
ನವದೆಹಲಿ (ಸೆ.15) ಬ್ರಿಕ್ಸ್ ಶೃಂಗಸಭೆಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದ್ದು ಮಾತ್ರವಲ್ಲ ತನ್ನ ರಣತಂತ್ರಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಹೆಣೆಯುವಲ್ಲಿ ಯಶಸ್ವಿಯಾಗಿದೆ. ಪೆಹಲ್ಗಾಂ ಮೇಲೆ ನಡೆದ ದಾಳಿಯನ್ನು ಇರಾನ್ ಸೇರಿದಂತೆ ಎಲ್ಲಾ ಬ್ರಿಕ್ಸ್ ರಾಷ್ಟ್ರಗಳು ಖಂಡಿಸಿ ನಿರ್ಣಯಕ್ಕೆ ಸಹಿ ಹಾಕಿದೆ. ಈ ಮೂಲಕ ಇರಾನ್, ಸೌದಿ ಸೇರಿದಂತೆ ಪ್ರಮುಖ ರಾಷ್ಟ್ರಗಳು ಭಾರತದ ಪರವಾಗಿದೆ ಅನ್ನೋ ಸಂದೇಶ ರವಾನೆಯಾಗಿದೆ. ಬ್ರಿಕ್ಸ್ ಶೃಂಗಸಭೆ ಬೆನ್ನಲ್ಲೇ ಪಾಕಿಸ್ತಾನದ ಪರಿಸ್ಥಿತಿ ಶೋಚನೀಯವಾಗಿದೆ. ಸೌದಿ, ಟರ್ಕಿ, ಪಾಕಿಸ್ತಾನ ಸೇರಿ ಪ್ರಮುಖ ರಾಷ್ಟ್ರಗಳು ಇತ್ತೀಚೆಗೆ ಮಾಡಿಕೊಂಡ ಮೆಕ್ಕಾ ಪ್ಯಾಕ್ಟ್ (ಡೆಫೆನ್ಸ್ ಒಪ್ಪಂದ) ಮಕಾಡೆ ಮಲಗಿದೆ. ಇದೀಗ ಪಾಕಿಸ್ತಾನದಿಂದ ಏನೂ ಆಗಲ್ಲ ಎಂದು ಅರಿತ ಸೌದಿ ಅರೆಬಿಯಾ ನೇರವಾಗಿ ಇಸ್ರೇಲ್ ಸಹಾಯ ಕೇಳಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಇತ್ತೀಚೆಗೆ ಸೌದಿ ಅರೆಬಿಯಾ, ಟರ್ಕಿ ಸೇರಿ ಪ್ರಮುಖ ಮುಸ್ಲಿಂ ರಾಷ್ಟ್ರಗಳ ಜೊತೆ ಮೆಕ್ಕಾ ಪ್ಯಾಕ್ಟ್ ಮಾಡಿಕೊಂಡಿತು. ಈ ಮೂಲಕ ಮೆಕ್ಕಾ ಪ್ಯಾಕ್ಟ್ ರಾಷ್ಟ್ರಗಳ ಮೇಲೆ ದಾಳಿ ನಡೆದರೆ ಅದು ಎಲ್ಲರ ಮೇಲೆ ನಡೆದ ದಾಳಿ ಎಂದರ್ಥ. ಹೀಗಾಗಿ ಮೆಕ್ಕಾ ಪ್ಯಾಕ್ಟ್ ರಾಷ್ಟ್ರಗಳು ನೆರವಿಗೆ ಬರಬೇಕು ಅನ್ನೋದು ಮೂಲ ಉದ್ದೇಶ. ಇದನ್ನು ಪಾಕಿಸ್ತಾನ ಆಸಕ್ತಿ ವಹಿಸಿ ಮಾಡಿತ್ತು. ಆದರೆ ಕಳೆದ ಕೆಲ ದಿನಗಳಿಂದ ಹೌಥಿಸ್ ಬಂಡುಕೋರರು ಸೌದಿ ಮೇಲೆ ದಾಳಿ ಮಾಡುತ್ತಿದ್ದರು. ಪಾಕಿಸ್ತಾನ ಏನೂ ಮಾಡದೇ ಕಣ್ಮುಚ್ಚಿ ಕುಳಿತಿತ್ತು. ಇದೇ ವೇಳೆ ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯೂ ಸೌದಿ ಮೇಲೆ ಪರಿಣಾಮ ಬೀರಿದೆ. ಶೃಂಗಸಭೆ ಮುಗಿಯುತ್ತಿದ್ದಂತೆ ಸೌದಿ ಅರೆಬಿಯಾ ದೇಶ, ಪಾಕಿಸ್ತಾನದಿಂದ ದೂರ ಸರಿದಿದೆ ಎಂದು ವರದಿಯಾಗಿದೆ.
ಹೌಥಿಸಿ ಬಂಡುಕೋರರು ಬಗ್ಗು ಬಡಿಯಲು, ಸೌದಿ ಅರೆಬಿಯಾವನ್ನು ಸುರಕ್ಷಿತಗೊಳಿಸಲು ಪಾಕಿಸ್ತಾನ ನೆರವುನೀಡುವುದಿಲ್ಲ ಅನ್ನೋದು ಸಾಬೀತಾಗಿದೆ. ಹೀಗಾಗಿ ಭಾರತದ ಮಿತ್ರ ಇಸ್ರೇಲ್ ನೆರವನ್ನು ಕೇಳಿದೆ. ಅಮೆರಿಕ ಮೂಲಕ ಇಸ್ರೇಲ್ ಜೊತೆ ಮಾತುಕತೆಗಳು ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಪಾಕಿಸ್ತಾನ ಜೊತೆ ಸೇರಿದ್ದ ಸೌದಿ ಅರೇಬಿಯಾ ಬ್ರಿಕ್ಸ್ ಸಭೆ ಬಳಿಕ ಅಷ್ಟೇ ವೇಗದಲ್ಲಿ ಇಸ್ರೇಲ್ ಜೊತೆ ಸಖ್ಯ ಬೆಳೆಸಿ ದೇಶ ಸುರಕ್ಷಿತ ಮಾಡಿಕೊಳ್ಳಲು ಮುಂದಾಗಿದೆ.
ಇಸ್ರೇಲ್ ಹಾಗೂ ಭಾರತ ಸಂಬಂಧ ಉತ್ತಮವಾಗಿದೆ. ಇನ್ನು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದೆ. ಪಾಕಿಸ್ತಾನವನ್ನು ಅಮೆರಿಕ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಇನ್ನು ಪಾಕಿಸ್ತಾನದ ಜೊತೆ ಸಖ್ಯ ಬೆಳೆಸಿದ ರಾಷ್ಟ್ರಗಳೆಲ್ಲವು ಸಂಕಷ್ಟದಲ್ಲಿದೆ.ಕೊನೆಯದಾಗಿ ಮೆಕ್ಕಾ ಪ್ಯಾಕ್ಟ್ ಉಳಿದಿತ್ತು. ಇದೀಗ ಇದರಿಂದಲೂ ಸೌದಿ ಅರೆಬಿಯಾ ಒಂದು ಕಾಲು ಹೊರಗಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ