ಹುಟ್ಟಲಿರುವ ಮಗುವಿನ ಲಿಂಗ ಹೇಳಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ಯುಟ್ಯೂಬರ್

Published : May 23, 2024, 09:51 AM ISTUpdated : May 23, 2024, 10:07 AM IST
ಹುಟ್ಟಲಿರುವ ಮಗುವಿನ ಲಿಂಗ ಹೇಳಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ಯುಟ್ಯೂಬರ್

ಸಾರಾಂಶ

ಆಲಿಯಾ ದುಬೈನ ಆಸ್ಪತ್ರೆಯಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆಗೆ ಒಳಗಾಗುತ್ತಿರುವುದನ್ನು ನೋಡಬಹುದು. ಮೇ 20 ರಂದು ಎರಡನೇ ವಿಡಿಯೋ ಅಪ್ಲೋಡ್ ಮಾಡಲಾಗಿದೆ. 

ಚೆನ್ನೈ: ತಮಿಳಿನ ಖ್ಯಾತ ಯುಟ್ಯೂಬರ್ ಇರ್ಫಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಟ್ಟಲಿರುವ ಮಗುವಿನ ಲಿಂಗವನ್ನು ಬಹಿರಂಗಗೊಳಿಸಿದ್ದ, ಆರೋಗ್ಯ ಇಲಾಖೆ ಈ ಸಂಬಂಧ ನೋಟಿಸ್ ನೀಡಿದೆ. 1994 ರ ಪ್ರೀ-ಕನ್ಸೆಪ್ಶನ್ ಮತ್ತು ಪ್ರೀ-ನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆಕ್ಟ್  ಅಡಿಯಲ್ಲಿ ಭ್ರೂಣದ ಲಿಂಗ ಪತ್ತೆ ಮಾಡೋದು ಕಾನೂನು ಬಾಹಿರವಾಗಿದೆ. 

ಇರ್ಫಾನ್ ಪತ್ನಿ ಆಲಿಯಾ ಜೊತೆ ದುಬೈ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಆಲಿಯಾ ಭ್ರೂಣ ಲಿಂಗ ಪತ್ತೆಯ ಪರೀಕ್ಷೆಗೆ ಒಳಗಾಗಿದ್ದಾರೆ. ದುಬೈನಲ್ಲಿ ಭ್ರೂಣ ಲಿಂಗ ಪತ್ತೆಯ ಪರೀಕ್ಷೆಗೆ ಅವಕಾಶವಿದೆ. ದುಬೈನಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಇರ್ಫಾನ್ ತಮಗೆ ಹುಟ್ಟಲಿರುವ ಮಗುವಿನ ಲಿಂಗವನ್ನು ಘೋಷಿಸಿಕೊಂಡಿದ್ದಾರೆ.

ಈ ಸಂಬಂಧ ತಮ್ಮ ಯುಟ್ಯೂಬ್ ಪೇಜ್‌ನಲ್ಲಿ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇರ್ಫಾನ್‌ಗೆ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ವಿಡಿಯೋವನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ತಮಿಳುನಾಡಿನ ಸೈಬರ್ ಕ್ರೈಂ ವಿಭಾಗಕ್ಕೆ ಪತ್ರ ಬರೆದಿದೆ. 

ಮೇ 18 ರಂದು ಅಪ್ಲೋಡ್ ಮಾಡಲಾಗಿರುವ ಮೊದಲ ವಿಡಿಯೋದಲ್ಲಿ ಆಲಿಯಾ ದುಬೈನ ಆಸ್ಪತ್ರೆಯಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆಗೆ ಒಳಗಾಗುತ್ತಿರುವುದನ್ನು ನೋಡಬಹುದು. ಮೇ 20 ರಂದು ಎರಡನೇ ವಿಡಿಯೋ ಅಪ್ಲೋಡ್ ಮಾಡಲಾಗಿದೆ. 

ಮೊದಲ ವಿಡಿಯೋದಲ್ಲಿ ಏನಿದೆ?

ಮೊದಲ ವಿಡಿಯೋದಲ್ಲಿ ಆಲಿಯಾ ಪ್ರಸವಪೂರ್ವ ಲಿಂಗ ನಿರ್ಣಯ ಪರೀಕ್ಷೆಗೆ ಹೋಗುತ್ತಾರೆ. ಈ ವೇಳೆ ಮಾತನಾಡುವ ಇರ್ಫಾನ್, ಭಾರತದಲ್ಲಿ ಮೊದಲು ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆ ಕಾನೂನುಬದ್ಧವಾಗಿತ್ತು. 1993ರಲ್ಲಿ ನಾನು ಹುಟ್ಟುವ ಮೊದಲೇ ನನ್ನ ತಾಯಿಗೆ ಹೊಟ್ಟೆಯಲ್ಲಿರುವ ಮಗುವಿನ ಲಿಂಗ ಯಾವುದು ಅಂತ ಗೊತ್ತಿತ್ತು. ಆದರೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾದ ಹಿನ್ನೆಲೆ ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆ ನಿಷೇಧಿಸಲಾಯ್ತು ಎಂದು ಹೇಳುತ್ತಾನೆ.

ಬೇಕಂತಲೇ 211 ಜನರ ಜೊತೆ ಲೈಂಗಿಕ ಸಂಪರ್ಕ ಹೊಂದಿದ HIV ಸೋಂಕಿತೆ

ಎರಡನೇ ವಿಡಿಯೋದಲ್ಲಿ ಏನಿದೆ?

ಈ ವಿಡಿಯೋದಲ್ಲಿ ಇರ್ಫಾನ್ ತನ್ನ ಕುಟುಂಬಸ್ಥರು, ಕಿರುತೆರೆ ಕಲಾವಿದರು ಮತ್ತು ಆಪ್ತರ ಜೊತೆ ಚೆನ್ನೈನಲ್ಲಿ ಪಾರ್ಟಿ ಮಾಡೋದನ್ನು ಕಾಣಬಹುದಾಗಿದೆ. ಅತಿಥಿಗಳೆಲ್ಲರೂ ಪಿಂಕ್ ಮತ್ತು ನೀಲಿ ಬಣ್ಣದ ಧಿರಿಸು ಧರಿಸಿ ಬಂದಿರುತ್ತಾರೆ. ಪಿಂಕ್ ಅಂದ್ರೆ ಹೆಣ್ಣು, ನೀಲಿ ಅಂದ್ರೆ ಗಂಡು ಎಂದರ್ಥ. ಈ ವೇಳೆ ಇರ್ಫಾನ್ ಹುಟ್ಟುವ ಮಗು ಹೆಣ್ಣು ಎಂದು ಘೋಷಿಸುತ್ತಾನೆ.

ವಿಶ್ವದ ಮೊದಲ ತಲೆಕಸಿ; ದೇಹಕ್ಕೆ ರುಂಡ ಸೇರಿಸುವ ವಿಡಿಯೋ ನೋಡಿ ಶಾಕ್ ಆದ ಜನರು

ಈ ವಿಡಿಯೋಗೆ 20 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಫುಡ್ ಮತ್ತು ಟ್ರಾವೆಲ್ ವ್ಲಾಗ್ ಮಾಡುವ ಇರ್ಫಾನ್‌ಗೆ ಯುಟ್ಯೂಬ್‌ನಲ್ಲಿ 40 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!