ಜನಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆ: ನಿಯಂತ್ರಣ ಅಗತ್ಯ

Kannadaprabha News   | Asianet News
Published : Jul 11, 2021, 10:23 AM IST
ಜನಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆ: ನಿಯಂತ್ರಣ ಅಗತ್ಯ

ಸಾರಾಂಶ

  ಜುಲೈ 11 ‘ವಿಶ್ವ ಜನಸಂಖ್ಯಾ ದಿನ’ ಆಚರಣೆ ಜನಸಂಖ್ಯಾ ಸ್ಫೋಟದಿಂದ ಜಾಗತಿಕವಾಗಿ ಅನೇಕ ಸಮಸ್ಯೆ ಈ ವರ್ಷದ ಜನಸಂಖ್ಯೆ ದಿನಾಚರಣೆಯ ವಿಷಯವು ಹಕ್ಕು ಮತ್ತು ಆಯ್ಕೆಗಳು

ನವದೆಹಲಿ (ಜು.11): ಪ್ರತೀ ವರ್ಷ ಜು.11ರಂದು ಇಡೀ ಜಗತ್ತು ‘ವಿಶ್ವ ಜನಸಂಖ್ಯಾ ದಿನ’ವನ್ನಾಗಿ ಆಚರಿಸುತ್ತದೆ. ಭಾರೀ ಪ್ರಮಾಣದ ಜನಸಂಖ್ಯೆ ಏರಿಕೆ ಅಥವಾ ಜನಸಂಖ್ಯಾ ಸ್ಫೋಟದಿಂದ ಜಾಗತಿಕವಾಗಿ ಎದುರಾಗಬಹುದಾದ ಸವಾಲುಗಳನ್ನು ವಿಶ್ವ ಜನಸಂಖ್ಯಾ ದಿನ ನೆನಪಿಸಿಕೊಡುತ್ತದೆ ಎಂದರೆ ತಪ್ಪಾಗಲಾರದು.

ಈ ಪ್ರಕಾರ ಈ ವರ್ಷದ ಜನಸಂಖ್ಯೆ ದಿನಾಚರಣೆಯ ವಿಷಯವು ಹಕ್ಕು ಮತ್ತು ಆಯ್ಕೆಗಳು ಎಂಬ ಥೀಮ್‌ ಅನ್ನು ಒಳಗೊಂಡಿದೆ.

ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ: ಗರ್ಭಪಾತಕ್ಕೆ ಸುರಕ್ಷಿತ ವ್ಯವಸ್ಥೆ!

ಈ ಹಿಂದೆ ಸಾವಿರಾರು ಮತ್ತು ನೂರಾರು ವರ್ಷಗಳ ಬಳಿಕ ವಿಶ್ವದ ಜನಸಂಖ್ಯೆ 100 ಕೋಟಿಗೆ ತಲುಪಿತ್ತು. ಆದರೆ ಮುಂದಿನ ಕೇವಲ 200 ವರ್ಷಗಳಲ್ಲಿ ಜಗತ್ತಿನ ಜನಸಂಖ್ಯೆ 7 ಪಟ್ಟು ಅಂದರೆ 7.7 ಬಿಲಿಯನ್‌ಗೆ ಏರಿಕೆಯಾಗಿದೆ.

ವಿಶ್ವಸಂಸ್ಥೆಯ ವರದಿ ಪ್ರಕಾರ 2011ರಲ್ಲಿ ವಿಶ್ವದ ಜನಸಂಖ್ಯೆಯು 700 ಕೋಟಿಗೆ ಮುಟ್ಟಿತ್ತು. ಆದರೆ ಇದೀಗ ಈ ಸಂಖ್ಯೆ 770 ಕೋಟಿಗೆ ಮುಟ್ಟಿದ್ದು, 2030ರ ವೇಳೆಗೆ ವಿಶ್ವದ ಜನಸಂಖ್ಯೆ 850 ಕೋಟಿಗೆ, 2050ಕ್ಕೆ 970 ಕೋಟಿ ಮತ್ತು 2100 ಇಸವಿಗೆ 1090 ಕೋಟಿ ದಾಟಲಿದೆ ಎಂದು ವಿಶ್ವಸಂಸ್ಥೆ ಅಂದಾಜು ಹಾಕಿದೆ.

ಈ ಹಿನ್ನೆಲೆಯಲ್ಲಿ ಪ್ರತೀ ವರ್ಷದ ವಿಶ್ವ ಜನಸಂಖ್ಯಾ ದಿನದಂದು ಜನಸಂಖ್ಯಾ ಸ್ಫೋಟವು ಪರಿಸರ ವ್ಯವಸ್ಥೆ ಮತ್ತು ಮಾನವ ಸಂಕುಲದ ಮೇಲೆ ಹೇಗೆಲ್ಲಾ ದುಷ್ಪರಿಣಾಮ ಬೀರುತ್ತದೆ ಎಂಬುದರ ಜಾಗೃತಿ ಮೂಡಿಸಲಾಗುತ್ತದೆ.

ನಂ.1 ಚೀನಾಕ್ಕೆ ಇದೀಗ ಜನಸಂಖ್ಯೆ ಕುಸಿತ ಭೀತಿ! ..

ಜನಸಂಖ್ಯೆ ಸ್ಫೋಟಕ್ಕೆ ಕಾರಣವೇನು?

ವಿಶ್ವಾದ್ಯಂತ ಸಂತಾನೋತ್ಪತ್ತಿ ವಯೋಮಾನಕ್ಕೆ ತಲುಪುವವರ ಸಂಖ್ಯೆ ಹೆಚ್ಚಳ, ಫಲವತ್ತತೆಯ ಪ್ರಮಾಣದಲ್ಲಿ ಭಾರೀ ಬದಲಾವಣೆ, ನಗರೀಕರಣದ ಹೆಚ್ಚಳ ಮತ್ತು ವಲಸೆಗೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದಾಗಿ ಜನಸಂಖ್ಯೆ ಬೆಳವಣಿಗೆಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ಅತಿಹೆಚ್ಚು ಜನಸಂಖ್ಯೆ

ಟಾಪ್‌ 5 ರಾಷ್ಟ್ರಗಳು

ದೇಶ ಜನಸಂಖ್ಯೆ

ಚೀನಾ 139 ಕೋಟಿ

ಭಾರತ 133 ಕೋಟಿ

ಅಮೆರಿಕ 33 ಕೋಟಿ

ಇಂಡೋನೇಷ್ಯಾ 27 ಕೋಟಿ

ಪಾಕಿಸ್ತಾನ 23 ಕೋಟಿ

ಭಾರತ ವಿಶ್ವದಲ್ಲೇ ನಂ.2 ಹೆಚ್ಚು ಜನಸಂಖ್ಯೆ

ಇಡೀ ವಿಶ್ವದಲ್ಲಿ ಚೀನಾವನ್ನು ಹೊರತುಪಡಿಸಿದರೆ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶ ಭಾರತವಾಗಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆಗೆ ಚೀನಾ ಶೇ.18.47ರಷ್ಟುಜನರನ್ನು ಸೇರಿಸಿದರೆ, ಭಾರತವು ಶೇ.17.70 ಜನರನ್ನು ಕೊಡುಗೆಯಾಗಿ ನೀಡುತ್ತದೆ. ಇದರೊಂದಿಗೆ ಜನಸಂಖ್ಯೆ ಉತ್ಪಾದನೆಯಲ್ಲಿ ಚೀನಾದ ನಂತರದ 2ನೇ ಸ್ಥಾನ ಭಾರತದ ಪಾಲಾಗಿದೆ. ಆ ಬಳಿಕ ಶೇ.4.25 ಜನಸಂಖ್ಯೆ ಉತ್ಪಾದನೆ ಸಾಮರ್ಥ್ಯ ಹೊಂದಿದ ಅಮೆರಿಕ 3ನೇ ಸ್ಥಾನದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!