ಮಹಾರಾಷ್ಟ್ರದಲ್ಲಿ ಮತ್ತೆ ಉಂಟಾಗುತ್ತಾ ರಾಜಕೀಯ ಬಿಕ್ಕಟ್ಟು, ಹೊಸ ಬಾಂಬ್‌ ಸಿಡಿಸಿದ ಉದ್ಧವ್‌ ಠಾಕ್ರೆ!

By Santosh NaikFirst Published Oct 24, 2022, 2:56 PM IST
Highlights

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ಉಲ್ಬಣವಾಗಲಿದೆ ಎಂದು ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಎಚ್ಚರಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಕುರಿತಾಗಿ ಉದ್ಧವ್‌ ಠಾಕ್ರೆ ಎಚ್ಚರಿಸಿದ್ದು, ಏಕನಾಥ್‌ ಶಿಂಧೆ ಸಿಎಂ ಯುನಿಫಾರ್ಮ್‌ ಯಾವ ಕ್ಷಣದಲ್ಲಿ ಬೇಕಾದರೂ ಕಳಚಿ ಬೀಳಬಹುದು ಎಂದಿದ್ದಾರೆ.
 

ಮುಂಬೈ (ಅ.24): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಭಾನುವಾರ ತನ್ನ ಮುಖವಾಣಿ ಸಾಮ್ನಾದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಗೆ ದೊಡ್ಡ ಏಟು ನೀಡಲಿದೆ ಎಂದು ಎಚ್ಚರಿಸಿದ್ದಾರೆ. ಶಿಂಧೆ ಬಣದ 40 ಶಾಸಕರ ಪೈಕಿ 22 ಶಾಸಕರು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ ಎಂದು ಉದ್ಧವ್‌ ಠಾಕ್ರೆ ಶಿವಸೇನೆ ಹೇಳಿದೆ. ಉದ್ಧವ್ ಬಣದ ಸಾಮ್ನಾದ ರೋಖ್‌ಥೋಕ್ ಅಂಕಣದಲ್ಲಿ, ಈ ವಿಚಾರವಾಗಿ ಬರೆಯಲಾಗಿದೆ. ಏಕನಾಥ್‌ ಶಿಂಧೆ ಅವರ ಮುಖ್ಯಮಂತ್ರಿ ಯುನಿಫಾರ್ಮ್ ಆವಾಗ ಬೇಕಾದರೂ ಕಳಚಿ ಹೋಗಬಹುದು ಎನ್ನುವುದು ಈಗ ಎಲ್ಲರಿಗೂ ಅರ್ಥವಾಗಿದೆ ಎಂದು ಅದರಲ್ಲಿ ಹೇಳಲಾಗಿದೆ. ಅದಲ್ಲದೆ, ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಮತ್ತು ಸರಪಂಚ್ ಚುನಾವಣೆಯಲ್ಲಿ ಶಿಂಧೆ ಬಣದ ಯಶಸ್ಸಿನ ಹಕ್ಕು ಸುಳ್ಳು ಎಂದು ಅದು ಹೇಳಿದೆ. ಸಿಎಂ ಏಕನಾಥ್‌ ಶಿಂಧೆ ಬಣದ ಕನಿಷ್ಠ 22 ಶಾಸಕರು ಕೋಪಗೊಂಡಿದ್ದಾರೆ. ಈ ಪೈಕಿ ಬಹುತೇಕ ಶಾಸಕರು ಬಿಜೆಪಿಯಲ್ಲಿ ವಿಲೀನವಾಗಲಿದ್ದಾರೆ ಎನ್ನುವುದು ಖಚಿತ ಮಾಹಿತಿ. ಶಿಂಧೆ ಅವರ ಕಾರ್ಯವೈಖರಿಯಿಂದ ಮಹಾರಾಷ್ಟ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಬರೆದಿದೆ.

ಶಿಂಧೆ (Eknath Shinde) ಅವರನ್ನು ಮಹಾರಾಷ್ಟ್ರದ (Maharashtra) ಜನತೆ ಎಂದಿಗೂ ಕ್ಷಮಿಸೋದಿಲ್ಲ. ಬಿಜೆಪಿಯು (BJP) ಶಿಂಧೆ ಅವರನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಅಂಕಣದಲ್ಲಿ ಬರೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಭಿವೃದ್ಧಿಗೆ ಶಿಂಧೆ ಅವರ ಕೊಡುಗೆ ಗೋಚರಿಸುವುದಿಲ್ಲ ಎಂದು ಅಂಕಣದಲ್ಲಿ ಬರೆಯಲಾಗಿದೆ. ದೇವೇಂದ್ರ ಫಡ್ನವೀಸ್ (Devendra Fadnavis) ಎಲ್ಲೆಲ್ಲೂ ಕಾಣಸಿಗುತ್ತಾರೆ. ದೆಹಲಿಯಲ್ಲಿ ಶಿಂಧೆ ಪ್ರಭಾವ ಇಲ್ಲ. ಮುಂಬೈಯನ್ನು(Mumbai) ಕೊಳೆಗೇರಿಯಿಂದ ಹೊರತರುವ ಮಹತ್ವಾಕಾಂಕ್ಷೆಯ ಕಾರ್ಯತಂತ್ರದ ಭಾಗವಾಗಿ ಫಡ್ನವೀಸ್ ಅವರು ಮಂಗಳವಾರ ದೆಹಲಿಗೆ ತೆರಳಿದರು ಮತ್ತು ಧಾರಾವಿ ಪುನರಾಭಿವೃದ್ಧಿ ಯೋಜನೆಗಾಗಿ ಮಹಾರಾಷ್ಟ್ರ ಸರ್ಕಾರದ ರೈಲ್ವೆಯಿಂದ ಭೂಮಿಗಾಗಿ ರೈಲ್ವೆ ಸಚಿವಾಲಯದಿಂದ ಅನುಮೋದನೆ ಪಡೆದರು ಎಂದು ಬರೆದಿದೆ.

ಶಿಂಧೆ ಗುಂಪಿನ 40 ಶಾಸಕರು ಸರ್ಕಾರವನ್ನು ನಡೆಸುತ್ತಿದ್ದಾರೆ ಮತ್ತು ಅವರು ಸಿಎಂಒ ನಿಯಂತ್ರಣದಲ್ಲಿದ್ದಾರೆ ಎಂದು ಹೇಳುವ ಬಿಜೆಪಿ ನಾಯಕರೊಂದಿಗಿನ ಸಂಭಾಷಣೆಯನ್ನು ಅಂಕಣದಲ್ಲಿ ಉಲ್ಲೇಖಿಸಲಾಗಿದೆ. "ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೆಗೆದುಕೊಳ್ಳುತ್ತಾರೆ ಮತ್ತು ಸಿಎಂ ಶಿಂಧೆ ಆ ನಿರ್ಧಾರಗಳನ್ನು ಪ್ರಕಟಿಸುತ್ತಾರೆ" ಎಂದು ಅಂಕಣದಲ್ಲಿ ಹೇಳಲಾಗಿದೆ. ಕೇಸರಿ ಪಕ್ಷವು ತನ್ನ ಲಾಭಕ್ಕಾಗಿ ಶಿಂಧೆ ಅವರನ್ನು ಬಳಸಿಕೊಳ್ಳಲಿದೆ ಎಂದೂ ಮುಖವಾಣಿ ಹೇಳಿಕೊಂಡಿದೆ. ಈ ನೀತಿಯು ಮಹಾರಾಷ್ಟ್ರದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

'ಭಯೋತ್ಪಾದಕ ಕಾರ್ಯಗಳಿಗೆ ದೇಹಕ್ಕಿಂತ, ಬುದ್ಧಿಯೇ ಮುಖ್ಯ..', ಜಿಎನ್‌ ಸಾಯಿಬಾಬಾ ಬಿಡುಗಡೆಗೆ ಸುಪ್ರೀಂ ತಡೆ!

ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ಕ್ಷೇತ್ರದ ಚುನಾವಣೆಯಿಂದ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವ ಬಿಜೆಪಿಯ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿ, ಶಿಂಧೆ ಅವರು ಯಾವಾಗ ಬೇಕಾದರೂ ಸಿಎಂ ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಹೇಳಿದೆ.

ಲೋಕಲ್‌ ಟ್ರೇನ್‌ನಲ್ಲಿ ಸೀಟಿಗಾಗಿ ಫೈಟು, ಜುಟ್ಟು ಹಿಡ್ಕೊಂಡು ಬಡಿದಾಡಿಕೊಂಡ್ರು ಹೆಣ್ಮಕ್ಳು!

ಉಪಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸದ ಬಿಜೆಪಿ: ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ಕ್ಷೇತ್ರದ ಚುನಾವಣೆಯಿಂದ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವ ಬಿಜೆಪಿಯ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿ, ಶಿಂಧೆ ಅವರು ಯಾವಾಗ ಬೇಕಾದರೂ ಸಿಎಂ ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಹೇಳಿದೆ. ಇತ್ತೀಚೆಗೆ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಈ ನಿರ್ಧಾರವು ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ ಅವರಿಗೆ ಸುಗಮ ಚುನಾವಣೆಗೆ ದಾರಿ ಮಾಡಿಕೊಟ್ಟಿತು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಾಳಾಸಾಹೆಬಂಚಿ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ವಿವಿಧ ಪಕ್ಷಗಳ ಮುಖಂಡರ ಮನವಿಯ ನಂತರ ಬಿಜೆಪಿ ಈ ಬದಲಾವಣೆ ಮಾಡಿತ್ತು.

click me!