
ಬೆಂಗಳೂರು(ನ.09) ವಿಮಾನ ಪ್ರಯಾಣದಲ್ಲಿ ಇತ್ತೀಚೆಗೆ ಅಹಿತಕರ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ, ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇದೀಗ ಫ್ರಾಂಕ್‌ಫರ್ಟ್-ಬೆಂಗಳೂರು ವಿಮಾನದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿದೆ. ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕುರಿತು ದೂರು ಕೂಡ ದಾಖಲಾಗಿದೆ.
ಅಮೆರಿಕ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಈ ಘಟನೆ ನಡೆದಿದೆ.ಆಂಧ್ರಪ್ರದೇಶದ ತಿರುಪತಿ ಮೂಲದ 32 ವರ್ಷದ ಮಹಿಳಾ ಟೆಕ್ಕಿ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದಾರೆ. ರಜೆ ನಿಮಿತ್ತ ಭಾರತಕ್ಕೆ ಆಗಮಿಸಿದ್ದಾರೆ. LH0754 ಬೆಂಗಳೂರು ವಿಮಾನ ಹತ್ತಿದ ಮಹಿಳಾ ಟೆಕ್ಕಿ, 38k ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ಮಹಿಳಾ ಟೆಕ್ಕಿ ನಿದ್ದೆಗೆ ಜಾರಿದ್ದಾರೆ.
ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್
ಮಹಿಳಾ ಟೆಕ್ಕಿಯ ಪಕ್ಕದಲ್ಲೇ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶಂಕರ್‌ನಾರಾಯಣನ್ ರೆಂಗನಾಥ್, ಮಹಿಳಾ ಟೆಕ್ಕಿ ಪಕ್ಕದ 38ಜೆ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಮಹಿಳಾ ಟೆಕ್ಕಿ ನಿದ್ದೆಗೆ ಜಾರಿದ್ದಾರೆ. ದೂರ ಪ್ರಯಾಣದ ಕಾರಣ ಮಹಿಳಾ ಟೆಕ್ಕಿ ಗಾಢ ನಿದ್ದೆಗೆ ಜಾರಿದ್ದಾರೆ. ಆದರೆ ಗಾಢ ನಿದ್ದೆಯಲ್ಲಿ ಮಹಿಳಾ ಟೆಕ್ಕಿಗೆ ತಮ್ಮ ಮೈಯನ್ನು ಯಾರೂ ಮುಟ್ಟಿದ ಅನುಭವವಾಗಿದೆ. ತಕ್ಷಣ ನಿದ್ದೆಯಿಂದ ಎಚ್ಚರಗೊಂಡ ಮಹಿಳಾ ಟೆಕ್ಕಿಗೆ ಆಘಾತವಾಗಿದೆ. ಕಾರಣ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಶಂಕರ್‌ನಾರಾಯಣನ್ ಅವರ ಕೈಗಳು ಮಹಿಳಾ ಟೆಕ್ಕಿಯ ತೊಡೆಯ ಮೇಲಿತ್ತು.
ನಿದ್ದೆಯಿಂದ ಎಚ್ಚೆತ್ತ ಮಹಿಳಾ ಟೆಕ್ಕಿ ಕಿರುಕುಳ ಕುರಿತು ವಾರ್ನಿಂಗ್ ನೀಡಿ ಮತ್ತೆ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಮತ್ತೆ ಇದೇ ಅನುಭವವಾಗಿದೆ. ಮತ್ತೆ ಎದ್ದು ನೋಡಿದರೆ ಶಂಕರ್‌ನಾರಾಯಣನ್ ಕೈಗಳು ಮತ್ತೆ ತೊಡೆಯ ಮೇಲಿತ್ತು. ಆಕ್ರೋಶಗೊಂಡ ಮಹಿಳಾ ಟೆಕ್ಕಿ ಕೈಗಳನ್ನು ತಳ್ಳಿ ಹಾಕಿ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾಳೆ.
ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್ : ಕೇಸ್ ಜಡಿದ ಗಗನಸಖಿಯರು..!
ವಿಮಾನ ಸಿಬ್ಬಂದಿಗಳು ಆಗಮಿಸಿ ಮಹಿಳಾ ಟೆಕ್ಕಿಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಹಿಳಾ ಟೆಕ್ಕಿ ಲಿಖಿತ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಾಥಮಿಕ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕರ್‌ನಾರಾಯಣನ್ ಪೊಲೀಸರು ಬಂಧಿಸಿದ್ದಾರೆ. ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ