
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಅಗುವುದಕ್ಕೋಸ್ಕರ ಕೆಲ ಯುವ ತರುಣರು ರಸ್ತೆ ಮಧ್ಯೆಯೇ ವೀಡಿಯೋಗಾಗಿ ಸ್ಟಂಟ್ ಮಾಡಿ ಬೇರೆಯವರ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ.ವಾಹನ ದಟ್ಟಣೆಯ ರಸ್ತೆಯಲ್ಲಿ ಚಲಿಸುವ ಬೈಕ್ ಮೇಲೆ ಕಾರುಗಳ ಮೇಲೆ ನಿಂತು ಯುವಕರು ಸ್ಟಂಟ್ ಮಾಡುವ ವೀಡಿಯೋಗಳು ಈ ಹಿಂದೆಯೂ ಅನೇಕ ಬಾರಿ ವೈರಲ್ ಆಗಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ ಹಲವು ಘಟನೆಗಳು ನಡೆದಿವೆ. ಆದರೂ ಕೆಲ ಯುವಕರು ಸುಮ್ಮನೇ ಕೂರುವುದೇ ಇಲ್ಲ, ಏನೋ ಮಾಡುವುದಕ್ಕೆ ಹೋಗಿ ಇನ್ನೇನೋ ಮಾಡುತ್ತಾರೆ. ಹೀಗೆ ರಸ್ತೆ ಮಧ್ಯೆ ಸ್ಟಂಟ್ ಮಾಡಿ ತಾವು ಅಪಾಯಕ್ಕೊಳಗಾಗುವುದಲ್ಲದೇ ಬೇರೆಯವರಿಗೂ ಅಪಾಯ ಉಂಟು ಮಾಡುತ್ತಿದ್ದ ಮೂವರು ಯುವಕರನ್ನು ಹಿಡಿದ ಪೊಲೀಸರು ಅವರಿಗೆ ರಸ್ತೆ ಮಧ್ಯೆಯೇ ಕೂರಿಸಿ ಲಾಠಿ ರುಚಿ ತೋರಿಸಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಂದಹಾಗೆ ಈ ವೀಡಿಯೋವನ್ನು Ghar Ke Kalesh(@gharkekalesh)ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಮೂವರು ಯುವಕರನ್ನು ರಸ್ತೆ ಮಧ್ಯೆ ಕಾಲನ್ನು ಉದ್ದಕ್ಕೆ ನೀಡಿ ಕೂರಿಸಿರುವ ಪೊಲೀಸರು ಒಬ್ಬೊಬ್ಬರಿಗೆ ಕಾಲಿನ ಕೆಳಭಾಗಕ್ಕೆ ಲಾಠಿಯಿಂದ ಹೊಡೆದಿದ್ದಾರೆ. ಮೂವರಿಗೂ ಹೀಗೆ ಲಾಠಿಯಿಂದ ಅಂಗಾಲ ಕೆಳಗೆ ಪೊಲೀಸರು ಬಾರಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. 16 ಸೆಕೆಂಡ್‌ಗಳ ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ವೀಡಿಯೋ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ಪೊಲೀಸರಿಂದ ಒಳ್ಳೆ ಕೆಲಸ ಎಂದರೆ ಮತ್ತೆ ಕೆಲವರು ಜಸ್ಟ್ ಸ್ಟಂಟ್ ಮಾಡಿದ್ದಕ್ಕೆ ಹೀಗೆ ಹೊಡೆಯುವ ಅಗತ್ಯವಿರಲಿಲ್ಲ ಎಂದು ಟೀಕಿಸಿದ್ದಾರೆ.
ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.. ಆದರೆ ವೀಡಿಯೋ ಪೋಸ್ಟ್ ಮಾಡಿದವರು ಈ ವ್ಯಕ್ತಿಗಳು ರಸ್ತೆಯಲ್ಲಿ ಸಾಹಸ ಮಾಡುತ್ತಿದ್ದರು, ಪೊಲೀಸರು ಅವರನ್ನು ಹಿಡಿದು ಉತ್ತಮ ಚಿಕಿತ್ಸೆ ನೀಡಿದರು ಎಂದು ಬರೆದುಕೊಂಡಿದ್ದಾರೆ. ಸ್ಟಂಟ್ ಮಾಡಿದ್ದಕ್ಕೆ ಇಷ್ಟೊಂದು ಜೋರಾಗಿ ಹೊಡೆಯುವ ಅಗತ್ಯವೇನಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಯಾರನ್ನೋ ಕೊಲೆ ಮಾಡಿಲ್ಲ, ಆ ರೀತಿ ಹೊಡೆಯುವ ಅಗತ್ಯವಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಇವರಿಗೆ ಇಂತಹದೊಂಡು ಟ್ರೀಟ್‌ಮೆಂಟ್ ಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ಬೆಲ್ಟ್ ಟ್ರಿಟ್ಮೆಂಟ್ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿ ತೃಪ್ತಿಯಾಯ್ತು ಅವರು ಇನ್ಮುಂದೆ ಈ ರೀತಿ ಮಾಡಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಸ್ತೆಯಲ್ಲಿ ಆಡುತ್ತಿದ್ದ ಪುಟ್ಟ ಕಂದಮ್ಮ ಮೇಲೆ ಹರಿದ ಕಾರು
ಹಾಗೆಯೇ ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ಪುಟ್ಟ ಮಗುವೊಂದು ರಸ್ತೆ ಬದಿ ಆಡುತ್ತಿದ್ದ ವೇಳೆ ಮಗುವಿನ ಮೇಲೆ ಕಾರು ಹರಿದಿದೆ. ಮಹಾರಾಷ್ಟ್ರದ ಮುಂಬೈನ ಕಂಜುರ್‌ಮಾರ್ಗ್‌ನ ಎಂಎಂಆರ್‌ಡಿಎ ಕಾಲೋನಿ ರಸ್ತೆಯಲ್ಲಿ ಈ ದುರಂತ ನಡೆದಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ದುರಂತ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಮಕ್ಕಳಿಬ್ಬರು ರಸ್ತೆ ಬದಿ ಆಟವಾಡುತ್ತಿದ್ದರು. ಈ ವೇಳೆ ಕಾರೊಂದು ಅಲ್ಲಿ ಸಾಗಿ ಬಂದಿದ್ದು, ಕಾರು ಚಾಲಕ ಎಲ್ಲಿ ನೋಡುತ್ತಿದ್ದನೋ ಗೊತ್ತಿಲ್ಲ, ಬಾಲಕನ ಮೇಲೆ ಕಾರು ಹತ್ತಿಸಿದ್ದಾನೆ. ಕೆಲ ಸೆಕೆಂಡ್ ಮಗು ಚಕ್ರದ ಕೆಳಗೆ ಸಿಲುಕಿದ್ದು, ಬಳಿಕ ಕಾರನ್ನು ರಿವರ್ಸ್ ತೆಗೆದ ನಂತರ ಮಗುವನ್ನು ಚಕ್ರದ ಕೆಳಗಿನಿಂದ ಎತ್ತಲಾಗಿದೆ. ಈ ಭಯಾನಕ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ