
ಲಕ್ನೋ(ಮೇ.26): ಕೊರೋನಾಗಿಂತ ಹೆಚ್ಚು ಈ ಸೋಂಕಿನ ಬಗೆಗಿನ ವದಂತಿಗಳು ಜನರಲ್ಲಿ ಭೀತಿ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಟೋಗಳು ಜನರಲ್ಲಿ ಭಯ ಹುಟ್ಟಿಸಿವೆ. ಜೊತೆಗೆ ಸರ್ಕಾರದ ಬಗ್ಗೆ ಆಕ್ರೋಶ ಮೂಡುವಂತೆಯೂ ಮಾಡಿವೆ. ಇತ್ತೀಚೆಗಷ್ಟೇ ಪ್ರಯಾಜ್‌ರಾಜ್‌ನ ಶೃಂಗವೇವೇರಪುರ ಘಾಟ್‌ನ ಫೋಟೋ ಒಂದು ವೈರಲ್ ಆಗಿದೆ. ಇದರೊಂದಿಗೆ ಕೊರೋನಾದಿಂದ ಅದೆಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆಂದರೆ, ಇವರ ಅಂತ್ಯಕ್ರಿಯೆ ನಡೆಸಲು ಸ್ಮಧಶಾನದಲ್ಲಿ ಸ್ಥಳವಿಲ್ಲದಂತಾಗಿದೆ. ಹೀಗಾಗಿ ಮರಳಿನಡಿ ಹೆಣ ಹೂತು ಹೋಗುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಫೋಟೋ 2018ರದ್ದಾಗಿದೆ. ಅಚ್ಚರಿಯ ವಿಚಾರವೆಂದರೆ ಅಂದು ಜನರು ಕೊರೋನಾದ ಹೆಸರನ್ನೂ ಕೇಳಿರಲಿಲ್ಲ.
ಗಂಗೆಯ ಒಡಲಲ್ಲಿ ತೇಲುತ್ತಿರುವ ಹೆಣಗಳಿಗೆ ಕೇಂದ್ರವೇ ನೇರ ಹೊಣೆ: ರಾಗಾ ಕಿಡಿ!
ಮೂರು ವರ್ಷ ಹಳೆ ಫೋಟೋ ಟ್ವೀಟ್ ಮಾಡಿದ ಸಿಎಂ ಯೋಗಿ
ಹಳೇ ಫೋಟೋಗಳನ್ನು ಬಳಸಿ ಜನರ ಮನದಲ್ಲಿ ಭಯ ಮೂಡಿಸುವ ವದಂತಿ ಹಬ್ಬಿಸುವುದನ್ನು ಕಂಡ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೂರು ವರ್ಷ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಶೇರ್ ಮಾಡುತ್ತಾ 'ಅಂದು ಕೊರೋನಾ ಇರಲಿಲ್ಲ, ಆದ್ರೂ ಮೂರು ವರ್ಷದ ಹಿಂದೆ ಹೀಗೇ ಇತ್ತೂ ಗಂಗೆಯ ತಟ' ಎಂದು ಬರೆದಿದ್ದಾರೆ.
1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂದವು 2000 ಶವ!
ವಾಸ್ತವವಾಗಿ ಹಲವಾರು ಹಿಂದೂ ಕುಟುಂಬಗಳು ಗಂಗಾ ನದಿ ದಡದ ಮರಳಲ್ಲಿ ಶವಗಳನ್ನು ಹೂಳುವ ಒದ್ಧತಿ ಅನುಸರಿಸಿಕೊಂಡು ಬಂದಿವೆ. ಇದರಿಂದ ನದಿ ಮಾಲಿನ್ಯಗೊಳ್ಳುತ್ತದೆ. ಆದರೆ ಕೊರೋನಾ ಸೋಂಕಿನಿಂದ ಹೀಗಾಗುತ್ತಿದೆ ಎಂದು ಹಬ್ಬಿಸುತ್ತಿರುವ ವರದಿಗಳ ಹಿಂದಿನ ಸತ್ಯ ಇದರಿಂದ ಅನಾವರಣಗೊಂಡಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ