ನೀರಿಲ್ಲದ ಬಾವಿಗೆ ಹಾರಿದ ಮಹಿಳೆಯ ರಕ್ಷಿಸಿದ ಪೊಲೀಸರು

By Anusha KbFirst Published Jun 20, 2022, 9:51 AM IST
Highlights

ಲಕ್ನೋ: ನೀರಿಲ್ಲದೇ ಬತ್ತಿ ಹೋಗಿದ್ದ ತೆರೆದ ಬಾವಿಗೆ ಹಾರಿದ ಮಹಿಳೆಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಒಬ್ಬರು ಹಗ್ಗವನ್ನು ಬಾವಿಗೆ ಇಳಿಸಿ ಅದರ ಮೂಲಕ ಬಾವಿಗೆ ಇಳಿದು ಮಹಿಳೆಯ ರಕ್ಷಣೆ ಮಾಡಿದ್ದಾರೆ.

ಲಕ್ನೋ: ನೀರಿಲ್ಲದೇ ಬತ್ತಿ ಹೋಗಿದ್ದ ತೆರೆದ ಬಾವಿಗೆ ಹಾರಿದ ಮಹಿಳೆಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಒಬ್ಬರು ಹಗ್ಗವನ್ನು ಬಾವಿಗೆ ಇಳಿಸಿ ಅದರ ಮೂಲಕ ಬಾವಿಗೆ ಇಳಿದು ಮಹಿಳೆಯ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಉತ್ತರಪ್ರದೇಶ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಉತ್ತರಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶ ಪೊಲೀಸರು ಶನಿವಾರ ವಿನೂತನ ರಕ್ಷಣಾ ತಂತ್ರವನ್ನು ಬಳಸಿ ಬತ್ತಿದ ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಿದ್ದಾರೆ. ಅವರನ್ನು ಬಾವಿಯಿಂದ ರಕ್ಷಿಸುವ ಪ್ರಯತ್ನದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಗ್ಗವನ್ನು ಬಳಸಿ ಬಾವಿಯೊಳಗೆ ಇಳಿದರು. ನಂತರ ಪೊಲೀಸರು ತಾತ್ಕಾಲಿಕ ರಾಟೆಯನ್ನು ತಯಾರಿಸಿದರು. ನಂತರ ಅವರು ಮಹಿಳೆಯನ್ನು ಸುರಕ್ಷಿತವಾಗಿ  ಮೇಲೆ ತರಲು ಬಾವಿಗೆ ಇಳಿಸಿದ್ದ ಚಾರ್‌ಫೈಗೆ ಹಗ್ಗಗಳನ್ನು ಕಟ್ಟಿದರು. ನಂತರ ರಾಟೆಯ ಮೂಲಕ ಚಾರ್‌ಫೈನ್ನು ಮೇಲೆಳೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ. 

A job 'WELL' done

Responding to a distress call to rescue a woman who had jumped into a well, swiftly reached the place & rescued her using available resources.
Please Dial 112 in case of any emergency. pic.twitter.com/OJNItNlFqD

— UP POLICE (@Uppolice)

 

ರಕ್ಷಣಾ ಕಾರ್ಯಾಚರಣೆಯ  ಫೋಟೋ ಮತ್ತು ವೀಡಿಯೊಗಳನ್ನು ಟ್ವೀಟ್ ಮಾಡಿದ ಉತ್ತರ ಪ್ರದೇಶ ಪೊಲೀಸರು, ಒಂದು ಕೆಲಸ ಚೆನ್ನಾಗಿ ಮಾಡಲಾಗಿದೆ. ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಸಂಕಟದ ಕರೆಗೆ ಪ್ರತಿಕ್ರಿಯಿಸಿದ @ಹಮೀರ್‌ಪುರ ಪೊಲೀಸರು ತ್ವರಿತವಾಗಿ ಸ್ಥಳಕ್ಕೆ ತಲುಪಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅವರನ್ನು ರಕ್ಷಿಸಿದ್ದಾರೆ. ಯಾವುದೇ ತುರ್ತು ಸಂದರ್ಭದಲ್ಲಿ ದಯವಿಟ್ಟು 112 ಅನ್ನು ಡಯಲ್ ಮಾಡಿ. #UPPCares ಎಂದು ಬರೆದುಕೊಂಡಿದ್ದಾರೆ. 

ಒಂದೇ ಕುಟುಂಬದ ಮೂವರು ಸಹೋದರಿಯರು ತಮ್ಮಿಬ್ಬರ ಮಕ್ಕಳೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ!

ರಕ್ಷಣಾ ಕಾರ್ಯಾಚರಣೆಯ ವೇಳೆ ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ (Uttar Pradesh police) ಬಾವಿಗೆ ಇಳಿದಿದ್ದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ, ಕಾನ್‌ಸ್ಟೆಬಲ್ ಕಮಲ್ ಕಾಂತ್ (Kamal Kant) ಅವರು 30 ಅಡಿ ಬಾವಿಗೆ ಎಸೆಯಲ್ಪಟ್ಟಿದ್ದ ಅಪಹರಣಕ್ಕೊಳಗಾದ ಅಪ್ರಾಪ್ತನನ್ನು ರಕ್ಷಣೆ ಮಾಡಿದ್ದರು.  ಇದಾದ ಬಳಿಕ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡವ ಮೂಲಕ ರಕ್ಷಣೆ ಮಾಡಿದ ಕಾನ್‌ಸ್ಟೇಬಲ್‌ ಕಾಂತ್ ಅವರನ್ನು ಶ್ಲಾಘಿಸಿದ್ದಾರೆ.

Belagavi ಆಯತಪ್ಪಿ ಬಾವಿಗೆ ಬಿದ್ದ ಬೀದಿನಾಯಿ, ಕಚ್ಚಿದರೂ ಛಲಬಿಡದೇ ರಕ್ಷಣೆ
 

ಕಳೆದ ತಿಂಗಳು ಬಾವಿಗೆ ಬಿದ್ದ ಬೀದಿ ನಾಯಿಯನ್ನು (Street Dog) ಅರ್ಧಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿತ್ತು. ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ (Dog) ಕಚ್ಚಿದರೂ ಸಹ ಛಲಬಿಡದೇ ರಕ್ಷಣೆ ಮಾಡಿದ್ದು, ಮೇ 10ರ ಬೆಳಗ್ಗೆ ನಡೆದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ನಂತರ  ವೈರಲ್ ಆಗಿತ್ತು. ಬೆಳಗಾವಿ ನಗರದ ಕಚೇರಿ ಗಲ್ಲಿಯಲ್ಲಿ ಮಕ್ಕಳ ಕಲ್ಲೇಟಿಗೆ ಮೇ 10ರ ಬೆಳಗ್ಗೆ 10 ಗಂಟೆಗೆ ಬೀದಿ ನಾಯಿಯೊಂದು‌ ಬಾವಿಗೆ ಬಿದ್ದಿತ್ತು. ಬೀದಿನಾಯಿ ಬಾವಿಗೆ ಬಿದ್ದ ಬಗ್ಗೆ ಸ್ಥಳೀಯರು ಎಸ್ ಡಿಆರ್‌ಎಫ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ಬಾವಿಗಿಳಿದು ಬೀದಿ ನಾಯಿಯನ್ನು ರಕ್ಷಿಸಿದ್ದಾರೆ.

ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ, ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ ಕಚ್ಚಿದರೂ ಛಲಬಿಡದೇ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ್ದಾರೆ. ಬಾವಿಗೆ ಬಿದ್ದ ಬೀದಿನಾಯಿ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!