ಹೀಗೂ ಚಡ್ಡಿ ಹಾಕ್ಬಹುದು... ಚಡ್ಡಿಯೊಳಗೆ ತೂರಿ ಬಂದ ಹುಡುಗ... ವಿಡಿಯೋ ನೋಡಿ

Suvarna News   | Asianet News
Published : Dec 29, 2021, 09:27 PM ISTUpdated : Dec 29, 2021, 09:30 PM IST
ಹೀಗೂ ಚಡ್ಡಿ ಹಾಕ್ಬಹುದು... ಚಡ್ಡಿಯೊಳಗೆ ತೂರಿ ಬಂದ ಹುಡುಗ... ವಿಡಿಯೋ ನೋಡಿ

ಸಾರಾಂಶ

ಹಾರಿ ಬಂದು ಚಡ್ಡಿ ಹಾಕಿಸಿಕೊಂಡ ಯುವಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಇಂದು ಮನೋರಂಜನೆಯ ವಿಡಿಯೋಗಳಿಗೆ ಬರವಿಲ್ಲ. ಪ್ರತಿಯೊಂದು ಹೊಸತನು ಪ್ರಯತ್ನಿಸುವ ಯುವ ಸಮೂಹವಿಂದು ಏನೇನೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದು, ಜನರಿಗೆ ಮನೋರಂಜನೆ ಉಣ ಬಡಿಸುತ್ತಿದ್ದಾರೆ. ಇಲ್ಲಿ ನಾವು ತೋರಿಸುತ್ತಿರುವ ವಿಡಿಯೋವೊಂದು ಕೂಡ ಅದೇ ರೀತಿ ಇದೆ.  ಏನೋ ಸಾಹಸ ಮಾಡಲು ಹೊರಟಿರುವ ಮೂವರು ಹುಡುಗರು ಈ ವಿಡಿಯೋದಲ್ಲಿ ಚಡ್ಡಿಯನ್ನು ಹೀಗೂ ಹಾಕಬಹುದು ಎಂದು ತೋರಿಸುತ್ತಿದ್ದಾರೆ. 

ಎರಡು ಹುಡುಗರು ಚಡ್ಡಿಯನ್ನು ಆಚೆ ಈಚೆ ಹಿಡಿದು ನಿಂತಿದ್ದು ಈ ವೇಳೆ ದೂರದಲ್ಲಿ ನಿಂತಿರುವ ಹುಡುಗನೊಬ್ಬ ಓಡಿ ಬಂದು ಒಂದು ಪಲ್ಟಿ ಹೊಡೆದು ನೇರವಾಗಿ ಚಡ್ಡಿಯೊಳಗೆ ತೂರಿ ಬರುತ್ತಾನೆ. ಚಡ್ಡಿಯೂ ಸರಿಯಾಗಿ ಆತನ ಸೊಂಟದಲ್ಲಿ ನಿಲ್ಲುತ್ತದೆ. ಈ ವಿಡಿಯೋವನ್ನು ಬಲ್ವಂತ್ ಸಿಂಗ್ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್  ಖಾತೆಯಿಂದ ಪೋಸ್ಟ್‌ ಮಾಡಿದ್ದಾರೆ. ಡಿಸೆಂಬರ್ 16 ರಂದು ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಇದು ನೋಡುಗರಲ್ಲಿ ನಗು ಮೂಡಿಸುತ್ತಿದೆ.  ಆದರೆ ಈ ವಿಡಿಯೋದಲ್ಲಿರುವ ಹುಡುಗರು ಯಾರು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

 

ಕೆಲದಿನಗಳ ಹಿಂದೆ ವ್ಯಕ್ತಿಯೊಬ್ಬ ಟೊಮೆಟೋ ಕತ್ತರಿಸಲು ಕಿಟ್‌ಕ್ಯಾಟ್‌ ಚಾಕೋಲೇಟ್‌ನ ಬಾರನ್ನು ಹರಿತಗೊಳಿಸಿ ಟೊಮೆಟೋ ಕತ್ತರಿಸಿದ ವಿಡಿಯೋ ವೈರಲ್ ಆಗಿತ್ತು. ಟೊಮೆಟೋವನ್ನು ಸಾಮಾನ್ಯವಾಗಿ ನಾವು ಚಾಕುವಿನಲ್ಲಿ ಕತ್ತರಿಸುವುದು ಸಾಮಾನ್ಯ ಆದರೆ ಇಲ್ಲೊಬ್ಬ ಟೊಮೆಟೋ ಕತ್ತರಿಸಲು ಬಳಸಿದ ಆಯುಧ ನೋಡಿದರೆ ನೀವು ಗಾಬರಿಯಾಗುತ್ತೀರಿ. ಇದರಲ್ಲಿ ವ್ಯಕ್ತಿಯೊಬ್ಬ ಟೊಮೆಟೋ ಕತ್ತರಿಸುವ ಸಲುವಾಗಿ ಬಳಸಿದ್ದು ಕಿಟ್‌ಕ್ಯಾಟ್‌ (KitKat)  ಚಾಕೋಲೇಟ್‌ ಬಾರ್‌. ವಿಚಿತ್ರವದರೂ ಇದು ಸತ್ಯ. ಚಾಕೋಲೇಟ್‌ ಬಾರನ್ನು, ಕತ್ತಿಯನ್ನು ಹರಿತಗೊಳಿಸಲು ನಾವು ಹೇಗೆ ಸಾಣೆ ಹಿಡಿಯುತ್ತೇವೆಯೋ ಹಾಗೆ ಈತ ಚಾಕೋಲೇಟ್‌ ಬಾರ್‌ನ್ನು ಗ್ರಾನೈಟ್‌ನಂತಹ ತೆಳ್ಳನೆಯ ವಸ್ತುವಿಗೆ ಉಜ್ಜಿ ಸಾಣೆ ಹಿಡಿಯುತ್ತಾನೆ. ಈ ವೇಳೆ ಚಾಕೋಲೇಟ್‌ನ ಒಂದು ಭಾಗ ತೆಳ್ಳಗಾಗಿ ಚಾಕುವಿನ ಬಾಯಿಯಂತಾಗುತ್ತದೆ. ನಂತರ ಆತ ಅದರಲ್ಲೇ ಟೊಮೆಟೋವನ್ನು ಕತ್ತರಿಸುವುದರೊಂದಿಗೆ ಈ ವಿಡಿಯೋ ಮುಕ್ತಾಯವಾಗುತ್ತದೆ.

ಚಂದನ್ ಶೆಟ್ಟಿ ಚಡ್ಡಿ ಹಾಡಿಗೆ ಮಿಲಿಯನ್ ಹಿಟ್ಸ್

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಹೇರ್‌ ಬ್ಯಾಂಡ್‌ನಂತೆ ಹಾವನ್ನು ಸುತ್ತಿಕೊಂಡು ಶಾಪಿಂಗ್‌ ಮಾಲ್‌ನಲ್ಲಿ ಶಾಪಿಂಗ್‌ ಮಾಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಪ್ರಾಣಿಗಳು ಪಕ್ಷಿಗಳು, ಸರೀಸೃಪ ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಕೆಲವು ವಿಡಿಯೋಗಳಿಗೆ ಅಯ್ಯೋ ಎಂದು ನೀವು ಉದ್ಘರಿಸುವಂತಿದ್ದರೆ ಮತ್ತೆ ಕೆಲವು  ವಿಡಿಯೋಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಆದರೆ ನಾವು ಈಗ ನಿಮಗೆ ತೋರಿಸಲು ಹೊರಟಿರುವ ವಿಡಿಯೋ ನಿಮ್ಮ ನಿಮ್ಮ ಕಣ್ಣುಗಳನ್ನು ತಿರುಗಿವಂತೆ ಮಾಡುವುದು ಗ್ಯಾರಂಟಿ. ಹಾವು (snake) ಕಂಡಾಗ ಸಾಮಾನ್ಯವಾಗಿ ನಾವೆಲ್ಲರೂ ಒಂದೋ ಅದನ್ನು ಓಡಿಸಲು ಪ್ರಯತ್ನಿಸುತ್ತೇವೆ ಅಥವಾ ನಾವೇ ಓಡಲು ಆರಂಭಿಸುತ್ತೇವೆ. ಆದರೆ ಇಲ್ಲೊಬ್ಬಳು ತಲೆಗೆ ಹಾವನ್ನೇ ಹೇರ್‌ ಬ್ಯಾಂಡ್  ರೀತಿ ಸುತ್ತಿಕೊಂಡು ಶಾಪಿಂಗ್‌ ಬಂದಿದ್ದು, ಎಲ್ಲರನ್ನೂ ಗಾಬರಿಗೆ ನೂಕಿದ್ದಾಳೆ. 

ಸೆ.17ಕ್ಕೆ ತೆರೆ ಮೇಲೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ 

ಶಾಪಿಂಗ್ ಮಾಲ್ (shopping mall) ಒಳಗಿನ ವಿಡಿಯೋ ಇದಾಗಿದ್ದು, ಶಾಪಿಂಗ್‌ ಬಂದ ಮಹಿಳೆಯೊಬ್ಬಳು ತಲೆಗೆ ಹೇರ್‌ ಬ್ಯಾಂಡ್‌ ರೀತಿ ಹಾವನ್ನೇ ಬಳಸಿ ಕೂದಲನ್ನು ಕಟ್ಟಿದ್ದು, ಹೀಗೆಯೇ ಈಕೆ ಮಾಲ್‌ನಲ್ಲಿ ಓಡಾಡಿದ್ದಾಳೆ. ಆದರೆ ಮಾಲ್‌ಗೆ ಬಂದ ಇತರರ ಜೀವ ಹಾವು ನೋಡಿ ಸುಮ್ಮನೆ ಕೂರಲು ಸಾಧ್ಯವೇ. ಈಕೆಯ ತಲೆಯಲ್ಲಿ ಹಾವು ನೋಡಿದವರೆಲ್ಲರೂ ಭಯಾನಕ ಪ್ರತಿಕ್ರಿಯೆಗಳನ್ನು ನೀಡಿದ್ದಲ್ಲದೇ ಈ ರೀತಿಯೂ ಜನ ಇರುತ್ತಾರೆ ಎಂದು ತಲೆಗೆ ಹಾವು ಸುತ್ತಿ ಬಂದವಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ (Social Media)ದಲ್ಲಿ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ (Instagram)ನಲ್ಲಿ ವೈರಲ್‌ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!