ಡಿ.31ರ ವರೆಗ ಅಂತಾರಾಷ್ಟ್ರೀಯ ವಿಮಾನ ಹಾರಟಕ್ಕೆ ನಿಷೇಧ ಹೇರಿದ ಕೇಂದ್ರ ಸರ್ಕಾರ!

Published : Nov 26, 2020, 03:24 PM ISTUpdated : Nov 26, 2020, 04:19 PM IST
ಡಿ.31ರ ವರೆಗ ಅಂತಾರಾಷ್ಟ್ರೀಯ ವಿಮಾನ ಹಾರಟಕ್ಕೆ ನಿಷೇಧ ಹೇರಿದ ಕೇಂದ್ರ ಸರ್ಕಾರ!

ಸಾರಾಂಶ

ದೇಶದಲ್ಲಿ ಕೊರೋನಾ ಆಟ ಮತ್ತೆ ಶುರುವಾಗಿದೆ. ನಿಯಂತ್ರಣಕ್ಕೆ ಬರುತ್ತಿದೆ ಅನ್ನೋವಷ್ಟರಲ್ಲೇ ಮತ್ತೆ ಪರಿಸ್ಥಿತಿ ಕೈಮೀರುತ್ತಿದೆ. ಕೇಂದ್ರ ಸರ್ಕಾರ ಅನ್‌ಲಾಕ್ 6.0 ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.  

ನವದೆಹಲಿ(ನ.26):  ಕೊರೋನಾ ವೈರಸ್ ಕಾರಣ ದೇಶದಲ್ಲಿ ಹೇರಿದ್ದ ಲಾಕ್‌ಡೌನ್ ಹಂತ ಹಂತವಾಗಿ ಅನ್‌ಲಾಕ್ ಮಾಡಲಾಗಿದೆ. ಇದೀಗ ಕೇಂದ್ರ ಗೃಹ ಇಲಾಖೆ ಅನ್‌ಲಾಕಕ್ 6.0 ಮಾರ್ಗಸೂಚಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಇಲಾಖೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ಹೇರಿದೆ. ಕೆಲ ಆಯ್ದ ವಿಮಾನ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಹೈಪರ್ ಲೂಪ್ ನಲ್ಲಿ ಮೊದಲ ಸುರಕ್ಷಿತ ಪ್ರಯಾಣ ಯಶಸ್ವಿ!

ಅನ್‌ಲಾಕ್ 6.0 ಮಾರ್ಗಸೂಚಿ ಬಿಡುಗಡೆಯಾದ ಬೆನ್ನಲ್ಲೇ ಕೇಂದ್ರ ವಿಮಾನ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಿದೆ.  ಈ ಪ್ರಕಾರ ಡಿಸೆಂಬರ್ 31ರ ವರೆಗೆ ವಿಮಾನ ಹಾರಾಟ ನಿರ್ಬಂಧ ಹೇರಲಾಗಿದೆ.  ಆದರೆ ತುರ್ತ ಕಾರ್ಗೋ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ.

ಕೇವಲ 3 ನಿಮಿಷದಲ್ಲಿ ಕಾರು ವಿಮಾನವಾಗಿ ಬದಲಾಗುತ್ತೆ; ಕ್ಲೈನ್ ವಿಷನ್ ಆವಿಷ್ಕಾರ !.

ಕೊರೋನಾ ವೈರಸ್ ಕಾರಣ ಪ್ರಯಾಣ ಮತ್ತು ವೀಸಾ ನಿರ್ಬಂಧ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಈಗಾಗಲೇ ಅಂತಾರಾಷ್ಟ್ರೀಯ ಶೆಡ್ಯೂಲ್ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. 

ನವೆಂಬರ್ ತಿಂಗಳ ಆರಂಭದಲ್ಲಿ ಕೇಂದ್ರ ವಿಮಾನಯಾನ ಇಲಾಖೆ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟ ನಿಷೇಧವನ್ನು ನವೆಂಬರ್ 30ರ ವರೆಗೆ ವಿಸ್ತರಿಸಿತ್ತು. ಇದೀಗ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!
ಮೊಬೈಲಲ್ಲಿ ಲೋಕೇಷನ್‌ ಆನ್‌ಕಡ್ಡಾಯಕ್ಕೆ ಕೇಂದ್ರಕ್ಕೆ ಶಿಫಾರಸು