ರೀಲ್ಸ್ ಮಾಡುವುದಕ್ಕಾಗಿ ಎಲ್‌ಪಿಜಿ ಲೀಕ್ ಮಾಡಿದ ಅತ್ತಿಗೆ ಮೈದುನ: ಭಾರಿ ಬೆಂಕಿ 8 ಫ್ಲಾಟ್‌ಗಳಿಗೆ ಹಾನಿ

Published : Mar 09, 2025, 03:27 PM ISTUpdated : Mar 10, 2025, 10:47 AM IST
ರೀಲ್ಸ್ ಮಾಡುವುದಕ್ಕಾಗಿ ಎಲ್‌ಪಿಜಿ ಲೀಕ್ ಮಾಡಿದ ಅತ್ತಿಗೆ ಮೈದುನ: ಭಾರಿ ಬೆಂಕಿ 8 ಫ್ಲಾಟ್‌ಗಳಿಗೆ ಹಾನಿ

ಸಾರಾಂಶ

ಗ್ವಾಲಿಯರ್‌ನಲ್ಲಿ ರೀಲ್ಸ್ ಮಾಡುವಾಗ ಅತ್ತಿಗೆ ಮತ್ತು ಮೈದುನ ಎಲ್‌ಪಿಜಿ ಸಿಲಿಂಡರ್ ಲೀಕ್ ಮಾಡಿದ್ದಾರೆ. ಇದರಿಂದ 8ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿಗೆ ಹಾನಿಯಾಗಿದೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅತ್ತಿಗೆ ಮೈದುನನ ಕಿತಾಪತಿಯಿಂದಾಗಿ ಇಡೀ ಫ್ಲಾಟ್‌ನಲ್ಲಿ ದೊಡ್ಡ ಬೆಂಕಿ ಅನಾಹುತ ಸಂಭವಿಸಿ 8ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಭಾರಿ ಹಾನಿಯಾದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ರೀಲ್ಸ್‌ ಹುಚ್ಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿಗೆ ಅನೇಕರು ಅಪಾಯಕಾರಿ ಸಾಹಸಗಳನ್ನು ಮಾಡುವುದು ಇತ್ತೀಚೆಗೆ ಸಾಮಾನ್ಯ ಎನಿಸಿದ್ದು, ಇದರಿಂದ ಇತರರಿಗೂ ಭಾರಿ ತೊಂದರೆಯಾಗುತ್ತಿದೆ. ಈ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮಾಡುವ ಉಪಟಳಗಳು ಒಂದೆರಡಲ್ಲ, ಅದೇ ರೀತಿ ಇಲ್ಲೊಂದು ಕಡೆ ರೀಲ್ಸ್ ಹುಚ್ಚಿಗಾಗಿ ಅತ್ತಿಗೆ ಹಾಗೂ ಮೈದುನ ಇಬ್ಬರೂ ಸೇರಿಕೊಂಡು ಎಲ್‌ಪಿಜಿ ಗ್ಯಾಸ್‌ ಸಿಲಿಂಡರನ್ನು ಲೀಕ್ ಮಾಡಿದ್ದು, ಇದರಿಂದ ಭಾರಿ ಬೆಂಕಿ ಅನಾಹುತ ಸಂಭವಿಸಿ 8ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಭಾರಿ ಹಾನಿಯಾಗಿದೆ. 

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಘಟನೆ

ಮಧ್ಯಪ್ರದೇಶದ ಗ್ವಾಲಿಯರ್‌ನ 7 ಅಂತಸ್ಥಿನ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಎಲ್‌ಪಿಜಿ ಸಿಲಿಂಡರ್ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಪೊಲೀಸರಿಂದ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಈ ಅತ್ತಿಗೆ ಮೈದುನ ಜೋಡಿ ಈ ಹಿಂದೆಯೂ ಇಂತಹ ಅಪಾಯಕಾರಿ ಸ್ಟಂಟ್‌ಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಸಾಮಾನ್ಯವಾಗಿ ಇವರು ತಡರಾತ್ರಿಗಳಲ್ಲೇ ಈ ರೀತಿಯ ಅಪಾಯಕಾರಿ ಸಾಹಸಕ್ಕೆ ಇಳಿಯುತ್ತಿದ್ದಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಹೀಗೆ ಸಾಹಸ ಮಾಡಿ ಈಗ ಪೊಲೀಸರು ಅಥಿತಿಗಳಾದವರನ್ನು ರಂಜನಾ ಜಾಟ್ ಹಾಗೂ ಆಕೆಯ 38 ವರ್ಷದ ಸಂಬಂಧಿ ಅನಿಲ್ ಜಾಟ್ ಎಂದು ಗುರುತಿಸಲಾಗಿದೆ. ಅನಿಲ್ ಜಾಟ್‌ನ ಮೊಬೈಲ್‌ನಿಂದ ಇಂತಹ ಹಲವು ಆತಂಕಕಾರಿ ಸಾಹಸಗಳ ವೀಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 287ರ ಅಡಿ ನಿರ್ಲಕ್ಷ್ಯ ಹಾಗೂ ಸುಡುವ ವಸ್ತುಗಳನ್ನು ಅಪಾಯಕಾರಿಯಾಗಿನಿರ್ವಹಿಸಿದ ಪ್ರಕರಣ ದಾಖಲಾಗಿದೆ. 

ಬಾಂಬ್‌ ಅಂತೆ ಬ್ಲಾಸ್ಟ್ ಆಗುತ್ತೆ ಫ್ರಿಡ್ಜ್ ! ಮನೆಯಲ್ಲಿ ರೆಫ್ರಿಜರೇಟರ್‌ ಇದ್ರೆ ಈ ಎಲ್ಲ ಎಚ್ಚರಿಕೆ ಇರಲಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿಗೆ ಕೃತ್ಯ

ಆಗಿದ್ದೇನು? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿನಿಂದ ಮಹಿಳೆ ರಂಜನಾ ಜಾಟ್ ಎಲ್‌ಜಿಪಿಯನ್ನು ಲೀಕ್ ಮಾಡಿದ್ದಾರೆ ಈ ವೇಳೆ ಬೃಹತ್ ಸ್ಫೋಟ ಸಂಭವಿಸಿದ್ದು, ಅವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ ಜೊತೆಗೆ 7 ಅಂತಸ್ತಿನ ಕಟ್ಟಡದಲ್ಲಿದ್ದ ಹಲವು ಫ್ಲಾಟ್‌ಗಳಿಗೆ ಭಾರಿ ಹಾನಿಯಾಗಿದೆ. ಭಿಂದ್ ರಸ್ತೆಯ ದಿ ಲೆಗಸಿ ಪ್ಲಾಜಾ ಕಟ್ಟಡದಲ್ಲಿ ತಡ ರಾತ್ರಿ 2.15ರ  ಸಮಯದಲ್ಲಿ ಈ ಘಟನೆ ನಡೆದಿದೆ. ರಂಜನಾ ತನ್ನ ಸಂಬಂಧಿ ಅನಿಲ್ ಜಾಟ್ ಜೊತೆ ತಮ್ಮ ಮೊದಲೇನ ಮಹಡಿಯಲ್ಲಿರುವ ಮನೆಯಲ್ಲಿ ವೀಡಿಯೋ ಶೂಟ್ ಮಾಡ್ತಿದ್ದಾಗ ಸ್ಫೋಟ ಸಂಭವಿಸಿದೆ. ಗ್ಯಾಸ್ ಸೋರಿಕೆ ಮಾಡಿದ್ದೆ ಘಟನೆಗೆ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 

LPG ಗ್ಯಾಸ್ ಸೋರ್ತಿದೆ ಅಂತ ಗೊತ್ತಾದ್ರೆ, ಸೇಫ್ ಆಗಿಡೋದು ಹೇಗೆ?

ಪಿನ್‌ನಿಂದ ಚುಚ್ಚಿ ಗ್ಯಾಸ್ ಲೀಕ್, ಇಬ್ಬರ ಸ್ಥಿತಿ ಗಂಭೀರ

ರಂಜನಾ ಗ್ಯಾಸ್ ಸೋರಿಕೆ ಮಾಡಿದ್ದರೆ ಇತ್ತ ಅನಿಲ್ ಆಕೆಯ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾನೆ. ಪಿನ್ ಬಳಸಿ ಉದ್ದೇಶಪೂರ್ವಕವಾಗಿ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಮಾಡಿದ್ದಾಳೆ ಸುಮಾರು 17 ನಿಮಿಷಗಳ ಕಾಲ ಇವರು ರೀಲ್ಸ್ ಶೂಟ್ ಮಾಡಿದ್ದಾರೆ. ಇದರಿಂದ ಅಪಾರ್ಟ್‌ಮೆಂಟ್ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಇತ್ತ ಅನಿಲ್ ವೀಡಿಯೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಸಿಎಫ್‌ಎಲ್ ಲೈಟ್ ಹಾಕಿದ್ದು, ಇದು ಕಿಡಿ ಹೊತ್ತಿಕೊಂಡು ಭಯಾನಕ ಸ್ಫೋಟಕ್ಕೆ ಕಾರಣವಾಯ್ತು. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದರೆ ಇತ್ತ 8 ಫ್ಲಾಟ್‌ಗಳಿಗೆ ಭಾರಿ ಹಾನಿಯಾಗಿದೆ.  ಸ್ಫೋಟದ ತೀವ್ರತೆಯೂ ರಂಜನಾ ಅವರ ಒಂದು ಬೆಡ್‌ರೂಮ್‌ನ ಮನೆಯನ್ನು ಹಾನಿ ಮಾಡುವ ಜೊತೆಗೆ ಪಕ್ಕದಲ್ಲಿದ್ದ ಮನೆಗಳಿಗೂ ಹಾನಿ ಮಾಡಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ