ಫೇಕ್ ಭಕ್ತಿಗೆ ಸಿಟ್ಟಿಗೆದ್ದ ಮಹಾದೇವ: ಗಂಗಾ ನದಿಗೆ ಬಿದ್ದ ರೀಲ್ಸ್ ರಾಣಿ

By Anusha Kb  |  First Published Sep 16, 2024, 9:59 AM IST

ಗಂಗಾ ನದಿಯ ತೀರದಲ್ಲಿ ಇದ್ದ ಶಿವಲಿಂಗದ ಬಳಿ ಯುವತಿಯೊಬ್ಬಳು ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ಆದರೆ ಕೆಲ ಕ್ಷಣಗಳಲ್ಲೇ ಆಕೆ ಕಾಲು ಜಾರಿ ಗಂಗೆಗೆ ಬಿದ್ದಿದ್ದು ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಗಂಗಾ ನದಿಯ ತೀರದಲ್ಲಿ ಇದ್ದ ಶಿವಲಿಂಗದ ಬಳಿ ಯುವತಿಯೊಬ್ಬಳು ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ಆದರೆ ಕೆಲ ಕ್ಷಣಗಳಲ್ಲೇ ಆಕೆ ಕಾಲು ಜಾರಿ ಗಂಗೆಗೆ ಬಿದ್ದಿದ್ದು ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಫೇಕ್ ಭಕ್ತಿ ತೋರಿದ ಯುವತಿಗೆ ಮಹಾದೇವ ಪಾಠ ಕಲಿಸಿದ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಒಂದು ವರದಿ

ಈಗ ಎಲ್ಲಿ ನೋಡಿದರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಹಾವಳಿ. ಹೋದಲ್ಲಿ ಬಂದಲ್ಲಿ ಕ್ಯಾಮರಾ ಟ್ರೈಪಾಡ್‌ಗಳನ್ನು ಹಿಡಿದು ರೀಲ್ಸ್ ಮಾಡುತ್ತಿರುವ ಇವರಿಂದ ಸಾರ್ವಜನಿಕರು ಕೂಡ ತೊಂದರೆಗೊಳಗಾಗುತ್ತಾರೆ. ಭಕ್ತಿಕೇಂದ್ರಗಳು, ಮೆಟ್ರೋ ಸ್ಟೇಷನ್‌ಗಳು ಬಸ್, ರೈಲುಗಳು ಹೀಗೆ  ಸಾರ್ವಜನಿಕ ಸ್ಥಳಗಳು ಎಂಬುದನ್ನು ಕೂಡ ಗಣನೆಗೆ  ತೆಗೆದುಕೊಳ್ಳದೇ ಎಲ್ಲಾ ಸ್ಥಳಗಳಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದು, ಇವರ ರೀಲ್ಸ್ ಶೋಕಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಕೆಲವರು ಇನ್ಸ್ಟಾಗ್ರಾಮ್‌ಗಳಲ್ಲಿ ಲೈಕ್ ಕಾಮೆಂಟ್ ಫಾಲೋವರ್ಸ್‌ಗಳನ್ನು ಹೆಚ್ಚಿಸುವುದಕ್ಕಾಗಿ ಎಂತಹ ರಿಸ್ಕ್ ತೆಗೆದುಕೊಳ್ಳಲು ಕೂಡ ಸಿದ್ಧರಿರುತ್ತಾರೆ. ಜೀವದ ಹಂಗು ತೊರೆದು ಅಪಾಯಕಾರಿ ಸ್ಥಳಗಲ್ಲಿ ರೀಲ್ಸ್ ಮಾಡುವ ಮೂಲಕ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ.

Tap to resize

Latest Videos

ಹೀಗೆ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರು. ಒಬ್ಬಿಬ್ಬರಲ್ಲ. ಆದರೂ ಈ ರೀಲ್ಸ್ ಮಾಡೋ ಜನ ಬುದ್ಧಿ ಕಲಿಯಲ್ಲ. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಗಂಗೆ ಬಿದ್ದಿದ್ದಾಳೆ. ಈಕೆಯ ವೀಡಿಯೋ ಈಗ ವೈರಲ್ ಆಗಿದೆ. ಗಂಗಾ ನದಿಯ ತೀರದಲ್ಲಿದ್ದ ಶಿವಲಿಂಗದ ಮುಂದೆ ಈಕೆ ಭಕ್ತಿಭಾವದ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಅಲ್ಲಿದ್ದ ಶಿವಲಿಂಗಕ್ಕೆ ಭಾವಪರವಶವಾದ ಭಕ್ತೆಯಂತೆ ನಟಿಸುತ್ತಾ ಶಿವಲಿಂಗವನ್ನು ತಬ್ಬಿಕೊಂಡು ತಿರುಗಿ ಬಂದ ಆಕೆ ಗಂಗ ನದಿ ತೀರದಲ್ಲಿ ನದಿಗೆ ಅಡ್ಡಲಾಗಿ ಇಟ್ಟ ಕಬ್ಬಿಣದ ತಡೆಗೋಡೆಯ ಮೇಲೆ ಕಾಲಿಟ್ಟಿದ್ದು, ಆಯಾ ತಪ್ಪಿ ನದಿಗೆ ಬಿದ್ದಿದ್ದಾಳೆ. ನೀರಿನಲ್ಲೇ ಸ್ವಲ್ಪ ಮುಂದೆ ಕೊಚ್ಚಿ ಹೋದ ಈಕೆ ನಂತರ ನೀರಿನ ಸೆಳೆತ ಕಡಿಮೆ ಇದ್ದ ಕಾರಣ ಪಕ್ಕಕ್ಕೆ ಬಂದು ಪಾರಾಗಿದ್ದಾಳೆ.

ಇದನ್ನೂ ಓದಿ:  ರೈಲ್ವೆ ಟ್ರ್ಯಾಕ್‌ನಲ್ಲಿ ರೀಲ್ಸ್ : ಗಂಡ ಹೆಂಡ್ತಿ 2 ವರ್ಷದ ಮಗು ಸಾವು

ಹೀಗೆ ಗಂಗಾ ನದಿಗೆ ಬಿದ್ದ ಯುವತಿ ಹರಿದ್ವಾರಕ್ಕೆ ತೀರ್ಥಯಾತ್ರೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.  ಹರಿದ್ವಾರದ ವಿಷ್ಣುಘಾಟ್‌ನಲ್ಲಿ ಈ ಘಟನೆ ನಡೆದಿದ್ದು, ಕೆಳಕ್ಕೆ ಬೀಳಿಸಿದರು ದೇವರು ಆಕೆಯನ್ನು ಕಾಪಾಡಿದ್ದಾರೆ. 

ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್‌ ಆಗಿದ್ದು, ನಕಲಿ ಭಕ್ತಿಯನ್ನು ಶಿವದೇವನು ಕೂಡ ಮೆಚ್ಚಲಾರ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಶಿವನಿಂದ ನೇರ ನೇಮಕಾತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ರೀಲ್ಸ್‌ಗೆ ಹಾಕಿರುವ ಹಿನ್ನೆಲೆ ಹಾಡಿಗೂ ಈ ಸ್ಥಿತಿಗೂ ಸಖತ್ ಮ್ಯಾಚ್ ಆಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ರೀಲ್ಸ್‌ನಲ್ಲಿ 'ಮರ್‌ಜಾಯೇ ಹಮ್' ಎಂಬ ಹಾಡನ್ನು ಹಾಕಲಾಗಿದೆ. ಆಕೆ ಮರ್‌ ಜಾಯೆ ಹಮ್ (ನಾನು ಸಾಯುತ್ತೇನೆ) ಎಂದು ಹಾಡಿದ್ದು, ಅದಕ್ಕೆ ಶಿವ ಓಕೆ ಸರಿ ಎಂದಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೇಳಿದ್ದಕ್ಕೆ ಇಷ್ಟು ಬೇಗ ದೇವರು ಓಕೆ ಎಂದಿದ್ದನ್ನು ನಾನು ಇದೇ ಮೊದಲ ಬಾರಿ ನೋಡಿದ್ದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವ ಮುನ್ನ ಜನ ತಮ್ಮ ಜೀವದ ಬಗ್ಗೆಯೂ ಯೋಚಿಸುವುದೊಳಿತು.  ಇಲ್ಲದೇ ಹೋದರೆ ಬೇಗ ಶಿವನ ಪಾದ ಸೇರುವಂತಾಗುವುದು. 

ಇದನ್ನೂ ಓದಿ:ಮಹಿಳೆಯ ಕಿವಿಯಿಂದ ಹೊರಬಂದ ಜೇಡ! ವೈರಲ್ ವಿಡಿಯೋ ನೋಡಿ

 
 
 
 
 
 
 
 
 
 
 
 
 
 
 

A post shared by BrieflyToday (@brieflytoday)

 

click me!