
ದೆಹಲಿ(ಮಾ.10): ಮಹಿಳೆಯೊಬ್ಬರು ದನದ ಸೆಗಣಿಯನ್ನು ತಟ್ಟಿ ಪರ್ಫೆಕ್ಟ್ ಆಗಿ ಎತ್ತರದ ಗೋಡೆಗೆ ಎಸೆಯುವ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರ ಅವರು ಶೇರ್ ಮಾಡಿದ್ದಾರೆ.
ಗೋಡೆಯಲ್ಲಿ ಸೆಗಣಿಯನ್ನು ಅಂಟಿಸಲು ಕೆಳಗಿನಿಂದಲೇ ಅದನ್ನು ತಟ್ಟಿ ರಪ್ ರಪ್ ಅಂತ ಎಸೆಯುವ ಮಹಿಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಏನು ಅಂದ್ರೆ ಈ ಮಹಿಳೆ ಒಂದೇ ಒಂದು ಎಸೆತವನ್ನು ಮಿಸ್ ಮಾಡಲ್ಲ. ಎಸೆದಿದ್ದು ಕರೆಕ್ಟಾಗಿ ಗೋಡೆಯ ಮೇಲೆ ಹೋಗಿ ಕೂರುವುದು ನೋಡಿದರೆ ಆಶ್ಚರ್ಯ ಆಗುತ್ತೆ.
ಲೈಫ್ ಈಸ್ ಬ್ಯೂಟಿಫುಲ್ ಅಂತ ಬದುಕಿ, ಮಹಿಳಾ ದಿನಾಚರಣೆಯಂದು ಶೃತಿ ನಾಯ್ಡು ಮಾತು
ವಿಡಿಯೋ ಮೇಲೆ ಒಂದು ವಿವರಣೆ ಬರೆದಿದ್ದು, ಭಾರತದ ಬಾಸ್ಕೆಟ್ ಬಾಲ್ ತಂಡ ಇನ್ನೂ ಈ ಮಹಿಳೆಯ ಎದುರು ನೋಡುತ್ತಿದೆ ಎಂದು ಬರೆಯಲಾಗಿದೆ. ಈ ವಿಡಿಯೋ 53 ಸಾವಿರಕ್ಕೂ ಹೆಚ್ಚು ಸಲ ವೀಕ್ಷಣೆಯಾಗಿದೆ.
ಇಷ್ಟು ಪರ್ಫೆಕ್ಟ್ ಆಗಿ ಮಾಡಲು ಆಕೆಗೆ ಬಹಳ ವರ್ಷದ ಅನುಭವವಿದ್ದಿರಬೇಕು ಎಂದು ಜನ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಆಕೆ ಎಸೆದ ಎಲ್ಲ ಬಾಲ್ ಬಾಸ್ಕೆಟ್ಗೆ ಬೀಳಬಹುದು ಎಂದಿದ್ದಾರೆ. ಇನ್ನೂ ಕೆಲವರು ಇದು ಗ್ರಾಮೀಣ ಭಾರತದ ಸಾಧಾರಣ ಟ್ಯಾಲೆಂಟ್. ನಾವಿದನ್ನು ಲೈವ್ ಆಗಿ ನೋಡಿದ್ದೇವೆ ಎಂದಿದ್ದಾರೆ.
ಮಹಿಳಾ ದಿನಾಚರಣೆ: ಭಾರತದ 10 ಹೆಮ್ಮೆಯ ನಾರಿಯರು
ಹಸುವಿನ ಸೆಗಣಿಯನ್ನು ಸೋಂಕುನಿವಾರಕ ಮತ್ತು ಇಂಧನವಾಗಿ ಬಳಸಲಾಗುತ್ತದೆ. ದೇಶಾದ್ಯಂತ ಮತ್ತು ಹಿಂದೂ ಮನೆಗಳಲ್ಲಿ ಅವುಗಳನ್ನು ಹವನಗಳಲ್ಲಿ ಬಳಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ