ತಿನ್ನುವ ಮೊದಲು ಪ್ರಾರ್ಥನೆ ಮಾಡುವವರಿದ್ದಾರೆ, ಆದರೆ ನಾಯಿಗಳೂ ಪ್ರಾರ್ಥನೆ ಮಾಡುತ್ತಾ ? ಇಲ್ಲೊಂದು ಮುದ್ದಾದ ವಿಡಿಯೋ ವೈರಲ್ ಆಗಿದೆ
ಶ್ವಾನಗಳು ಬದ್ಧತೆ, ಪ್ರಾಮಾಣಕತೆ, ಸ್ನೇಹವನ್ನು ಕೊಡುವ ಸಾಕುಪ್ರಾಣಿ. ನಾಯಿಯನ್ನು ಸಾಕುವವರು ಮಕ್ಕಳನ್ನು ಸಾಕಿದಂತೆ ಉತ್ತಮ ಮೌಲ್ಯಗಳನ್ನು ತಮ್ಮ ನೆಚ್ಚಿನ ನಾಯಿಗೆ ಕಲಿಸುತ್ತಾರೆ. ಅದನ್ನು ತಮ್ಮ ನಾಯಿಗಳ ಜೊತೆ ತಾವೂ ಅನುಸರಿಸುತ್ತಾರೆ.
ಇಂತಹದ್ದೇ ಒಂದು ಘಟನೆಯ ವಿಡಿಯೋ ವೈರಲ್ ಆಗಿದೆ. ನೆಚ್ಚಿನ ಶ್ವಾನಗಳಿಗೆ ಉಣ್ಣುವ ಮೊದಲು ಪ್ರಾರ್ಥಿಸುವುದನ್ನು ಹೇಳಿಕೊಡುವ ಮಹಿಳೆಯ ವಿಡಿಯೋ ಎಲ್ಲೆಡೆ ಶೇರ್ ಆಗುತ್ತಿದೆ.
undefined
ದೇಸಿ ಶ್ವಾನಗಳಿಗೆ ಅಧಿಕೃತ ಸಾಕುಪ್ರಾಣಿ ಪಟ್ಟ.. ಕೇಂದ್ರದ ಹೊಸ ಯೋಜನೆ
ಊಟಕ್ಕೆ ಮುಂಚಿತವಾಗಿ ಪ್ರಾರ್ಥನೆ ಮಾಡುವುದು ದೇವರ ಎಲ್ಲಾ ಆಶೀರ್ವಾದಗಳಿಗಾಗಿ ಧನ್ಯವಾದ ಹೇಳುವ ಒಂದು ಸಂಪ್ರದಾಯವಾಗಿದೆ. ಪ್ರಾರ್ಥನೆಯು ನಿಮಗೆ ನಿಮ್ಮ ದಿನಕ್ಕಾಗಿ ದೇವರಿಗೆ ಧನ್ಯವಾದ ಹೇಳಲು ಮತ್ತು ನಿಮ್ಮ ಕಾಳಜಿಗಳನ್ನು ಆತನ ಮುಂದೆ ಹೇಳಲು ಅವಕಾಶವನ್ನು ನೀಡುತ್ತದೆ.
ವೈರಲ್ ಆಗುತ್ತಿರುವ ವಿಡಿಯೋವನ್ನು ವೈಶಾಲಿ ಮಾಥುರ್ ಎಂಬವರು ಶೇರ್ ಮಾಡಿದ್ದಾರೆ. "ನನ್ನ ಸ್ನೇಹಿತೆ ತನ್ನ ಮರಿಗಳಿಗೆ ಆಹಾರದ ಮೊದಲು ಅವರ ಪ್ರಾರ್ಥನೆಯನ್ನು ಹೇಳಲು ಕಲಿಸುವ ಈ ಸುಂದರ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದೇನೆ. ಇಬ್ಬರೂ ಒಳ್ಳೆಯ ಶ್ವಾನಗಳು ಎಂದು ನಾನು ಭಾವಿಸುತ್ತೇನೆ" ಎಂದು ಮಾಥುರ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಈ ಮನೆಯಲ್ಲಿ ನಾಯಿ ಬದಲು ನರಭಕ್ಷಕ ಹುಲಿ ಸಾಕಿದ್ದಾರಂತೆ!
ವೀಡಿಯೊದಲ್ಲಿ, ಒಬ್ಬ ಮಹಿಳೆ ತನ್ನ ಸಾಕುಪ್ರಾಣಿಗಳೊಂದಿಗೆ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ನಾಯಿಯ ಆಹಾರದ ಎರಡು ಬಟ್ಟಲುಗಳನ್ನು ಗೋಡೆಯ ಬಳಿ ಇಡಲಾಗಿರುತ್ತದೆ. ಕೈಮುಗಿದು ಮಹಿಳೆ ಪ್ರಾರ್ಥನೆಯನ್ನು ಪಠಿಸುತ್ತಾಳೆ ಮತ್ತು ನಾಯಿಮರಿಗಳನ್ನು ನೋಡುತ್ತಾಳೆ. ಸಾಕುಪ್ರಾಣಿಗಳು ಒಳ್ಳೆಯ ಮಕ್ಕಳಂತೆ ವಿಧೇಯವಾಗಿರುತ್ತದೆ. ಮಹಿಳೆ ಪ್ರಾರ್ಥನೆಯನ್ನು ಮುಗಿಸಲು ತಾಳ್ಮೆಯಿಂದ ಕಾಯುತ್ತವೆ.
Sharing this heart-warming video of my friend teaching her pups to say their prayers before food. Me thinks both are good boys. 😍 pic.twitter.com/z5ANJDVwVn
— Vaishali Mathur (@mathur_vaishali)ಮುಂದೆ ಹೋಗಿ ಆಹಾರವನ್ನು ಸೇವಿಸುವಂತೆ ಮಹಿಳೆ ಸೂಚಿಸಿದಾಗ, ನಾಯಿಮರಿಗಳು ಖುಷಿಯಲ್ಲಿ ಜಿಗಿದು ಆಹಾರದ ಬಟ್ಟಲಿನತ್ತ ಧಾವಿಸುತ್ತವೆ. ವೀಡಿಯೊ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದ್ದು, 24,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು 1,100 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.