ಭಾರತದ ಅತಿದೊಡ್ಡ ಆನ್‌ಲೈನ್ ಸ್ಪರ್ಧೆ: ಕೋವಿಡ್‌ ಎದುರಿಸಲು ವಿದ್ಯಾರ್ಥಿಗಳ ನವೀನ ಸಲಹೆ!

By Suvarna NewsFirst Published Sep 26, 2021, 3:42 PM IST
Highlights

* ಇಡೀ ವ್ಯವಸ್ಥೆಗೆ ಸವಾಲೊಡ್ಡಿದ ಕೊರೋನಾ

* ಕೊರೋನಾ ನಿಯಂತ್ರಿಸಲು ಪರಿಹಾರವೇನು?

* ಪುಟ್ಟ ಪುಟ್ಟ ಮಕ್ಕಳ ಬಳಿ ಇದೆ ಹಿರಿಯರನ್ನೇ ಅಚ್ಚರಿಗೀಡು ಮಾಡುವ ಸಲಹೆಗಳು

ನವದೆಹಲಿ(ಸೆ.26)  2020 ಮಾರ್ಚ್‌ನಿಂದ ದೇಶಾದ್ಯತ ಕೊರೋನಾ ಸೋಂಕು ಹಬ್ಬಿದ ಪರಿಣಾಮ ಏಕಾಏಕಿ ಎಲ್ಲಾ ವ್ಯವಸ್ಥೆಗಳು ಬದಲಾದವರು. ವರ್ಕ್‌ ಫ್ರಂ ಹೋಂನಿಂದ ಆನ್‌ಲೈನ್‌ ಶಿಕ್ಷಣದವರೆಗೆ ಜನರು ಒಗ್ಗಿಕೊಳ್ಳಬೇಕಾಯ್ತು. ಅದರಲ್ಲೂ ಭೌತಿಕ ತರಗತಿಗಳನ್ನು ಮಾಡಲಾಗದೇ ಶಿಕ್ಷಣ ಸಂಸ್ಥೆಗಳನ್ನು ಸ್ಥಗಿತಗೊಳಿಸುವುದು, ಈ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನೆದುರಿಸುವಂತೆ ಮಾಡಿತು. ಹೀಗಿದ್ದರೂ ಇದೊಂದು ಸಮಸ್ಯೆಯಲ್ಲ, ಒಂದು ಅವಕಾಶವೆಂದು ಪರಿಗಣಿಸಿ, ಪ್ರಗತಿಪರ ಶಿಕ್ಷಣ ಸಂಸ್ಥೆಗಳ ನಾಯಕರು ವಿನೂತನ ಆನ್‌ಲೈನ್ ಬೋಧನಾ ಹಾಗೂ ಕಲಿಕಾ ವ್ಯವಸ್ಥೆ ಹಾಗೂ ಕಾರ್ಯಕ್ರಮಗಳನ್ನು ಪರಿಚಯಿಸಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಡಿಜಿಟಲ್ ಜಗತ್ತಿಗೆ ಪರಿಚಯಿಸಿದ್ದಾರೆ.  

ಈ ನಡುವೆ AI ಸ್ಕೂಲ್‌ ಆಫ್‌ ಇಂಡಿಯಾ(AI School of India) ಕೋವಿಡ್ -19 ಸಮರ್ಥವಾಗಿ ಎದುರಿಸಿ, ಅದರ ವಿರುದ್ಧ ಹೋರಡಲು ಪರಿಹಾರ ಕಂಡುಕೊಳ್ಳಲು ಭಾರತದಲ್ಲಿ ವಿಶಿಷ್ಟವಾದ ಹಾಗೂ ಇದೇ ಮೊದಲ ಬಾರಿ ಆನ್‌ಲೈನ್ ಸ್ಪರ್ಧೆಯನ್ನು(Online Contest) ನಡೆಸಿತ್ತು. 

* ಭಾರತದಾದ್ಯಂತ ಗ್ರೇಡ್ 3 ರಿಂದ 12 ರವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

*  6000+ ನೋಂದಣಿಗಳು, ಭಾರತದಾದ್ಯಂತ 400+ ನೋಂದಾಯಿತ ಶಾಲೆಗಳು ಭಾಗವಹಿಸಿದ್ದವು

*  ಶೇ. 45% ಎಲ್ಲಾ ಹೆಣ್ಮಕ್ಕಳ ತಂಡಗಳು ಭಾಗಿ. 

ಬಹುಮಾನವಾವಾಗಿ ಐಐಟಿ ಮದ್ರಾಸ್‌ನಲ್ಲಿ ಇಂಟರ್ನ್‌ಶಿಪ್, ಅಜೂರ್ ನಾಲೆಡ್ಜ್ ಕಾರ್ಪೊರೇಶನ್‌ನಲ್ಲಿ ಇಂಟರ್ನ್‌ಶಿಪ್, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ವೋಚರ್‌ಗಳು, ಆನ್‌ಲೈನ್ ಕೋರ್ಸ್‌ಗಳು, ಪುಸ್ತಕಗಳು ಇತ್ಯಾದಿಗಳಿದ್ದವು. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಅದನ್ನು ಯಶಸ್ವಿಗೊಳಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಶಾಲಾ ನಾಯಕರು ಮತ್ತು ಮ್ಯಾನೇಜ್ಮೆಂಟ್‌ಗೆ AI ಸ್ಕೂಲ್‌ ಆಫ್‌ ಇಂಡಿಯಾ(AI School of India) ಮೆಚ್ಚುಗೆ ಮತ್ತು ಕೃತಜ್ಞತೆ ಸಲ್ಲಿಸಿದೆ. 

ಸ್ಪರ್ಧೆಯ ವಿಜೇತರ(Winners) ಆಯ್ಕೆಗಾಗಿ ಅಂತಾರಾಷ್ಟ್ರೀ ಮಟ್ಟದ ತೀರ್ಪುಗಾರರ ಸಮಿತಿಯನ್ನೂ ರಚಿಸಲಾಗಿತ್ತು. ಡಾ ವುಲ್ಫ್‌ಗ್ಯಾಂಗ್ ಸ್ಲಾನಿ, ಗ್ರಾಜ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆಸ್ಟ್ರಿಯಾ, ಡಾ. ಕೆನ್ ಕಾನ್, ಹಿರಿಯ ಸಂಶೋಧಕರು, ಆಕ್ಸ್‌ಫರ್ಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಶ್ರೀ ರೂಜ್‌ಬೆಹ್ ಅಲಿಯಾಬಾಡಿ, ಸಿಇಒ ರೆಡಿಎಐ ಯುಎಸ್ಎ, ಡಾ ಬಿ ರವೀಂದ್ರನ್, ಆರ್‌ಬಿಸಿ-ಡಿಎಸ್‌ಎಐ ಮುಖ್ಯಸ್ಥ, ಐಐಟಿ ಮದ್ರಾಸ್, ಶ್ರೀ ವಿಪುಲ್ ಶಾ, ಮುಖ್ಯ ಶಿಕ್ಷಣ ಮತ್ತು ಕೌಶಲ್ಯ, ಟಿಸಿಎಸ್ ಗ್ಲೋಬಲ್ ಸಿಎಸ್ಆರ್ ಇದ್ದರೆಂಬುವುದು ಉಲ್ಲೇಖನೀಯ.

ವಿಜೇತರು ಯಾರು?

ಇನ್ನು ಈ ಸ್ಪರ್ಧೆಯ ವಿಜೇತರ ವಿವರವೂ ಲಭ್ಯವಾಗಿದ್ದು, ಒಟ್ಟಾರೆಯಾಗಿ ಗ್ರೇಡ್‌ 9-12ರ ಬ್ಯಾಚ್‌ನಲ್ಲಿ ನೊಯ್ಡಾದ ಶ್ರೀರಾಮ್ ಮಿಲೇನಿಯಂ ಶಾಲೆಯ ಆರ್ಯಮಾನ್ ಶರ್ಮಾ, ಅಧಿರಾಜ್ ಮೋಹನ್ ಚನನ ವಿಜೇತರಾಗಿದ್ದಾರೆ. ಇವರು Mansik Ashriya ಎಂಬ ಪ್ರಾಜೆಕ್ಟ್‌ ತಯಾರಿಸಿದ್ದರು. 

ಈ ಸ್ಪರ್ಧೆಯ ಗ್ರೇಡ್‌ವೈಸ್‌ ವಿಜೇತರು ಹಾಗೂ ಅವರು ಸಲ್ಲಿಸಿದ ಪ್ರಾಜೆಕ್ಟ್‌ಗಳ ವಿವರಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ: https://aischoolofindia.com/ai-covid-warriors/

ಯಾವುದೇ ಸಮಸ್ಯೆಗಳಿರಲಿ ವಿದ್ಯಾರ್ಥಿಗಳಲ್ಲಿ ಅದನ್ನು ಎದುರಿಸಲು ಬೇಕಾದ ನವೀನ ಹಾಗೂ ವಿಭಿನ್ನ ಪರಿಹಾರಗಳಿರುತ್ತವೆ ಎಂಬುವುದು AI ಸ್ಕೂಲ್ ಆಫ್‌ ಇಂಡಿಯಾ ಪ್ರತಿಪಾದಿಸುತ್ತಲೇ ಬಂದಿದೆ. ಹೀಗಿರುವಾಗ ಇಡೀ ವಿಶ್ವವನ್ನು ಕಾಡಿದ ಕೊರೋನಾಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಿದ್ದ ಆನ್‌ಲೈನ್‌ ಸ್ಪರ್ಧೆಗೆ ವಿದ್ಯಾರ್ಥಿಗಳು ಸ್ಪಂದಿಸಿದ ರೀತಿಯೂ ಬಹಳ ಅಭೂತಪೂರ್ಣವಾಗಿತ್ತು. ಮಕ್ಕಳ ಐಡಿಯಾಗಳು ತೀರ್ಪುಗಾರರನ್ನೂ ಗೊಂದಲಕ್ಕೀಡು ಮಾಡಿದ್ದು, ವಿಜೇತರ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವಲ್ಲೂ ಇಕ್ಕಟ್ಟಿಗೆ ಸಿಲುಕಿಸಿದ್ದವು ಎಂಬುವುದು ಉಲ್ಲೇಖನೀಯ. 

click me!