ಮನೆಯಲ್ಲಿ ದೊಡ್ಡವರಿಲ್ಲದ ವೇಳೆ ಹತ್ತಿಕೊಂಡ ಬೆಂಕಿ ನಂದಿಸಿದ ಪುಟ್ಟ ಬಾಲಕ: ವೀಡಿಯೋ ವೈರಲ್

Published : Aug 13, 2025, 07:46 PM IST
Boy's Prompt Action Prevents Disaster

ಸಾರಾಂಶ

ಮನೆಯೊಳಗೆ ಚಾರ್ಜರ್‌ನಿಂದ ಬೆಂಕಿ ಹೊತ್ತಿಕೊಂಡಾಗ ಪುಟ್ಟ ಬಾಲಕನೊಬ್ಬ ತನ್ನ ಸಮಯಪ್ರಜ್ಞೆ ಮೆರೆದು ಅಗ್ನಿಶಾಮಕ ಉಪಕರಣ ಬಳಸಿ ಬೆಂಕಿ ನಂದಿಸಿದ್ದು ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಕೆಲವೊಮ್ಮೆ ಧುತ್ತನೇ ಎದುರಾಗುವ ಅನಾಹುತಗಳಿಂದ ದಿಕ್ಕೆ ತೋಚದಂತಾಗುತ್ತದೆ. ಏನು ಮಾಡಬೇಕು ಎಂದು ತಲೆ ಓಡುವುದೇ ಇಲ್ಲ. ಏನು ಮಾಡಬೇಕು ಎಂದು ಯೋಚಿಸಿ ಕಾರ್ಯಪ್ರವೃತರಾಗುವಷ್ಟರಲ್ಲಿ ದೊಡ್ಡ ಅನಾಹುತ ಸಂಭವಿಸಿ ಬಿಡುತ್ತದೆ. ಬೆಂಕಿ ಬಿದ್ದಂತಹ ಸಂದರ್ಭಗಳಲಂತು ಕೆಲವರು ಏನೂ ಯೋಚನೆ ಮಾಡದೇ ಭಯದಿಂದ ಕಟ್ಟಡದಿಂದ ಕೆಳಗೆ ಹಾರುವಂತಹ ಘಟನೆಗಳು ನಡೆದಿದೆ. ಆದರೆ ಇಲ್ಲೊಂದು ಕಡೆ ಪುಟ್ಟ ಬಾಲಕ ಬೆಂಕಿ ಅನಾಹುತವಾದಂತಹ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದಂತಹ ವೀಡಿಯೋವೊಂದು ಭಾರಿ ವೈರಲ್ ಆಗಿದೆ.

ಸಮಯಪ್ರಜ್ಞೆ ಮೆರೆದ ಪುಟ್ಟ ಬಾಲಕ:

ಕೆಲವೊಮ್ಮ ಫೋನ್ ಚಾರ್ಜ್‌ಗೆ ಇಟ್ಟಾಗ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಕೆಲವೊಮ್ಮೆ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಹಠಾತ್ ಬೆಂಕಿ ಸಂಭವಿಸುವುದು ಉಂಟು ಅದೇ ರೀತಿ ಇಲ್ಲೊಂದು ಕಡೆ ಮನೆಯ ಕೋಣೆಯಲ್ಲಿ ಪುಟ್ಟಬಾಲಕ ಹಾಗೂ ಇನ್ನೊಂದು ನವಜಾತ ಶಿಶು ಇರುವ ವೇಳೆ ರೂಮ್‌ನಲ್ಲಿ ಚಾರ್ಜರ್ ಇದ್ದಂತಹ ಸ್ವಿಚ್‌ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದ್ದಕಿದ್ದಂತೆ ಹೊತ್ತಿ ಉರಿಯುವುದಕ್ಕೆ ಆರಂಭಿಸಿದೆ. ಇದನ್ನು ಗಮನಿಸಿದ ಪುಟ್ಟ ಬಾಲಕ ಸೀದಾ ಹೋಗಿ ಬೆಂಕಿ ನಂದಿಸುವ ಫೈರ್ ಎಕ್ಸ್ಟಿಂಗ್ವಿಷರ್(Fire extinguisher)ತಂದು ಬೆಂಕಿ ನಂದಿಸಿದ್ದಾನೆ. ಈ ವೀಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕನ ಸಮಯಪ್ರಜ್ಞೆಗೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

indianfireservice ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ತ್ವರಿತ ಚಿಂತನೆಯು ಜೀವಗಳನ್ನು ಉಳಿಸುತ್ತದೆ. ಈ ಕಣ್ಣು ತೆರೆಸುವ ವೀಡಿಯೊದಲ್ಲಿ, ಹಠಾತ್ ಬೆಂಕಿ ಹೊತ್ತಿಕೊಂಡಾಗ ಒಬ್ಬ ಚಿಕ್ಕ ಹುಡುಗ ತನ್ನ ತಂಗಿಯೊಂದಿಗೆ ಹಾಸಿಗೆಯ ಮೇಲೆ ಆಟವಾಡುವುದನ್ನು ಕಾಣಬಹುದು. ಆದರೆ ಭಯಭೀತನಾಗದೆ, ಅವನು ಬೇಗನೆ ಎದ್ದು ಹೋಗಿ ಅಗ್ನಿಶಾಮಕವನ್ನು ತೆಗೆದುಕೊಂಡು ಬೆಂಕಿ ಮತ್ತಷ್ಟು ಹರಡುವ ಮೊದಲು ಅದನ್ನು ನಂದಿಸುತ್ತಾನೆ. ಅವನ ಶಾಂತತೆ ಮತ್ತು ಮನಸ್ಸಿನ ಉಪಸ್ಥಿತಿಯು ಸಂಭಾವ್ಯ ವಿಪತ್ತನ್ನು ತಡೆಯಿತು ಎಂದು ಬರೆದುಕೊಂಡಿದ್ದಾರೆ.

ಇಲ್ಲಿ ನಿಮಗಿಷ್ಟು ಪವರ್‌ಫುಲ್ ಮಾಹಿತಿ ನೀಡುತ್ತಿದ್ದೇವೆ

ಮನೆಯಲ್ಲಿ ಯಾವಾಗಲೂ ಅಗ್ನಿಶಾಮಕ ಸಾಧನವನ್ನು ಸುಲಭವಾಗಿ ಇರಿಸಿಕೊಳ್ಳಿ.

ಮಕ್ಕಳಿಗೆ ಮೂಲಭೂತ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಲಿಸಿ.

ತುರ್ತು ಸಂದರ್ಭಗಳಲ್ಲಿ ಶಾಂತವಾಗಿರಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಿ.

ಅಗ್ನಿ ಸುರಕ್ಷತೆಯ ಅರಿವು ವಯಸ್ಕರಿಗೆ ಮಾತ್ರವಲ್ಲ ಅದರ ಅರಿವು ಯಾವುದೇ ವಯಸ್ಸಿನಲ್ಲಿ ಜೀವಗಳನ್ನು ಉಳಿಸಬಹುದು

ಈ ವೀಡಿಯೊ ನಿಮಗೆ ಅಗ್ನಿ ಸುರಕ್ಷತೆಗೆ ಆದ್ಯತೆ ನೀಡಲು ಮತ್ತು ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಲು ಸ್ಫೂರ್ತಿ ನೀಡಲಿ.

ಇಂದು ಮಾಡುವ ಜಾಗೃತಿಯು ನಾಳೆಯ ದುರಂತವನ್ನು ತಡೆಯಬಹುದು ಎಂದು ಬರೆದು indianfireservice ಈ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ.

ವೀಡಿಯೋ ನೋಡಿದ ಅನೇಕರು ಪುಟ್ಟ ಬಾಲಕನ ಸಮಯಪ್ರಜ್ಞೆಗೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಮಕ್ಕಳ ಪೋಷಕರು ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಅನೇಕರು ಪೋಷಕರನ್ನು ಕೊಂಡಾಡಿದ್ದಾರೆ. ಬಾಲಕನಿಗೆ ಈ ಪೋಷಕರು ಚೆನ್ನಾಗಿ ಗೈಡ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್