ನವರಾತ್ರಿಯಲ್ಲಿ ಗರ್ಬಾ ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು: ವಿಡಿಯೋ ವೈರಲ್

Published : Oct 03, 2022, 02:30 PM ISTUpdated : Oct 03, 2022, 02:32 PM IST
ನವರಾತ್ರಿಯಲ್ಲಿ ಗರ್ಬಾ ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು: ವಿಡಿಯೋ ವೈರಲ್

ಸಾರಾಂಶ

ನವರಾತ್ರಿಯ ವೇಳೆ ಗರ್ಬಾ ನೃತ್ಯ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.

ಅಹ್ಮದಾಬಾದ್: ನವರಾತ್ರಿಯ ವೇಳೆ ಗರ್ಬಾ ನೃತ್ಯ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಯುವಕನೋರ್ವ ನವರಾತ್ರಿಯ ಹಾಡುಗಳಿಗೆ ನೃತ್ಯ ಮಾಡುತ್ತಿದ್ದ. ಇದನ್ನು ಆತನ ಸ್ನೇಹಿತರು ವಿಡಿಯೋ ಮಾಡುತ್ತಿದ್ದರು. ಗರ್ಬಾ ನೃತ್ಯ ಮಾಡುತ್ತಾ ಎರಡು ಮೂರು ಸುತ್ತು ಬಂದ ಯುವಕ ನಂತರ ಅದೇ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ವಿರೇಂದ್ರ ಸಿಂಗ್ ರಮೇಶ್ ಭಾಯ್ ರಾಜ್‌ಪುತ್ ಎಂದು ಗುರುತಿಸಲಾಗಿದೆ.

ಕೂಡಲೇ ನೃತ್ಯ (Dance) ಮಾಡುತ್ತಿದ್ದವರೆಲ್ಲಾ ಯುವಕ ಬಿದ್ದ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಲ್ಲದೇ ಆ ಯುವಕನನ್ನು ಮೇಲೆಳಿಸಲು ಯತ್ನಿಸಿದ್ದಾರೆ. ಆದರೆ ಆತ ಮೇಲೆಳುವ ಯಾವ ಲಕ್ಷಣಗಳು ಕಂಡು ಬಂದಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದೆ. ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

 

ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಗರ್ಬಾ ನೃತ್ಯ ಮಾಡುತ್ತಿದ್ದ ವೇಳೆ ಯುವಕನೋರ್ವ ಮೃತಪಟ್ಟಿದ್ದಾನೆ. ತಾರಪುರದಲ್ಲಿರುವ ಶಿವಶಕ್ತಿ ಸೊಸೈಟಿ ಈ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಯುವಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ವಿಳಂಬವಾಗಿತ್ತು. ಹೃದಯಘಾತದಿಂದ (Heart attack) ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಯೋಧ ಸಾವು

ಮೃತ ವೀರೇಂದ್ರ, ಗುಜರಾತ್‌ನ (Gujarat) ಮೊರಾಜ್ ಗ್ರಾಮದ ಶಾಲೆಯೊಂದರ ಪ್ರಾಂಶುಪಾಲರ ಕಿರಿಯ ಪುತ್ರ ಎಂದು ತಿಳಿದು ಬಂದಿದೆ. ಕೆಲ ದಿನಗಳಿಂದ ಎಳೆ ಪ್ರಾಯದ ಯುಕರು ಹೀಗೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಹಲವು ಘಟನೆಗಳು ವರದಿ ಆಗುತ್ತಿವೆ.

 Hassan: ನಿರಂತರ ಮಳೆಯ ಎಫೆಕ್ಟ್: ಮನೆ ಗೋಡೆ ಕುಸಿದು ಬಾಲಕ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana