
ಪ್ರಯಾಣಕ್ಕಾಗಿ ಅನೇಕ ಐಷಾರಾಮಿ ಸೌಲಭ್ಯಗಳು ಲಭ್ಯವಿದ್ದರೂ, ಅನೇಕ ಜನರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಏಕೆಂದರೆ, ರೈಲು ಪ್ರಯಾಣ ಅತ್ಯಂತ ಆರಾಮದಾಯಕ, ದೇಹಕ್ಕೆ ಯಾವುದೇ ರೀತಿ ಸಮಸ್ಯೆಗಳು ಇರೋದಿಲ್ಲ. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಆದರೆ ಕೆಲವೊಮ್ಮೆ ಈ ಪ್ರಯಾಣವು ಯಾವುದೋ ಕಾರಣಕ್ಕಾಗಿ ವಾದಗಳು ಮತ್ತು ಜಗಳಗಳಾಗಿ ಬದಲಾಗುತ್ತದೆ. ಈ ವಾದ ಅಥವಾ ಜಗಳ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ನಡೆಯುವ ಘಟನೆಗಳಿಂದಾಗಿ, ಪ್ರಯಾಣದ ಉದ್ದಕ್ಕೂ ಒಬ್ಬಂಟಿಯಾಗಿ ಸಾಗಬೇಕಾಗುತ್ತದೆ. ಪ್ರಸ್ತುತ, ಇಂತಹ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಲ್ಲೇನಾಯಿತು ಅನ್ನೋದರ ವಿವರ ಇಲ್ಲಿದೆ.
ನೀವು ಸೋಶಿಯಲ್ ಮೀಡಿಯಾದಲ್ಲಿದ್ದರೆ, ದಿನವಿಡೀ ಅನೇಕ ವೀಡಿಯೊಗಳನ್ನು ನೋಡುತ್ತೀರಿ. ಅವುಗಳಲ್ಲಿ ಕೆಲವು, ಜನರು ಒಂದಲ್ಲ ಒಂದು ಕಾರಣಕ್ಕಾಗಿ ರೈಲಿನಲ್ಲಿ ಪರಸ್ಪರ ಜಗಳವಾಡುವುದು ಕಂಡುಬರುತ್ತದೆ. ಈಗ ಅಂತಹ ಒಂದು ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಒಬ್ಬ ಯುವತಿ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಈ ಕಾರಣದಿಂದಾಗಿ, ಎಸಿ ಕೋಚ್‌ನಲ್ಲಿ ದೊಡ್ಡ ವಾಗ್ವಾದವೂ ನಡೆದಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ಹುಡುಗಿ ಎಸಿ ಕೋಚ್‌ನ ಸೀಟಿನಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಅವಳ ಒಂದು ಕೈಯಲ್ಲಿ ಫೋನ್ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟನ್ನು ಹಿಡಿದಿದ್ದಾಳೆ. ಈ ಬಗ್ಗೆ ಅವಳು ಕೆಲವು ಜನರೊಂದಿಗೆ ಜಗಳವಾಡುತ್ತಿದ್ದಾಳೆ. ಹೆಚ್ಚಿನವರು, ಆಕೆಗೆ ರೈಲಿನ ಬೋಗಿಯಿಂದ ಹೊರಹೋಗಿ ಸಿಗರೇಟ್ ಸೇದುವಂತೆ ಹೇಳಿದ್ದಾರೆ.
ಈ ಹಂತದಲ್ಲಿ ಯಾರೋ ಒಬ್ಬರು ತನ್ನ ವಿಡಿಯೋ ಮಾಡುತ್ತಿದ್ದಾರೆ ಎಂದು ಆಕೆಗೆ ಗೊತ್ತಾಗಿದೆ. ಅಲ್ಲಿಯವರೆಗೂ ಸಿಗರೇಟ್ ಸೇದುವ ವಿಚಾರವಾಗಿ ಮಾತ್ರವೇ ವಾಗ್ವಾದ ಮಾಡುತ್ತಿದ್ದ ಯುವತಿ, ನಂತರ ವಿಡಿಯೋ ಮಾಡಿದ್ದನ್ನೂ ಪ್ರಶ್ನೆ ಮಾಡಿದ್ದಾಳೆ. ಈ ಹಂತದಲ್ಲಿದ್ದ ಅಲ್ಲಿದ್ದ ಪ್ರಯಾಣಿಕರು ಆಕೆಗೆ ಅಲ್ಲಿಂದ ಹೋಗುವಂತೆ ಕೇಳಿದ್ದಾರೆ. ಇದನ್ನು ನಿರಾಕರಿಸಿದ ಆಕೆ ನಾನು ಎಲ್ಲಿಗೂ ಹೋಗೋದಿಲ್ಲ ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಆಕೆ ಹೊರಗೆ ಹೋಗದ ಕಾರಣ, ಯಾರೋ ಪ್ರಯಾಣಿಕರು ಆಕೆಯ ವಿಡಿಯೋ ಮಾಡಿದ್ದಾರೆ.
ನಿಮಗೆ ಅಷ್ಟು ಸಮಸ್ಯೆ ಆದರೆ, ಪೊಲೀಸರಿಗೆ ಕರೆ ಮಾಡಿ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ. ಇದಕ್ಕೆ ದನಿಗೂಡಿಸುವ ಮಹಿಳೆ, ಸರಿ ಹಾಗಿದ್ದರೆ, ಪೊಲೀಸರನ್ನು ಕರೆಯಿರಿ ಎಂದು ಉದ್ಧಟತನದ ಮಾತನಾಡಿದ್ದಾಳೆ.
ಈ ವೀಡಿಯೊವನ್ನು @Mahtoji_007 ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದ ಶೀರ್ಷಿಕೆ ಹೀಗಿದೆ, ' ಒಬ್ಬ ಹುಡುಗಿ ಚಲಿಸುವ ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದಾಳೆ. ಈ ಹುಡುಗಿ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತಿದ್ದಾಳೆ?' ಆ ವ್ಯಕ್ತಿಯು ಇದರೊಂದಿಗೆ ರೈಲ್ವೆ ಸೇವೆಯನ್ನು ಟ್ಯಾಗ್ ಮಾಡಿದ್ದಾರೆ. ನಂತರ ಕಾಮೆಂಟ್‌ನಲ್ಲಿ ರೈಲ್ವೆ ಸೇವೆಯಿಂದ ಪ್ರತಿಕ್ರಿಯೆ ಇದೆ. ಈ ಕುರಿತು ವಿವರಗಳನ್ನು ಕೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ