ಚಿರತೆ ಅತ್ಯಂತ ಚುರುಕು ಹಾಗೂ ಶರವೇಗದಲ್ಲಿ ಚಲಿಸುವ ಪ್ರಾಣಿಯಾಗಿದ್ದು, ಬೇಟೆ ಮೇಲೆ ಕಣ್ಣಿಟ್ಟಿದೆ ಎಂದಾದರೆ ಸಿಗುವವರೆಗೂ ಬಿಡದು ಸಾಮಾನ್ಯವಾಗಿ ಚಿರತೆಗಳು ನೆಲದ ಮೇಲೆ ಓಡಾಡುವ ಜಿಂಕೆ, ಮೊಲ, ಕಾಡೆಮ್ಮೆ ಮುಂತಾದವುಗಳನ್ನು ಬೇಟೆಯಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಚಿರತೆ ಮರದ ಮೇಲೆ ನೇತಾಡುತ್ತಿದ್ದ ಕೋತಿಯೊಂದನ್ನು ಬೇಟೆಯಾಡಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಪನ್ನಾ ಹುಲಿ ರಕ್ಷಿತಾರಣದಲ್ಲಿ ನಡೆದಿದೆ.
ಪ್ರಾಣಿಗಳ ಸಾಮ್ರಾಜ್ಯವು ಬಹಳ ಆಸಕ್ತಿದಾಯಕವಾದ ಪ್ರಪಂಚವಾಗಿದ್ದು, ಪ್ರತಿದಿನ ಒಂದೊಂದು ಅದ್ಭುತಗಳು ನಡೆಯುತ್ತಿರುತ್ತವೆ. ಪ್ರಾಣಿ ಪ್ರಪಂಚದ ಹಲವು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿರಬಹುದು. ಅದೇ ರೀತಿ ಈ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ. ಮಧ್ಯಪ್ರದೇಶದ ಪನ್ನಾ ಹುಲಿ ರಕ್ಷಿತಾರಣ್ಯವೂ ಹುಲಿ, ಸೋಮಾರಿ ಕರಡಿ, ಭಾರತೀಯ ತೋಳ, ಪ್ಯಾಂಗೊಲಿನ್, ಚಿರತೆ, ಘಾರಿಯಲ್, ಮುಂತಾದ ಅನೇಕ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿದೆ.
1/n
A rare sight of a leopard hunting monkey in panna tiger reserve. pic.twitter.com/qHL81Pav75
ಹಸಿವಿನಿಂದ ಕಂಗೆಟ್ಟ ಚಿರತೆಯೊಂದು ಮರ ಹತ್ತಿ ಕೋತಿಯನ್ನು ಕೊಂದು ಬಾಯಲ್ಲಿ ಕಚ್ಚಿ ಹಿಡಿದು ಮರದಿಂದ ಕೆಳಗೆ ಇಳಿಯುತ್ತಿರುವ ದೃಶ್ಯ ಇದಾಗಿದೆ. ಮರದಿಂದ ಇಳಿಯುವಾಗ ಚಿರತೆ ತನ್ನ ಬಾಯಿಯಲ್ಲಿ ಬೇಟೆಯನ್ನು ಬಿಗಿಯಾಗಿ ಹಿಡಿದಿರುವುದು ಕಂಡುಬಂದಿದೆ. ಪನ್ನಾ ಹುಲಿ ರಕ್ಷಿತಾರಣ್ಯದ ಅಧಿಕೃತ ಟ್ವಿಟರ್ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಬೇಟೆಯಾಡುವ ಅಪರೂಪದ ದೃಶ್ಯ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋವನ್ನು ಹುಲಿ ಸಂರಕ್ಷಣಾ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 2700 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಮೃತ ತಾಯಿಯನ್ನು ತಬ್ಬಿ ಮಲಗಿದ್ದ ಕೋತಿ ಮರಿಯ ರಕ್ಷಣೆ
ದಿನಗಳ ಹಿಂದಷ್ಟೇ ಮೂರು ಸಿಂಹಗಳು ಜೊತೆಯಾಗಿ ಮೊಸಳೆಯೊಂದನ್ನು ಬೇಟೆಯಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಈ ವೀಡಿಯೊವನ್ನು 62,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು. ಇದು ಎರಡು ಸಿಂಹಿಣಿಗಳು ಮತ್ತು ಒಂದು ಸಿಂಹ ಸೇರಿ ಆಳವಿಲ್ಲದ ಉಪ್ಪು ನೀರಿನ ಸರೋವರದಲ್ಲಿ ಮೊಸಳೆಯ ಮೇಲೆ ದಬ್ಬಾಳಿಕೆ ನಡೆಸುವ ದೃಶ್ಯವಾಗಿದೆ.
ಮೂರು ಹಸಿದ ಸಿಂಹಗಳು ಮೊಸಳೆಯನ್ನು ಬೇಟೆಯಾಡಲು ಅದರ ಮೇಲೆ ಹಾರಿದಾಗ ಮೊಸಳೆಯು ತನ್ನ ಪ್ರಾಣಕ್ಕಾಗಿ ತೀವ್ರವಾಗಿ ಹೋರಾಡುತ್ತಿರುವುದನ್ನು ಕಾಣಬಹುದು. ಮೊದಲಿಗೆ, ಒಂದು ಸಿಂಹವು ಮೊಸಳೆಯೊಂದಿಗೆ ಸ್ವತಃ ಹೋರಾಡುತ್ತಿದ್ದವು. ಆದರೆ ಜೊತೆಗಿದ್ದ ಸಿಂಹಿಣಿಗಳಿಗೆ ಅದನ್ನು ಆತನೋರ್ವನೆ ನಿಭಾಯಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದು, ಅವುಗಳು ಕೂಡ ಆತನಿಗೆ ಸಹಾಯ ಮಾಡಲು ಹೋಗಿವೆ. ಮೂರು ಸಿಂಹಗಳು ಒಂದು ಮೊಸಳೆಯನ್ನು ಹಿಡಿದು ಎಳೆದಾಡುತ್ತಿವೆ.
ಅರಣ್ಯಾಧಿಕಾರಿ, ಪೊಲೀಸರ ಮೇಲೆ ಎಗರಿಬಿದ್ದ ಚೀತಾ: ವಿಡಿಯೋ ವೈರಲ್
ಕೆಲದಿನಗಳ ಹಿಂದೆ ಜಿಂಕೆಗಾಗಿ ಮೊಸಳೆ ಹಾಗೂ ಸಿಂಹ ಎಳೆದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.ಜಿಂಕೆಗಾಗಿ (deer) ಹರಿಯುವ ನೀರಿನಲ್ಲಿ ಮೊಸಳೆ ಹಾಗೂ ಸಿಂಹವೊಂದು ಕಾದಾಡುವ ಭಯಾನಕ ದೃಶ್ಯ ಇದಾಗಿದೆ. ಜಿಂಕೆಯನ್ನು ಕಚ್ಚಿ ಮೊಸಳೆ ಹಾಗೂ ಸಿಂಹ ಅತ್ತಿಂದಿತ್ತ ಎಳೆದಾಡುತ್ತಿವೆ. ಆದರೆ ಈ ಜಿಂಕೆ ನೀರಿಗೆ ಹೇಗೆ ಹೋಯಿತೆಂಬುದು ತಿಳಿಯುತ್ತಿಲ್ಲ. ಬಹುಶಃ ಜಿಂಕೆಯೊಂದು ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು. ನೀರು ಕುಡಿಯಲು ಹೋಗಿ ಈ ಕ್ರೂರ ಪ್ರಾಣಿಗಳ ಬಾಯಿಗೆ ಸಿಕ್ಕಿರಬಹುದು.