
ಒರ್ವ ಡೆಲಿವರಿ ಬಾಯ್ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಯುವತಿಯೊಂದಿಗೆ ಮಾತನಾಡುವಾಗ ಅವನು ಆಕೆಯ ಖಾಸಗಿ ಅಂಗ ಮುಟ್ಟಿದ್ದಾನೆ. ಇದರಿಂದಾಗಿ ಆಕೆ ತಕ್ಷಣ ಹಿಂದೆ ಸರಿದಿದ್ದಾಳೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಮುಟ್ಟಲಾಗಿದೆ ಎಂದು ತೋರುತ್ತದೆ. ಯುವತಿ ವಿಡಿಯೋ ಪೋಸ್ಟ್ ಮಾಡಿದಾಗ ಆ ಕಂಪನಿಯು ಆರಂಭದಲ್ಲಿ ಈ ವಿಷಯಕ್ಕೆ ಪ್ರತಿಕ್ರಿಯಿಸಲಿಲ್ಲ. ಆದರೆ ವಿಡಿಯೋ ವೈರಲ್ ಆದ ನಂತರ ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ದಾಳಿಗಳು ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಹುಡುಗಿಯರನ್ನು ಮುಟ್ಟಾಡುವ ದೃಶ್ಯಗಳು ಹೆಚ್ಚಾಗಿವೆ. ಇದೀಗ ಬ್ಲಿಂಕಿಟ್‌ನ ಡೆಲಿವರಿ ಬಾಯ್, ಆರ್ಡರ್ ಮಾಡಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪಾರ್ಸೆಲ್ ತಲುಪಿಸುವಾಗ ಡೆಲಿವರಿ ಬಾಯ್ ಯುವತಿಯ ಖಾಸಗಿ ಭಾಗಗಳನ್ನು ಮುಟ್ಟುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ಈ ವಿಡಿಯೋದಲ್ಲಿ, ಬ್ಲಿಂಕಿಟ್ ಹಳದಿ ಕೋಡ್ ಡ್ರೆಸ್ ಧರಿಸಿದ ಡೆಲಿವರಿ ಬಾಯ್ ಯುವತಿಗೆ ಪಾರ್ಸೆಲ್ ಕೊಟ್ಟು ಹಣ ತೆಗೆದುಕೊಳ್ಳುತ್ತಿದ್ದಾನೆ. ಆ ಸಮಯದಲ್ಲಿ ಅವನು ಇದ್ದಕ್ಕಿದ್ದಂತೆ ತನ್ನ ಕೈಯಿಂದ ಆಕೆಯ ಎದೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದನು. ಇದರಿಂದಾಗಿ, ಯುವತಿ ಅವನ ಬಗ್ಗೆ ಅಸಹನೆ ತೋರಿಸಿದಳು. ಯುವತಿ eternalxflames ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ. "ಈ ಘಟನೆ ಇಂದು ನಾನು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದಾಗ ಸಂಭವಿಸಿದೆ. ಡೆಲಿವರಿ ಬಾಯ್ ನನ್ನ ವಿಳಾಸವನ್ನು ಕೇಳಿದನು ಮತ್ತು ನನ್ನ ಖಾಸಗಿ ಅಂಗವನ್ನು ಅಸಭ್ಯವಾಗಿ ಮುಟ್ಟಿದನು. ಇಂತಹ ಘಟನೆಗೆ ಅವಕಾಶ ನೀಡಬೇಡಿ. ಬ್ಲಿಂಕಿಟ್ ಈ ಘಟನೆಗೆ ಪ್ರತಿಕ್ರಿಯಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ಇದು ಭಾರತದಲ್ಲಿ ಮಹಿಳೆಯರ ರಕ್ಷಣೆ ಕೇವಲ ತಮಾಷೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.." ಎಂದು ಬರೆದುಕೊಂಡಿದ್ದಾರೆ.
ಬ್ಲಿಂಕಿಟ್ ಆರಂಭದಲ್ಲಿ ಯುವತಿಯ ಕಾಮೆಂಟ್‌ಗಳನ್ನು ನಿರಾಕರಿಸಿತು. ಪುರಾವೆಗಳನ್ನು ಒದಗಿಸಿದ ನಂತರ ಅದು ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದುಹಾಕಿತು. ನಂತರ ಕಂಪನಿ "ಹಾಯ್.. ನೀವು ಸರಿಯಾದ ಸಮಯದಲ್ಲಿ ಹೇಳಿದ್ದನ್ನು ಅರ್ಥಮಾಡಿಕೊಂಡಿದ್ದೇವೆ. ಈ ಘಟನೆಗೆ ನಾವು ವಿಷಾದಿಸುತ್ತೇವೆ. ಪ್ರತಿಕ್ರಿಯಿಸಿದ್ದೇವೆ. ನಾವು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಹೇಳಿದೆ.
ಮುಂಬೈ ಪೊಲೀಸರು ಕೂಡ ಯುವತಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿ, "ದಯವಿಟ್ಟು ನಿಮ್ಮ ಸಂಪರ್ಕ ವಿವರಗಳನ್ನು DM ನಲ್ಲಿ ಹಂಚಿಕೊಳ್ಳಿ" ಎಂದು ತಿಳಿಸಿದ್ದಾರೆ.
X ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹೆಚ್ಚಿನ ಬಳಕೆದಾರರು ಯುವತಿಯನ್ನ ಬೆಂಬಲಿಸಿ ಬ್ಲಿಂಕಿಟ್ ಡೆಲಿವರಿ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರೆ, ಕೆಲವು ಬಳಕೆದಾರರು ಸ್ಪರ್ಶ ಆಕಸ್ಮಿಕವಾಗಿರಬಹುದು ಎಂದು ಸೂಚಿಸಿದ್ದು ಚರ್ಚೆಗೆ ನಾಂದಿ ಹಾಡಿದೆ.
"ಹೌದು, ಅವನು ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ನಿಮ್ಮ ದೇಹದ ಮೇಲ್ಭಾಗಕ್ಕೆ ತಂದು ಅನುಚಿತವಾಗಿ ನಿಮ್ಮನ್ನು ಮುಟ್ಟಿದ್ದನ್ನು ಸ್ಪಷ್ಟವಾಗಿ ಕಾಣಬಹುದು. ನೀವು ನಡುಗುತ್ತಿರುವುದನ್ನು ಕಾಣಬಹುದು. ನೀವು ಅದೃಷ್ಟವಂತರು. ಈ ರೆಕಾರ್ಡಿಂಗ್ ಇಲ್ಲದೆ ಅವನ ಅಪರಾಧವನ್ನು ಗುರುತಿಸುವುದು ಕಷ್ಟವಾಗುತ್ತದೆ. ಸರಿಯಾದ ಕ್ರಮ ತೆಗೆದುಕೊಳ್ಳಿ" ಎಂದು ಬರೆದಿದ್ದಾರೆ. ಮತ್ತೆ ಕೆಲವರು "ಇದು ಕ್ಲಿಯರ್ ಅಗಿದೆ. ಅವನು ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲ, ನೀವು ಅವನ ಬಲಗೈಯಲ್ಲಿ ಹಣವನ್ನು ಹಸ್ತಾಂತರಿಸಿದ್ದೀರಿ ಮತ್ತು ಆ ವ್ಯಕ್ತಿಯ ಎಡಗೈಯಲ್ಲಿ ಡೆಲಿವರಿ ಇತ್ತು! ನೀವು ಗಮನ ಸೆಳೆಯಲು ಬಯಸುತ್ತಿದ್ದೀರಿ! ಸಿಂಪಲ್". "ಈ ವ್ಯಕ್ತಿಯ ವರ್ತನೆ ಉದ್ದೇಶಪೂರ್ವಕವಾಗಿದ್ದವು ಮತ್ತು ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಅತ್ಯಂತ ಅನುಚಿತ ಮತ್ತು ವೈಯಕ್ತಿಕ ಸ್ಥಳ ಮತ್ತು ಸುರಕ್ಷತೆಯ ಉಲ್ಲಂಘನೆಯಾಗಿದೆ" ಎಂದೆಲ್ಲಾ ಉತ್ತರಿಸಿದ್ದಾರೆ ನೆಟ್ಟಿಗರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ