ಹೃದಯಾಘಾತಕ್ಕೆ 42ರ ಹರೆಯದ ಯೋಗರ್ಟ್ ಬ್ರ್ಯಾಂಡ್ ಸಂಸ್ಥಾಪಕ ರೋಹನ್ ಮಿರ್ಚಾಂದಾನಿ ನಿಧನ!

Published : Dec 22, 2024, 10:59 PM ISTUpdated : Dec 22, 2024, 11:02 PM IST
ಹೃದಯಾಘಾತಕ್ಕೆ 42ರ ಹರೆಯದ ಯೋಗರ್ಟ್ ಬ್ರ್ಯಾಂಡ್ ಸಂಸ್ಥಾಪಕ ರೋಹನ್ ಮಿರ್ಚಾಂದಾನಿ ನಿಧನ!

ಸಾರಾಂಶ

ಕಿರಿಯ ವಯಸ್ಸಿನಲ್ಲೇ ಎಪಿಗಮಿಯಾ ಅನ್ನೋ ಯೋಗರ್ಟ್ ಬ್ರ್ಯಾಂಡ್ ಸಂಸ್ಥೆ ಹುಟ್ಟು ಹಾಕಿ ಭಾರತದಲ್ಲಿ ಹೊಸ ಉದ್ಯಮ ಆರಂಭಿಸಿದ ರೋಹನ್ ಮಿರ್ಚಾಂದನಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ನವದೆಹಲಿ(ಡಿ.22)  ವಯಸ್ಸು ಕೇವಲ 42. ಭಾರತದಲ್ಲಿ ಗ್ರೀಕ್‌ ಯೋಗರ್ಟ್ ಬ್ರ್ಯಾಂಡ್ ಸಂಸ್ಥೆ ಹುಟ್ಟುಹಾಕಿ ಅತೀ ದೊಡ್ಡ ಉದ್ಯಮವಾಗಿ ಬೆಳೆಸಿದ ರೋಹನ್ ಮಿರ್ಚಂದಾನಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಡ್ರಮ್ಸ್ ಫುಡ್ ಇಂಟರ್ನ್ಯಾಷನ್ ಕಂಪನಿಯ ಅಡಿಯಲ್ಲಿ ಎಪಿಗಮಿಯಾ ಸಂಸ್ಥೆ ಮೂಲಕ ಅಂತಾರಾಷ್ಟ್ರೀಯ ಯೋಗರ್ಟ್ ಬ್ರ್ಯಾಂಡ್ ಮಾಡಿದ ರೋಹನ್, ತೀವ್ರಗ ಹೃದಾಯಾಘತದಿದಂ ನಿಧನರಾಗಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.  ನ್ಯೂಯಾರ್ಕ್‌‌ನ ಎನ್‌ವೈಯೂ ಸ್ಕೂಲ್ ಆಫ್ ಬ್ಯೂಸಿನೆಸ್‌ನಲ್ಲಿ ಪದವಿ ಪಡೆದಿರುವ ರೋಹನ್ 2013ರಲ್ಲಿ ಎಪಿಗಮಿಯಾ ಸಂಸ್ಥೆ ಸಂಸ್ಥಾಪಕರಲ್ಲಿ ಹುಟ್ಟುಹಾಕಿದ್ದರು. ಅಂಕುಲ್ ಗೋಯಲ್ ಹಾಗೂ ಉದಯ್ ಥಕ್ಕರ್ ಜೊತೆ ಸೇರಿ ಎಪಿಗಮಿಯಾ ಸಂಸ್ಥೆ ಬೆಳೆಸಿದ ರೋಹನ್ ಮಿರ್ಚಂದಾನಿ ಅಗಲಿಕೆ ಆಘಾತ ನೀಡಿದೆ. ಕಿರಿಯ ವಯಸ್ಸಿನಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ರೋಹನ್ ಸಾವು ಹಲವರನ್ನು ಬೆಚ್ಚಿಬೀಳಿಸಿದೆ.

ರೋಹನ್ ದೂರದೃಷ್ಠಿಯುಳ್ಳ ನಾಯಕ, ರೋಹನ್ ಎಲ್ಲರಿಗೂ ಪ್ರೇರಣೆಯಾಗಿದ್ದರು. ಯಾವುದೇ ಸವಾಲನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ರೋಹನ್‌ಗಿತ್ತು. ಹಲವು ಬಾರಿ ಸವಾಲುಗಳನ್ನು ಸುಲಭವಾಗಿ ಪರಿಹರಿಸಿ ಕಂಪನಿಗೆ ಹೊಸ ಮುನ್ನುಡಿ ಬರೆದಿದ್ದರು. ರೋಹನ್ ಅಗಲಿಕೆಗೆ ಕಂಪನಿ ಅಪಾರ ನಷ್ಟ ನಿಜ. ಅದಕ್ಕೂ ಮಿಗಿಲಾಗಿ ಒಂದೊಳ್ಳೆ ಸ್ನೇಹಿತ, ಮಾರ್ಗದರ್ಶಿ, ಹೈತಿಶಿಯನ್ನು ಕಳೆದುಕೊಂಡಿದ್ದೇವೆ. ಈ ದುಖು ಭರಿಸುವ ಶಕ್ತಿ ರೋಹನ್ ಕುಟುಂಬಸ್ಥರಿಗೆ ಭಗವಂತ ನೀಡಲಿ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ. ರೋಹನ್ ಹಾಕಿಕೊಟ್ಟ ಮಾರ್ಗ, ಸೂಚನೆ, ಎಚ್ಚರಿಕೆಯನ್ನು ಕಂಪನಿ ಪಾಲಿಸಲಿದೆ. ರೋಹನ್ ಮಾರ್ಗದಲ್ಲಿ ಕಂಪನಿ ಸಾಗಲಿದೆ ಎಂದು ಅಂಕುಲ್ ಗೋಯಲ್ ಹಾಗೂ ಉದಯ್ ಥಕ್ಕರ್ ಹೇಳಿದ್ದಾರೆ. 

ಬಾತ್ರೂಮ್‌ನಲ್ಲಿ ಹಾರ್ಟ್ ಅಟ್ಯಾಕ್ ಯಾಕಾಗುತ್ತೆ? ಆಗ ತಕ್ಷಣಕ್ಕೆ ಏನು ಮಾಡಬೇಕು?

ಯೋಗರ್ಡ್ ಬ್ರ್ಯಾಂಡ್‌ನಲ್ಲಿ ಎಪಿಗಮಿಯಾ ಅತ್ಯಂಜ ಜನಪ್ರಿಯ ಬ್ರ್ಯಾಂಡ್ ಆಗಿದೆ. ಭಾರತದಲ್ಲಿ ಮಾತ್ರವಲ್ಲಇತೆರ ಕೆಲೆವೆಡಿ ಎಪಿಗಮಿಯಾ ಬ್ರ್ಯಾಂಡ್ ಲಭ್ಯವಿದೆ. ಕೇವಲ ಯೋಗರ್ಡ್ ಮಾತ್ರವಲ್ಲ, ಹಲವು ಉತ್ಪನ್ನಗಳು ಎಪಿಗಮಿಯಾ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಿದೆ. ಭಾರತದಲ್ಲಿ 30 ನಗರಗಳಲ್ಲಿ ಬರೋಬ್ಬರಿ 20,000 ರಿಟೇಲ್ ಟಚ್ ಪಾಯಿಂಟ್ಸ್ ಹೊಂದಿದೆ. 2025-26ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲೂ ಎಪಿಗಮಿಯಾ ಬ್ರ್ಯಾಂಡ್ ವಿಸ್ತರಿಸಲು ಕಂಪನಿ ನಿರ್ಧರಿಸಿದೆ.

ಎಪಿಗಮಿಯಾ ಬ್ರ್ಯಾಂಡ್ ಇದೀಗ ಭಾರತದಲ್ಲಿ ಮನೆ ಮಾತಾಗಿದೆ. ಸಂಸ್ಥೆ ವೇಗವಾಗಿ ಬೆಳೆಯುತ್ತಿದ್ದಂತೆ ರೋಹನ್ ನಿಧನ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರೋಹನ್ ತೀವ್ರ ಹೃದಯಾಘಾತದಿಂದ ಡಿಸೆಂಬರ್ 21ರಂದು ನಿಧನರಾಗಿದ್ದಾರೆ. ಆಸ್ಪತ್ರೆ ದಾಖಲಿಸಿ ಬದುಕಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಹೃದಯಾಘಾತ ತೀವ್ರವಾಗಿದ್ದ ಕಾರಣ ಪ್ರಾಣ ಪಕ್ಷಿ ಹಾರಿ ಹೋಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ