
ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್‌ನ (National Herald) ಹಲವು ಕಚೇರಿಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate), ಅದರ ದೆಹಲಿ ಕಚೇರಿಯಲ್ಲಿರುವ ಯಂಗ್ ಇಂಡಿಯನ್ (Young Indian) (YI) ಕಚೇರಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಸೀಲ್ ಮಾಡಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ. ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕಚೇರಿಯನ್ನು ಸೀಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದು ಸೋನಿಯಾ ಹಾಗೂ ರಾಹುಲ್ ಗಾಂಧಿ ಕುಟುಂಬಕ್ಕೆ ಮತ್ತೊಂದು ಹೊಡೆತ ಎಂದೂ ಹೇಳಲಾಗಿದೆ.
ದಾಖಲೆಗಳನ್ನು ರಕ್ಷಿಸಲು ಯಂಗ್ ಇಂಡಿಯನ್ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದೆ. ಮಂಗಳವಾರ ರೇಡ್ ನಡೆದ ವೇಳೆ ಅಧಿಕೃತ ಪ್ರತಿನಿಧಿಗಳು ಹಾಜರಿರದ ಕಾರಣ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ. ಈ ಹಿನ್ನೆಲೆ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನ್ಯಾಷನಲ್ ಹೆರಾಲ್ಡ್‌ನ ಉಳಿದ ಕಚೇರಿ ತೆರೆದಿದ್ದು, ಬಳಕೆಗೆ ಲಭ್ಯವಿದೆ ಎಂದೂ ಇಡಿ ಅಧಿಕಾರಿಗಳು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಇಡಿ ರೇಡ್; ದಾಖಲೆಗಳ ಪರಿಶೀಲನೆ
ಏಜೆನ್ಸಿಯ "ಪೂರ್ವ ಅನುಮತಿಯಿಲ್ಲದೆ" ಕಚೇರಿಯನ್ನು ತೆರೆಯಲು ಸಾದ್ಯವಿಲ್ಲ ಎಂದೂ ED ತನಿಖಾಧಿಕಾರಿಯ ಸಹಿಯ ಅಡಿಯಲ್ಲಿ ಯಂಗ್ ಇಂಡಿಯನ್ ಕಚೇರಿಯ ಹೊರಗೆ ನೋಟಿಸ್ ಅನ್ನು ಅಂಟಿಸಲಾಗಿದೆ ಎಂದೂ ಇಡಿ ತಿಳಿಸಿದೆ.
ನ್ಯಾಷನಲ್ ಹೆರಾಲ್ಡ್-ಎಜೆಎಲ್-ಯಂಗ್ ಇಂಡಿಯನ್ ಡೀಲ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಐಟಿಒ ಬಳಿಯ ದೆಹಲಿಯ ಬಹದ್ದೂರ್ ಶಾ ಜಾಫರ್ ಮಾರ್ಗ್‌ನಲ್ಲಿರುವ ಹೆರಾಲ್ಡ್ ಹೌಸ್‌ನಲ್ಲಿರುವ ನ್ಯಾಷನಲ್ ಹೆರಾಲ್ಡ್ ಕಚೇರಿ ಸೇರಿದಂತೆ ಹನ್ನೆರಡು ಸ್ಥಳಗಳಲ್ಲಿ ಇಡಿ ಮಂಗಳವಾರ ದಾಳಿ ನಡೆಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (Associated Journals Limited) (AJL) ಪ್ರಕಟಿಸಿದೆ ಮತ್ತು ಅದರ ಹೋಲ್ಡಿಂಗ್ ಕಂಪನಿ ಯಂಗ್ ಇಂಡಿಯನ್ ಆಗಿದೆ. ಇನ್ನು, ನ್ಯಾಷನಲ್ ಹೆರಾಲ್ಡ್ ಎಜೆಎಲ್ ಹೆಸರಿನಲ್ಲಿ ನೋಂದಣಿಯಾಗಿದೆ.
ನ್ಯಾಷನಲ್ ಹೆರಾಲ್ಡ್ ಕೇಸ್, ಸೋನಿಯಾಗೆ 30 ಪ್ರಶ್ನೆ: ಇಂದು ಮತ್ತೆ ವಿಚಾರಣೆ
ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಭದ್ರತೆ
ಇನ್ನು, ಅದೇ ಸಮಯದಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಕಾಂಗ್ರೆಸ್ ಪಕ್ಷವು ಈ ಕ್ರಮವನ್ನು ನಿಗೂಢ ಎಂದು ಬಣ್ಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ