30 ವರ್ಷದ ಬಳಿಕ ಗೊತ್ತಾಯ್ತು ‘ಅವಳು’ ಅವಳಲ್ಲ ‘ಅವನು’!

By Kannadaprabha NewsFirst Published Jun 27, 2020, 8:14 AM IST
Highlights

30 ವರ್ಷದ ಬಳಿಕ ಗೊತ್ತಾಯ್ತು ‘ಅವಳು’ ಅವಳಲ್ಲ ‘ಅವನು’!| ಹೆಣ್ಣಿನ ದೇಹ ರಚನೆ, ಅನುವಂಶೀಯವಾಗಿ ಗಂಡು| 22 ಸಾವಿರ ಮಂದಿಯಲ್ಲಿ ಒಬ್ಬರಿಗೆ ಈ ರೋಗ

ಕೋಲ್ಕತಾ(ಜೂ.27): ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಆರೋಗ್ಯ ತಪಾಸಣೆ ವೇಳೆ ತಾನು ಗಂಡು ಎಂದು ಗೊತ್ತಾದ ವಿಚಿತ್ರ ಹಾಗೂ ಅಚ್ಚರಿಯ ಘಟನೆ ಕೋಲ್ಕಾತ್ತಾದಲ್ಲಿ ನಡೆದಿದೆ. ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ವರದಿಯಲ್ಲಿ ವೃಷಣದ ಕ್ಯಾನ್ಸರ್‌ ಇರುವುದು ಗೊತ್ತಾಗಿದ್ದು, ಈ ವೇಳೆ ತಾವು ಹೆಣ್ಣು ಅಲ್ಲ ಗಂಡು ಎನ್ನುವುದೂ ವೇದ್ಯವಾಗಿದೆ.

ಮಂಗಳಮುಖಿ ಎಂದು ಬಾಲಕನ ಅಣಕ, ನೊಂದವ ನೇಣಿಗೆ ಶರಣಾದ

ದೇಹ ರಚನೆ, ಧ್ವನಿ, ಸ್ತನಗಳ ಬೆಳವಣಿಗೆ, ಜನನಾಂಗ ಎಲ್ಲವೂ ಮಹಿಳೆಯರಂತಿದ್ದು, ಗರ್ಭಾಕೋಶ ಹಾಗೂ ಅಂಡಾಶಯ ಇರಲಿಲ್ಲ. ಈ ವರೆಗೆ ಅವರಿಗೆ ಋುತು ಚಕ್ರ ಕೂಡ ಉಂಟಾಗಿಲ್ಲ. ಈ ಸಮಸ್ಯೆಯನ್ನು ‘ಆ್ಯಂಡ್ರೋಜನ್‌ ಇನ್ಸೆನ್ಸಿಟಿವಿಟಿ ಸಿಂಡ್ರೋಮ್‌’ ಎನ್ನಲಾಗುತ್ತದೆ. ವ್ಯಕ್ತಿ ಅನುವಂಶೀಯವಾಗಿ ಗಂಡಾಗಿ ಹುಟ್ಟಿದರೂ, ಮಹಿಳೆಯರ ದೇಹ ಲಕ್ಷಣ ಹೊಂದಿರುತ್ತಾನೆ. ಇದು ಸಾಧಾರಣವಾಗಿ 22 ಸಾವಿರ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.

ಹೆಣ್ಣಿನ ದೇಹದಲ್ಲಿರಬೇಕಾದ ‘XX’ ಕ್ರೋಮೋಸೋಮ್‌ಗಳಿಗೆ ಬದಲಾಗಿ ಅವರ ದೇಹಲ್ಲಿ ‘XY’ ಕ್ರೋಮೋಸೋಮ್‌ ಪತ್ತೆಯಾಗಿದೆ. ದೇಹದ ಒಳಭಾಗದಲ್ಲಿ ಜನನಾಂಗ ಬೆಳವಣಿಗೆಯಾಗಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಸಲಿಂಗಿ ಸಮುದಾಯ: ಪುರಾಣಗಳೇ ಒಪ್ಪಿದ್ದನ್ನು ನಮಗೆ ಒಪ್ಪಿಕೊಳ್ಳಲೇನು ಅಡ್ಡಿ?

ಇವರು ವಿವಾಹವಾಗಿ 10 ವರ್ಷವಾಗಿದ್ದು, ಮಕ್ಕಳು ಪಡೆಯಲು ಹಲವು ಬಾರಿ ಪ್ರಯತ್ನಿಸಿದರೂ ಫಲ ಕೊಟ್ಟಿರಲಿಲ್ಲ. ಇವರ ಕಿರಿಯ ಸಹೋದರಿ ಹಾಗೂ ಕೆಲ ಕುಟುಂಬಸ್ಥರಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, ಅನುವಂಶೀಯವಾಗಿ ಬಂದಿರಬಹುದು ಎಂದು ವೈದ್ಯರಯ ಹೇಳಿದ್ದಾರೆ.

click me!