ ನಂತರ ರೋರ್ಕೆಲಾ, ಬಾಲಾಸೋರ್, ಬಾಲಂಗೀರ್, ಸಂಬಾಲ್‌ಪುರ್, ಮತ್ತು ಕಟಕ್ ಗೆ ಜೊಮ್ಯಾಟೋ ಮನೆ ಬಾಗಿಲಿಗೆ ಮದ್ಯ ವಿತರಣೆಗೆ ಅವಕಾಶ ನೀಡಲಿದೆ. 

ಎಣ್ಣೆ ಅಂಗಡಿವರೆಗೆ ಬಿಡ್ತೀರಾ ಎಂದವನಿಗೆ ಸೋನು ಸೂದ್ ಕೊಟ್ಟ ರಿಯಾಕ್ಷನ್

ಈ ವಿಷಯವನ್ನು ಬಹಳ ಹೆಮ್ಮೆಯಿಂದ ಅನೌನ್ಸ್ ಮಾಡುತ್ತಿದ್ದೇವೆ. ಓರಿಸ್ಸಾದ ಜನರಿಗೆ ಆಹಾರ ಮತ್ತು ದಿನಸಿಯೊಂದಿಗೆ ಮದ್ಯ ಸಹ ಸಿಗಲಿದೆ ಎಂದು ಜೊಮ್ಯಾಟೋ ಉಪಾಧ್ಯಕ್ಷ ರಾಕೇಶ್ ರಾಜನ್ ಹೇಳಿದ್ದಾರೆ.

ಲಾಕ್ ಡೌನ್ ನಿಯಮಗಳನ್ನು ಪಾಲಿಸಿಕೊಂಡು ಬಂದಿರುವ ಕಂಪನಿ ಅಬಕಾರಿ ಇಲಾಖೆಯೊಂದಿಗೆ ಜತೆಗೂಡಿ ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಮದ್ಯ ಪಡೆದುಕೊಳ್ಳುವುದು ಹೇಗೆ? ಮದ್ಯ ಆರ್ಡರ್ ಮಾಡುವವರು ಸರ್ಕಾರದ ಮಾನ್ಯತೆ ಇರುವ ಐಡಿ ನೀಡಬೇಕು. ಇದು ಪರಿಶೀಲನೆ ಆದ ನಂತರವೇ ಮದ್ಯ ಗ್ರಾಹಕನಿಗೆ ಸಿಗಲಿದೆ.

ಜೊಮ್ಯಾಟೋ ಹೋಮ್ ಪೇಜ್ ಗೆ ತೆರಳಿದರೆ ಎಲ್ಲ ಮಾಃಇತಿ ಲಭ್ಯವಿದೆ. ಮೇ 21 ರಿಂದ ರಾಂಚಿಯಲ್ಲಿ ಮನೆ ಬಾಗಿಲಿಗೆ ಮದ್ಯ ಸೇವೆ ಆರಂಭವಾಗಿತ್ತು. ಡಿಲೆವರಿ ಮಾಡುವ ವ್ಯಕ್ತಿ ಸೋಶಿಯಲ್ ಡಿಸ್ಟಂಸಿಂಗ್, ಸಾನಿಟೈಸ್ ಸೇರಿದಂತೆ ಲಾಕ್ ಡೌನ್ ನಿಯಮ ಪಾಲಿಸಬೇಕು .
 

 

click me!