ವಿಶ್ವ ಅಂತರ್ಜಾಲದಿಂದ, ನಮ್ಮ ಮನಸ್ಸು ಭಾರತದೊಂದಿಗೆ ಕನೆಕ್ಟ್; ಅನಿವಾಸಿ ಭಾರತೀಯರನ್ನುದ್ದೇಶಿ ಮೋದಿ ಭಾಷಣ!

By Suvarna NewsFirst Published Jan 9, 2021, 5:30 PM IST
Highlights

16ನೇ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಮೋದಿ ಭಾಷಣದ ಪ್ರಮುಖ ಅಂಶ ಇಲ್ಲಿದೆ.

ನವದೆಹಲಿ(ಜ.09): ಇಡೀ ವಿಶ್ವವೇ ಅಂತರ್ಜಾಲದಿಂದ ಕನೆಕ್ಟ್ ಆಗಿದೆ. ಆದರೆ ನಮ್ಮ ಮನಸ್ಸು ಮಾ ಭಾರತಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿ ಹೇಳಿದ್ದಾರೆ. 16ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರನ್ಸ್ ಮೂಲಕ ಮಾತನಾಡಿದ ಮೋದಿ, ತಾಯ್ನಾಡಿನಿಂದ ನಾವೆಷ್ಟೋ ದೂರವಿದ್ದರೂ, ನಿರಂತರ ಸಂಪರ್ಕದಲ್ಲಿರುುತ್ತೆವೆ. ಇದು ಭಾರತದ ಶಕ್ತಿ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಲಸಿಕೆ ವಿತರಣೆ; ಜ.11ಕ್ಕೆ BSY ಸೇರಿ ಎಲ್ಲಾ ರಾಜ್ಯ ಸಿಎಂ ಜೊತೆ ಮೋದಿ ಸಭೆ!

ಸತತ ಪರಿಶ್ರಮ, ಪ್ರಯತ್ನ, ಸಾಧನೆಗಳಿಂದ ಅನಿವಾಸಿ ಭಾರತೀಯರು ತಮ್ಮ ತಮ್ಮ ಕೆಲಸ ಹಾಗೂ ಇತರ ದೇಶಗಳಲ್ಲಿ ಹೆಮ್ಮೆಯ ಭಾರತೀಯರಾಗಿ ಗುರುತಿಸಿಕೊಂಡಿದ್ದಾರೆ.  ಬಡವರ ಸಬಲೀಕರಣಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶವೂ ಸಹ ಮುನ್ನಡೆ ಸಾಧಿಸಬಹುದು ಎಂದು  ಭಾರತ ಜಗತ್ತಿಗೆ ತೋರಿಸಿದೆ ಎಂದು ಮೋದಿ ಹೇಳಿದರು.

ಭಾರತ ಭಯೋತ್ಪಾದನೆ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬರುತ್ತಿದೆ. ಭಾರತದ ಹೋರಾಟದಿಂದ ಇದೀಗ ವಿಶ್ವವೇ ಭಯೋತ್ಪಾದನೆ ವಿರುದ್ಧ ಹೋರಾಟ ಕೈಜೋಡಿಸಿದೆ. ಇನ್ನು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಡಿಜಿಟಲೀಕರಣ ಮಾಡಲಾಗಿದೆ. ಈ ಮೂಲಕ ಕೋಟಿ ಕೋಟಿ ರೂಪಾಯಿ ಹಣಕಾಸು ನೆರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ ಎಂದು ಮೋದಿ ಹೇಳಿದರು.

ನಾವು ಪಿಪಿಇ ಕಿಟ್, ವೆಂಟಿಲೇಟರ್, ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇದೀಗ ಈ ಎಲ್ಲಾ ಉಪಕರಣಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ವಿದೇಶಕ್ಕೂ ರಫ್ತಾಗುತ್ತಿದೆ. ಭಾರತ ಸ್ವಾಲಂಬಿಯಾಗುತ್ತಿದೆ. ಇತರ ದೇಶಗಳಿಂದ ಆಮದು ಪ್ರಮಾಣ ಕಡಿಮಯಾಗುತ್ತಿದೆ ಎಂದು ಮೋದಿ ಹೇಳಿದರು.

click me!