ಚಿಲ್ಲರೆ ಸಮಸ್ಯೆ, ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ!

By Suvarna NewsFirst Published Feb 28, 2020, 1:42 PM IST
Highlights

ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ|  ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ನೀಡಲು ಪ್ಲಾನ್

ತಿರುಪತಿ[ಫೆ.28]: ತಿರುಪತಿ ತಿಮ್ಮಪ್ಪ ಮಂದಿರದ ಖಜಾನೆಯಲ್ಲಿ ಸಂಗ್ರಹವಾಗುವ ಚಿಲ್ಲರೆ ಹಣದ ವಿಲೇವಾರಿ ಸಮಸ್ಯೆ ನಿವಾರಣೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹೊಸ ಉಪಾಯ ಕಂಡುಕೊಂಡಿದೆ.

ಈ ಪ್ರಕಾರ, ದೇವಸ್ಥಾನದಲ್ಲಿ ಭಕ್ತಾದಿಗಳು ನೀಡುವ ಚಿಲ್ಲರೆ ದೇಣಿಗೆಯ ಹಣವನ್ನು ಕ್ರಮವಾಗಿ 500 ರು., 200 ರು., 100 ರು. ಹಾಗೂ 50 ರು. ಪೊಟ್ಟಣಗಳನ್ನು ಕಟ್ಟಿಅವುಗಳನ್ನು ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ನೀಡಲು ಮುಂದಾಗಿದೆ. ಇದಕ್ಕೆ ಬದಲಿಯಾಗಿ ವ್ಯಾಪಾರಸ್ತರಿಂದ ದೇವಸ್ಥಾನವು ಅಷ್ಟೇ ಮೌಲ್ಯದ ಹಣವನ್ನು ಪಡೆಯಲಿದೆ.

ಬರಿಗಾಲಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ ಧಡಕ್ ಚೆಲುವೆ..!

ಅಲ್ಲದೆ, ವ್ಯಾಪಾರ-ವಹಿವಾಟಿನ ಸಂದರ್ಭದಲ್ಲಿ ಅಗತ್ಯವಿದ್ದಾಗ ವ್ಯಾಪಾರಿಗಳು ಈ ಹಣದ ಪೊಟ್ಟಣಗಳನ್ನು ಭಕ್ತಾದಿಗಳಿಗೆ ಚಿಲ್ಲರೆಯಾಗಿ ನೀಡಬಹುದಾಗಿದೆ.

click me!