
ಸ್ವಂತದೊಂದು ಗಾಡಿ ಕೊಳ್ಳಬೇಕು ಎಂಬುದು ಬಹುತೇಕರ ಕನಸು. ಅದರಲ್ಲೂ ತಮ್ಮಿಷ್ಟದ ಸ್ಪೋರ್ಟ್ಸ್ ಬೈಕ್ ಖರೀದಿಸಬೇಕು ಎಂಬುದು ಹರೆಯದ ಬಹುತೇಕ ಹುಡುಗರ ಆಸೆ, ಈ ಆಸೆಯನ್ನು ತೆಲಂಗಾಣದ ತರುಣನೋರ್ವ ಈಡೇರಿಸಿಕೊಂಡಿದ್ದಾನೆ. ಅದೂ ವಿಭಿನ್ನವಾಗಿ ಹಣ ಕೂಡಿಸುವ ಮೂಲಕ. ಕೇವಲ ಒಂದು ರೂಪಾಯಿ ನಾಣ್ಯಗಳನ್ನು ಕೂಡಿಸಿ ಈತ 2.85 ಲಕ್ಷ ಮೌಲ್ಯದ ಕೆಟಿಎಂ ಸ್ಪೋಟ್ಸ್ ಬೈಕ್ ಖರೀದಿಸಿದ್ದು, ಈ ಮೂಲಕ ತನ್ನ ಬಹುಕಾಲದ ಕನಸನ್ನು ಈ ತರುಣ ಈಡೇರಿಸಿಕೊಂಡಿದ್ದಾನೆ.
ವೆಂಕಟೇಶ್ (Venkatesh) ಎಂಬಾತನೇ ಹೀಗೆ ಬರೀ ಒಂದು ರೂಪಾಯಿ ನಾಣ್ಯಗಳನ್ನು ಕೂಡಿಟ್ಟು ಬೈಕ್ ಖರೀದಿಸಿದ ಯುವಕ. ತೆಲಂಗಾಣದ (Telangana) ಮಂಚೆರಿಯಲ್ ಜಿಲ್ಲೆಯ (Mancherial district) ರಾಮಕೃಷ್ಣಪುರದ ತಾರಕರಾಮ ಕಾಲೋನಿ (Tarakarama Colony) ನಿವಾಸಿಯಾಗಿರುವ ವೆಂಕಟೇಶ್ ಪ್ರಸ್ತುತ ಪಾಲಿಟೆಕ್ನಿಕ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಾನೆ. ಈ ಬೈಕ್ ಖರೀದಿಗಾಗಿ ಈತ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿ ನಾಣ್ಯಗಳನ್ನು ತುಂಬಿಸಿ ತಂದಿದ್ದ. ತನ್ನ ಸ್ವಂತ ಹಣದಿಂದ ತನ್ನಿಷ್ಟದ ಸ್ಪೋರ್ಟ್ಸ್ ಬೈಕ್ ಖರೀದಿಸಿ ತನ್ನೂರಲ್ಲಿ ಸುತ್ತಾಡಬೇಕು ಎಂಬುದು ವೆಂಕಟೇಶ್‌ನ ಬಹುಕಾಲದ ಕನಸಾಗಿತ್ತು.
ಹಾಗೆಯೇ ಇತ್ತ ಒಂದು ದಿನ ಮುಂಜಾನೆ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿ ಕಾಯಿನ್‌ಗಳನ್ನು ತುಂಬಿಕೊಂಡು ಕೆಟಿಎಂ ಶೋ ರೂಮ್‌ಗೆ ತೆರಳಿ ಅಲ್ಲಿ ಬೈಕ್ ಖರೀದಿಸಲು ಬಂದಿರುವುದಾಗಿ ಹೇಳಿದ್ದಾನೆ. ಆದರೆ ಆರಂಭದಲ್ಲಿ ಶೋ ರೂಮ್‌ನವರು ಇಷ್ಟೊಂದು ಮೊತ್ತದ ಹಣವನ್ನು ಕೇವಲ ಬರೀ ನಾಣ್ಯಗಳಲ್ಲಿ ಪಡೆಯಲು ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಈತ ಅವರ ಮನವೊಲಿಸಿದ್ದು, ಅವರು ಈ ಚಿಲ್ಲರೆ ರೂಪದಲ್ಲಿ 2.85 ಲಕ್ಷ ಹಣವನ್ನು ಪಡೆದು ಆತನ ಬಹುದಿನ ಕನಸು ಕೆಟಿಎಂ ಬೈಕ್ ಖರೀದಿಸಲು ನೆರವಾಗಿದ್ದಾರೆ.
ಇತ್ತ ಶೋ ರೂಮ್‌ನವರಿಗೆ ಒಂದು ರೂಪಾಯಿ ನಾಣ್ಯದ ರೂಪದಲ್ಲಿದ್ದ 2.85 ಲಕ್ಷ ರೂಪಾಯಿಯನ್ನು ಲೆಕ್ಕ ಮಾಡಲು ಬರೋಬ್ಬರಿ ಅರ್ಧ ದಿನವೇ ಹಿಡಿದಿದೆ. ಇಷ್ಟೊಂದು ಮೊತ್ತದ ನಾಣ್ಯವನ್ನು ಎಣಿಸುವುದು ಅವರಿಗೆ ಕಷ್ಟವೆನಿಸಿದರೂ ಶೋ ರೂಮ್‌ನವರು ಅದರ ಹಿಂದಿರುವ ಈ ತರುಣನ ಶ್ರಮ ಹಾಗೂ ಬೈಕ್ ಮೇಲಿರುವ ಪ್ರೀತಿಯನ್ನು ನೋಡಿ ಈ ಕಾಯಿನ್‌ಗಳನ್ನು ಎಣಿಸಿದ್ದು, ನಂತರ ಯುವಕನಿಗೆ ಬೈಕ್ ಹಸ್ತಾಂತರಿಸಿದ್ದಾರೆ.
2022 KTM RC390 ಭಾರತದಲ್ಲಿ ಲಾಂಚ್: ಬೆಲೆ ಎಷ್ಟು ನೋಡಿ
1.5 ಲಕ್ಷ ರೂ ಮೌಲ್ಯ ನಾಣ್ಯ ಪಾವತಿಸಿ ಹೊಸ ಮೋಟಾರ್ ಸೈಕಲ್ ಖರೀದಿಸಿದ ಪಶ್ಚಿಮ ಬಂಗಾಳದ ವ್ಯಾಪಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ