ಮಹಿಳೆಯರು ಕೂದಲು ಸರಿ ಮಾಡ್ಕೋಬೇಡಿ; ಕೋರ್ಟ್‌ ಕಾರ್ಯಕಲಾಪಕ್ಕೆ ಅಡ್ಡಿಯಾಗುತ್ತೆ ಎಂದ Pune Court..!

By BK AshwinFirst Published Oct 24, 2022, 4:21 PM IST
Highlights

ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿ ಮಾಡಿಕೊಳ್ಳುವುದು ಪದೇ ಪದೇ ಗಮನಕ್ಕೆ ಬರುತ್ತಿದೆ, ಇದು ನ್ಯಾಯಾಲಯದ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ, ಅಂತಹ ಕೃತ್ಯದಿಂದ ದೂರವಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ.

ನ್ಯಾಯಾಲಯದ ಕೇಸ್‌ (Court Case) ಅಂದರೆ ಅಲ್ಲಿ ಜಡ್ಜ್‌ (Judge) ಮಾತ್ರ ಅಲ್ಲ ವಕೀಲರು (Lawyers) ಸೇರಿ ಜನಜಂಗುಳಿಯಿಂದ ತುಂಬಿರುತ್ತದೆ. ಪುರುಷರು, ಮಹಿಳೆಯರು - ಹೀಗೆ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಇರುತ್ತಾರೆ. ವಕೀಲರಲ್ಲೂ ಮಹಿಳಾ ವಕೀಲರ ಸಂಖ್ಯೆ ಸಾಕಷ್ಟಿದೆ. ಇನ್ನು, ಕೋರ್ಟ್‌ಗಳು ತಮ್ಮ ಕೆಲ ಆದೇಶ, ತೀರ್ಪುಗಳಿಗೆ ಟೀಕೆಗೊಳಗಾಗುವ ಹಾಗೆ, ಪುಣೆಯ ನ್ಯಾಯಾಲಯವೂ (Pune Court) ಟೀಕೆಗೆ ಒಳಗಾಗಿದೆ. ಇದಕ್ಕೆ ಕಾರಣ, ಜಿಲ್ಲಾ ನ್ಯಾಯಾಲಯ (District Court) ಹೊರಡಿಸಿರುವ ನೋಟಿಸ್‌. ಈ ನೋಟಿಸ್‌ ಸಾಮಾಜಿಕ ಮಾಧ್ಯಮದಲ್ಲಿ (Social Media) ಆಕ್ರೋಶಕ್ಕೆ ಕಾರಣವಾಗಿತ್ತು. ಅಂದ ಹಾಗೆ, ಆ ನೋಟಿಸ್‌ನಲ್ಲೇನಿದೆ ಅಂತೀರಾ..? ಮುಂದೆ ಓದಿ..

ನ್ಯಾಯಾಲಯದಲ್ಲಿ ಮಹಿಳಾ ವಕೀಲರು ತಮ್ಮ ಕೂದಲನ್ನು ಸರಿ ಮಾಡಿಕೊಳ್ಳಬೇಡಿ ಎಂದು ಪುಣೆ ಜಿಲ್ಲಾ ನ್ಯಾಯಾಲಯ ನೋಟಿಸ್‌ ಹೊರಡಿಸಿದೆ. ಹಾಗೂ, ಈ ರೀತಿ ಮಾಡುತ್ತಿರುವುದರಿಂದ ನ್ಯಾಯಾಲಯದ ಕಾರ್ಯಚಟುವಟಿಕೆಗೆ "ಅಡೆತಡೆ" ಉಂಟಾಗುತ್ತದೆ ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ನೋಟಿಸ್‌ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಓದಿ: Hate Speech: ಧರ್ಮದ ಹೆಸರಿನಲ್ಲಿ ಎಂಥಾ ಸ್ಥಿತಿಗೆ ತಲುಪಿದ್ದೇವೆ..! ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್‌ ಬೇಸರ!

Wow now look ! Who is distracted by women advocates and why ! pic.twitter.com/XTT4iIcCbx

— Indira Jaising (@IJaising)

ಅಕ್ಟೋಬರ್ 20 ರಂದು ಈ ನೋಟಿಸ್‌ ಹೊರಡಿಸಲಾಗಿದ್ದು, ನ್ಯಾಯಾಲಯದ ರಿಜಿಸ್ಟ್ರಾರ್‌ ಇದಕ್ಕೆ ಸಹಿ ಮಾಡಿದ್ದಾರೆ. ಈ ನೋಟಿಸ್‌ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು "ವಾವ್ ಈಗ ನೋಡಿ ! ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ ಮತ್ತು ಏಕೆ!" ಎಂಬ ಕ್ಯಾಪ್ಷನ್‌ ಅನ್ನೂ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ ಓದಿದ ಟ್ವಿಟ್ಟರ್ ಬಳಕೆದಾರರು ಈ ಸೂಚನೆಯನ್ನು "ಅಸಂಬದ್ಧ" ಎಂದು ಟೀಕಿಸಿದರು. ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ ಪತ್ರಕರ್ತ ರಂಜೋನಾ ಬ್ಯಾನರ್ಜಿ "ಪಿತೃಪ್ರಭುತ್ವದ ವ್ಯಾಪ್ತಿಯು ಕೇವಲ ಹಾಸ್ಯಾಸ್ಪದವಾಗಿದೆ" ಎಂದು ಹೇಳಿದರು.

ಹಾಗೆ, ಇನ್ನೊಬ್ಬ ಬಳಕೆದಾರರು "ನಾಳೆ ಮಹಿಳೆಯರನ್ನು ನೋಡುವುದರಿಂದ ಅವರು ವಿಚಲಿತರಾಗಲು ನಿರ್ಧರಿಸಿದರೆ, ಮಹಿಳಾ ವಕೀಲರನ್ನು ಸಹ ನಿರ್ಬಂಧಿಸಲಾಗುತ್ತದೆಯೇ? ಅಥವಾ ಮುಸುಕು ಧರಿಸಲು ಕೇಳಲಾಗುತ್ತದೆಯೇ’’ ಎಂದೂ ಬರೆದಿದ್ದಾರೆ. 

ಇದನ್ನೂ ಓದಿ: ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಭಾರತವು ಅಂಧಕಾರ ಯುಗಕ್ಕೆ ಹಿಂದಿರುಗಿದೆಯೇ ಎಂದು ಕೆಲವರು ಕೇಳಿದರು. ಹಾಗೂ, ಅಂತಹ ನಿಯಮಗಳನ್ನು ನಿರ್ದೇಶಿಸಲು ನ್ಯಾಯಾಂಗಕ್ಕೆ ಯಾವುದೇ ವ್ಯವಹಾರವಿಲ್ಲ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಹಾಗೂ, ಈ ಆದೇಶವು ವಸಾಹತುಶಾಹಿ ಕಾಲಕ್ಕೆ ಸೇರಿದೆಯೇ ಎಂದೂ ಟ್ವಿಟ್ಟರ್‌ ಬಳಕೆದಾರರು ಕೇಳಿದರು.

ಇನ್ನು, ಹೆಚ್ಚು ಟೀಕೆಗಳನ್ನು ಕೇಳಿಬಂದ ನಂತರ ಈ ನೋಟಿಸ್ ಅನ್ನು ಹಿಂಪಡೆಯಲಾಗಿದೆ. ಆಕ್ಷೇಪಣೆಗಳು ವ್ಯಕ್ತವಾದ ನಂತರ ಶನಿವಾರ ವಿವಾದಾತ್ಮಕ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

"ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿ ಮಾಡಿಕೊಳ್ಳುವುದು ಪದೇ ಪದೇ ಗಮನಕ್ಕೆ ಬರುತ್ತಿದೆ, ಇದು ನ್ಯಾಯಾಲಯದ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ, ಅಂತಹ ಕೃತ್ಯದಿಂದ ದೂರವಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಟಕಟೆಯಲ್ಲಿ ಪ್ರಜ್ವಲ್‌ ರೇವಣ್ಣ ಹರಟೆಗೆ ಹೈಕೋರ್ಟ್‌ ಗರಂ

ನ್ಯಾಯಾಲಯದ ಸೌಹಾರ್ದತೆಯನ್ನು ಕಾಪಾಡಲು ಮಾತ್ರ ನೋಟಿಸ್ ನೀಡಲಾಗಿದೆ ಮತ್ತು ಯಾವುದೇ ಭಾವನೆಗಳನ್ನು ಅವಮಾನಿಸುವ ಅಥವಾ ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದೂ ಮೂಲಗಳು ಹೇಳಿವೆ. ಆದರೆ, ಈ ನೋಟಿಸ್‌ ಅನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ತಿಳಿದು ಯಾವುದೇ ವಿವಾದವಾಗದಂತೆ ನೋಟಿಸ್ ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ. 

click me!