ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ನರೇಂದ್ರ ಮೋದಿ!

By Suvarna NewsFirst Published Sep 26, 2021, 3:44 PM IST
Highlights
  • ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ
  • 89ನೇ ವಸಂತಕ್ಕೆ ಕಾಲಿಟ್ಟ ಆರ್ಥಶಾಸ್ತ್ರಜ್ಞ ಮನ್‌ಮೋಹನ್ ಸಿಂಗ್
  • ಸಿಂಗ್ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ

ನವದೆಹಲಿ(ಸೆ.26): ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಮನ್‌ಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ. ಸಿಂಗ್ ಇಂದು 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮನ್‍‌ಮೋಹನ್ ಸಿಂಗ್‌ಗೆ ಕಾಂಗ್ರೆಸ್ ನಾಯಕರು, ದೇಶ ವಿದೇಶಗಳ ಗಣ್ಯರು ಶುಭಕೋರಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದೇ ವೇಳೆ ಉತ್ತಮ ಆರೋಗ್ಯಕ್ಕಾಗಿ  ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಸೋನಿಯಾ ಪ್ರಧಾನಿಯಾಗಬಹುದಿತ್ತು: ಕೇಂದ್ರ ಸಚಿವರ ಕಾಂಗ್ರೆಸ್‌ ಪ್ರೀತಿ!

ಮನ್‌ಮೋಹನ್ ಸಿಂಗ್ ಹುಟ್ಟು ಹಬ್ಬಕ್ಕೆ ಮೋದಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.  ನಮ್ಮ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Birthday greetings to our former Prime Minister Dr. Manmohan Singh Ji. I pray for his long life and wonderful health.

— Narendra Modi (@narendramodi)

ಸೆಪ್ಟೆಂಬರ್ 26, 1932ರಲ್ಲಿ ಹುಟ್ಟಿದ ಮನ್‌ಮೋಹನ್ ಸಿಂಗ್, ಭಾರತದ 13ನೇ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಜವಾಹರ್ ಲಾಲ್ ನೆಹರೂ ಬಳಿಕ ಪೂರ್ಣಾವದಿಗೆ ಪ್ರಧಾನಿಯಾದ ಹೆಗ್ಗಳಿಕೆಗೂ ಮನ್‌ಮೋಹನ್ ಸಿಂಗ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಮನ್‌ಮೋಹನ್ ಸಿಂಗ್ ಮೊದಲ ಸಿಖ್ ಪ್ರಧಾನ ಮಂತ್ರಿ ಅನ್ನೋ ಕೀರ್ತಿಗೂ ಪಾತ್ರರಾಗಿದ್ದಾರೆ.

ಪ್ರಧಾನಿ ಮೋದಿಗೆ ಮನ್‌ಮೋಹನ್ ಸಿಂಗ್ ಪತ್ರ; ಕೊರೋನಾ ನಿಯಂತ್ರಣಕ್ಕೆ ಹೇಳಿದ್ರು 5 ಸೂತ್ರ!

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004 ರಿಂದ 2014ರ ವರೆಗೆ ಮನ್‌ಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿದ್ದರು. 1991-96ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮನ್‌ಮೋಹನ್ ಸಿಂಗ್, ದೇಶದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ಹಾಗೂ ಪ್ರಗತಿ ತಂದ ಕೀರ್ತಿ ಮನ್‌ಮೋಹನ್ ಸಿಂಗ್ ಅವರಿಗಿದೆ.

1998ರಿಂದ 2004ರ ವರೆಗಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಮನ್‌ಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.  2004ರಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೇರಿದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮನ್‌ಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರು.

'ಪ್ರಧಾನಿಯಾಗಿ ಸಿಂಗ್‌ರನ್ನು ಸೋನಿಯಾ ಆಯ್ಕೆ ಮಾಡಿದ್ಯಾಕೆ' ಒಬಾಮಾ ಸತ್ಯ

2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಮತ್ತೆ ಅಧಿಕಾರಕ್ಕೇರಿತು. ಈ ಮೂಲಕ ಮನ್‌ಮೋಹನ್ ಸಿಂಗ್ 2ನೇ ಬಾರಿಗೆ ಪ್ರಧಾನಿಯಾಗಿ ಮುಂದುವರಿದರು. ಆದರೆ ಯುಪಿಎ 2 ಅವದಿಯಲ್ಲಿ ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ಸಿಲುಕಿ ಒದ್ದಾಡಿತು.

2010ರ ಕಾಮನ್‌ವೆಲ್ ಗೇಮ್ಸ್ ಹಗರಣ, 2ಜಿ ತರಾಂಗಾಂತರ ಹಂಚಿಕೆ ಹಗರಣ, ಕಲ್ಲಿದ್ದಲು ಹಗರಣ ಸೇರಿದಂತೆ ಹಲವು ಹಗರಣಗಳು ಸುತ್ತಿಕೊಂಡಿತು. ಹೀಗಾಗಿ 20214ರ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೇರಿತು. ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮನ್‌ಮೋಹನ್ ಸಿಂಗ್ ಹುಟ್ಟಿದ್ದು ಭಾರತ ಸ್ವಾಂತ್ರತ್ರ್ಯಕ್ಕೂ ಮೊದಲು. 1932ರಲ್ಲಿ ವೆಸ್ಟ್ ಪಂಜಾಬ್‌ನ ಗಹಾದಲ್ಲಿ ಜನಿಸಿದರು. 1947ರ ದೇಶ ವಿಭಜನೆಯಲ್ಲಿ ವೆಸ್ಟ್ ಪಂಜಾಬ್ ಪಾಕಿಸ್ತಾನದ ಪ್ರಾಂತ್ಯವಾಗಿ ಸೇರಿಕೊಂಡಿತು. ದೇಶ ವಿಭಜನೆ ಬಳಿಕ ಮನ್‌ಮೋಹನ್ ಸಿಂಗ್ ಕುಟುಂಬಕ್ಕೆ ಗಹಾದಿಂದ ಅಮೃತಸರಕ್ಕೆ ಸ್ಥಳಾಂತರಗೊಂಡಿತು. 

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್, ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವರು ಶುಭಕೋರಿದ್ದಾರೆ.  

 

Warm wishes to former Prime Minister of India, Dr. Manmohan Singh ji on his birthday. May he be blessed with good health and long life.

— Rajnath Singh (@rajnathsingh)

The words of Dr. Manmohan Singh exemplify the vision of a true Indian leader. Today as we celebrate his birthday, we renew our commitment to uphold the idea of India. pic.twitter.com/jzvRpWakYZ

— Congress (@INCIndia)

Birthday greetings to former PM Shri Manmohan Singh ji. I pray for your long and healthy life.

— Arvind Kejriwal (@ArvindKejriwal)
click me!