ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ

Kannadaprabha News   | Asianet News
Published : Jul 11, 2021, 09:33 AM ISTUpdated : Jul 11, 2021, 10:19 AM IST
ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ

ಸಾರಾಂಶ

ಕೋವಿಡ್‌ ಲಾಕ್‌ಡೌನ್‌ ತೆರವಿನ ಬೆನ್ನಲ್ಲೇ ಪ್ರವಾಸ ಹೆಚ್ಚಳ ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿರುವ ಪ್ರವಾಸಿಗರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅಸಮಾಧಾನ 

ನವದೆಹಲಿ (ಜು.11): ಕೋವಿಡ್‌ ಲಾಕ್‌ಡೌನ್‌ ತೆರವಿನ ಬೆನ್ನಲ್ಲೇ, ಗಿರಿಧಾಮ ಮತ್ತು ಇನ್ನಿತರ ನೆಚ್ಚಿನ ಪ್ರವಾಸಿ ತಾಣಗಳಿಗೆ ಹೋಗುತ್ತಿರುವ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಗುಂಪು-ಗುಂಪಾಗಿ ಸೇರುತ್ತಿರುವ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

‘ಕೊರೋನಾ ವೈರಸ್‌ನ 2ನೇ ಅಲೆ ಇನ್ನೂ ಅಂತ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 1.48

"

ಗಿರಿಧಾಮ ಮತ್ತು ಪ್ರವಾಸಿ ತಾಣಗಳ ಹೊಂದಿದ ರಾಜ್ಯಗಳ ಅಧಿಕಾರಿಗಳ ಜೊತೆ ಶನಿವಾರ ಪರಿಶೀಲನಾ ಸಭೆ ನಡೆಸಿದ ಭಲ್ಲಾ ಅವರು, ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಗೋವಾ, ಹಿಮಾಚಲ ಪ್ರದೇಶ, ಕೇರಳ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ ಕೋವಿಡ್‌ ಪರಿಸ್ಥಿತಿ, ಕೊರೋನಾ ಲಸಿಕೆ ಅಭಿಯಾನದ ಬಗ್ಗೆ ಚರ್ಚೆ ನಡೆಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?