
ನವದೆಹಲಿ/ಪಾಟ್ನಾ: 'ಕೈಯಲ್ಲಿ ಕಾಸಿಲ್ಲದ ಇವನಿಗೆ ಯಾರು ಹೆಣ್ಣು ಕೊಡ್ತಾರೆ? ನಾಳೆ ಸಂಸಾರ ಹೇಗೆ ನಡೆಸ್ತಾನೆ?' ಎಂದು ಆಡಿಕೊಂಡವರ ಎದುರೇ ಯುವಕನೊಬ್ಬ ತನ್ನ ಕಠಿಣ ಪರಿಶ್ರಮದಿಂದ ಇಡೀ ಊರೇ ನಿಬ್ಬೆರಗಾಗುವಂತೆ ಗೆದ್ದು ತೋರಿಸಿದ್ದಾನೆ. ಬಿಹಾರ ಮೂಲದ ಸಣ್ಣ ಯೂಟ್ಯೂಬರ್ ಒಬ್ಬ, ತನ್ನ ನವವಿವಾಹಿತ ಪತ್ನಿಗೆ ‘ಮುಖ ತೋರಿಸುವ ಶಾಸ್ತ್ರ’ಕ್ಕೆ (ಮುಹ್ ದಿಖಾಯಿ) ಬರೋಬ್ಬರಿ 2 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಐಫೋನ್ ಗಿಫ್ಟ್ ನೀಡಿ ಎಲ್ಲರ ಹುಬ್ಬೇರಿಸಿದ್ದಾನೆ. ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ (ಟ್ವಿಟರ್) ಸಖತ್ ವೈರಲ್ ಆಗಿದೆ.
ವರದಿಯ ಪ್ರಕಾರ, ಈ ಯುವಕ ಬಿಹಾರದ ಹಳ್ಳಿಯೊಂದರ ನಿವಾಸಿ. ಆರಂಭದಲ್ಲಿ ಯಾವುದೇ ಸ್ಥಿರ ಆದಾಯವಿಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ, ಸಂಬಂಧಿಕರು ಹಾಗೂ ಊರಿನ ಜನರು 'ಇವನಿಗೆ ಮದುವೆ ಮಾಡಿಕೊಳ್ಳಲು ಯೋಗ್ಯತೆಯಿಲ್ಲ, ಹೆಣ್ಣು ಯಾರು ಕೊಡುತ್ತಾರೆ?' ಎಂದು ಹೀಯಾಳಿಸುತ್ತಿದ್ದರಂತೆ. ಆದರೆ ಆ ಮಾತುಗಳಿಗೆ ಕುಗ್ಗದ ಆತ, ಸಾಮಾಜಿಕ ಜಾಲತಾಣವನ್ನೇ ತನ್ನ ಅಸ್ತ್ರವನ್ನಾಗಿ ಮಾಡಿಕೊಂಡ.
ಯೂಟ್ಯೂಬ್‌ನಲ್ಲಿ ಸಣ್ಣದಾಗಿ ವಿಡಿಯೋ ಮಾಡಲು ಪ್ರಾರಂಭಿಸಿದ ಆತ, ಕ್ರಮೇಣ ಪ್ರತಿ ತಿಂಗಳು ₹40,000 ದಿಂದ ₹50,000 ವರೆಗೆ ಸಂಪಾದಿಸಲು ಶುರುಮಾಡಿದ. ತನ್ನ ಬುದ್ಧಿವಂತಿಕೆ ಹಾಗೂ ನಿರಂತರ ಪರಿಶ್ರಮದಿಂದ ಆರ್ಥಿಕವಾಗಿ ಸದೃಢನಾಗಿ ಬೆಳೆದು ನಿಂತ.
ಎರಡು ತಿಂಗಳ ಹಿಂದಷ್ಟೇ ಈ ಯುವಕನ ಮದುವೆ ಯಾವುದೇ ಕೊರತೆಯಾಗದಂತೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನೆರವೇರಿತು. ಮದುವೆಯ ನಂತರ ಪತ್ನಿಗೆ ಸರ್‌ಪ್ರೈಸ್ ನೀಡಲು ಬಯಸಿದ ಆತ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಅನ್ನು ಗಿಫ್ಟ್ ಆಗಿ ನೀಡಿದ್ದಾನೆ. ಅಷ್ಟೇ ಅಲ್ಲದೆ, ತನಗೊಂದು ಮತ್ತು ಪತ್ನಿಗೊಂದು ಸೇರಿ ಬರೋಬ್ಬರಿ ₹4 ಲಕ್ಷ ಮೌಲ್ಯದ ಎರಡು ಹೊಸ ಐಫೋನ್‌ಗಳನ್ನು ಖರೀದಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದಾನೆ.
व्यक्ति बिहार का रहने वाला है, 2 महीने पहले नई-नई शादी हुई, पत्नी को मुंह दिखाई पर 2 लाख रुपए का iPhone 17 Pro Max गिफ्ट दिया है।
लड़का एक छोटा-मोटा youtuber है, युटुब पर लगभग महीने की एक 40-50 हज़ार अर्निंग कर देता है, अब इसके पास अच्छे खासे पैसे हैं।
लोग पहले ताना मारते थे,… pic.twitter.com/1bbAVyF6ej— BHUMI (@Bhumika_2024) September 15, 2026
ತನ್ನ ಈ ಯಶಸ್ಸಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಆತ, 'ಇದು ಸಾಮಾಜಿಕ ಜಾಲತಾಣ ಮತ್ತು ಕಠಿಣ ಪರಿಶ್ರಮದ ಶಕ್ತಿ. ಊರಿನವರು, ಸಂಬಂಧಿಕರು ಆಡಿಕೊಳ್ಳುವ ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ನಮ್ಮ ಪರಿಶ್ರಮ ಹೇಗಿರಬೇಕೆಂದರೆ ನಮ್ಮ ಗೆಲುವನ್ನು ನೋಡಿ ಹಂಗಿಸಿದವರೇ ನಿಬ್ಬೆರಗಾಗಬೇಕು' ಎಂದು ಹೇಳಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈತನ ಕಥೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕನ ಪರಿಶ್ರಮವನ್ನು ಕೊಂಡಾಡುತ್ತಿದ್ದಾರೆ. 'ಸ್ಮಾರ್ಟ್ ವರ್ಕ್ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಪರಿಸ್ಥಿತಿಯನ್ನೂ ಬದಲಾಯಿಸಬಹುದು ಎಂಬುದಕ್ಕೆ ಈ ಯುವಕನೇ ಸಾಕ್ಷಿ' ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ