ಎಲ್ಲರ ಕಣ್ಣಂಚನ್ನು ತೇವಗೊಳಿಸುತ್ತಿದೆ ಅಪ್ಪನ ನೆನಪಿಗಾಗಿ ಮದುವೆ ದಿನ ಮಗಳು ಮಾಡಿದ ಕಾರ್ಯ

By Suvarna News  |  First Published Jan 5, 2022, 5:19 PM IST
  • ಸದಾ ಕಾಡುವ ಅಪ್ಪನ ಅಳಿಸಲಾಗದ ನೆನಪು
  • ಮದುವೆ ದಿನ ಅಪ್ಪನ ಪತ್ರವನ್ನು ವೇಲ್‌ನಲ್ಲಿ ಬರೆಸಿದ ವಧು
  • ವಧುವಿನ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಜೈಪುರ(ಜ.5): ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಒಂದು ಹಿಡಿ ಹೆಚ್ಚು ಪ್ರೀತಿ. ಅಪ್ಪನಿಗೂ ಅಷ್ಟೇ ಗಂಡು ಮಕ್ಕಳಿಗಿಂತ  ಹೆಣ್ಣು ಮಕ್ಕಳ ಮೇಲೆಯೇ  ಒಂದಷ್ಟು ಹೆಚ್ಚಿಗೆ ಪ್ರೀತಿ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟು ಕಳುಹಿಸುವಾಗಲಂತೂ ಕೆಲವು ಕುಟುಂಬಗಳಲ್ಲಿ ತಂದೆಯರು ಮಕ್ಕಳಂತೆ ಅಳುವುದನ್ನು ನಾವು ನೋಡಿದ್ದೇವೆ. ನೀವು ನೋಡಿರಬಹುದು. ಅದೇ ರೀತಿಯ ಅಪ್ಪ ಮಗಳ ಬಾಂಧವ್ಯದ ಕತೆ ಇದು. ಕಳೆದು ಹೋದ ಅಪನನ್ನು ಮದುವೆ ಸಂದರ್ಭದಲ್ಲಿ ನೆನೆದ ಮಗಳು ಅವರ ನೆನಪು ಸದಾ ಹಚ್ಚ ಹಸುರಾಗಿ ಉಳಿಯುವ ಸಲುವಾಗಿ ತಾನು ಮದುವೆಗೆ ಬಳಸುವ ವೇಲ್‌ನಲ್ಲಿ ಅಪ್ಪ ಆಕೆಗೆ ಬರೆದ ಪತ್ರವನ್ನು ಅಂಬ್ರಾಯಿಡರಿಯಲ್ಲಿ ಸ್ಟಿಚ್‌ ಮಾಡಿಸಿದ್ದಾಳೆ. ಇದು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದ್ದು, ನೋಡುಗರ ಕಣ್ಣನ್ನು ತೇವಗೊಳಿಸುತ್ತಿದೆ. 

ಮದುವೆಯ ದಿನ ಧರಿಸುವ ಉಡುಪು ಹೆಣ್ಣು ಮಕ್ಕಳ ಹೃದಯದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಹೀಗಾಗಿಯೇ ವಧು ಸುವನ್ಯಾ(Suvanya) ತನ್ನ ತಂದೆಯ ನೆನಪನ್ನು ಸದಾ ಹಸಿರಾಗಿಡಲು ಈ ಮದುವೆ ಧಿರಿಸಿನಲ್ಲಿ ಅವರ ಪತ್ರವನ್ನು ಹೊಲಿಸಿದ್ದಾಳೆ. 'ನನ್ನ ಹೃದಯದಿಂದ ನಿನಗೆ' ಎಂದು ಆಕೆ ತನ್ನ ತಂದೆಗೆ ನಮನ ಸಲ್ಲಿಸಿದ್ದಾಳೆ. ಕಳೆದ ವರ್ಷ ಮೇ ತಿಂಗಳಲ್ಲಿ ಸುವನ್ಯಾಳ ತಂದೆ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by @sunainakhera

 

ಇತ್ತೀಚೆಗೆ ಸುವನ್ಯಾ  ಅಮನ್‌ ಕಲ್ರಾ ( Aman Kalra) ಎಂಬುವವರನ್ನು ರಾಜಸ್ತಾನ (Rajasthan)ದ ಖಿಮ್ಸರ್‌ ಕೋಟೆಯಲ್ಲಿ (Khimsar Fort) ವಿವಾಹವಾದರು. ಆದರೆ ಬೇಸರದ ಸಂಗತಿ ಎಂದರೆ ಆ  ಖುಷಿಯ ಸಂದರ್ಭದಲ್ಲಿ ಆಕೆಯ ಜೊತೆ ಆಕೆಯ ಪ್ರೀತಿಯ ಅಪ್ಪನಿರಲಿಲ್ಲ. ಅವರು 2021ರ ಮೇ ತಿಂಗಳಲ್ಲಿ ತೀರಿಕೊಂಡಿದ್ದರು. ಹೀಗಾಗಿ ತನ್ನ ತಂದೆಯನ್ನು ಈ ಸಂಭ್ರಮದ ಕ್ಷಣದಲ್ಲಿ ಭಾಗಿಯಾಗಿಸುವ ಸಲುವಾಗಿ ಆಕೆ ತಂದೆ ಬರೆದ ಪತ್ರವನ್ನು ತಾನು ಧರಿಸುವ ಮದುವೆ ಧಿರಿಸಿನಲ್ಲಿ ಹೊಲಿಸಿಕೊಂಡಿದ್ದಾಳೆ. 

 
 
 
 
 
 
 
 
 
 
 
 
 
 
 

A post shared by Suvanya (@somewhatsuvv)

 

ವಧು 27 ವರ್ಷದ ಸುವನ್ಯಾ ಮೂಲತ: ಗುರುಗ್ರಾಮದವರಾಗಿದ್ದು (Gurugram) ಕಡು ಕೆಂಪು ಬಣ್ಣದ ಲೆಹೆಂಗಾದಲ್ಲಿ ಮದುವೆ ದಿನ ಮಿಂಚುತ್ತಿದ್ದರು. ಸರಳವಾದರೂ ತಮ್ಮ ತಂದೆಯ ಪತ್ರದ ಬರಹಗಳು ಅವರ ವೇಲ್‌ನಲ್ಲಿ ಇದ್ದಿದ್ದರಿಂದಲೋ ಏನೋ ಅವರು ಮತ್ತೂ ಸುಂದರವಾಗಿ ಕಾಣಿಸುತ್ತಿದ್ದರು. ಅದರಲ್ಲಿ ನನ್ನ ಹೃದಯದಿಂದ ನಿನ್ನೆಡೆಗೆ ಎಂದು ಬರೆದಿತ್ತು. ಇದನ್ನು ಡಿಸೈನರ್‌ ಸುನೈನಾ ಖೇರ್‌ (Sunaina Khera)ವಿನ್ಯಾಸಗೊಳಿಸಿದ್ದರು.  2020 ರಲ್ಲಿ  ಆಕೆಯ ಹುಟ್ಟಿದ ಹಬ್ಬದ ದಿನ ತಂದೆ ಬರೆದ ಪತ್ರ ಆದಾಗಿತ್ತು. ಡಿಸೆಂಬರ್  13. ರಂದು ಸುವನ್ಯಾ ವಿವಾಹವಾಗಿದ್ದು, ಆ ದಿನವನ್ನು ಕೂಡ ಅವರು ತುಂಬಾ ವಿಶೇಷವಾಗಿ ಆಯ್ಕೆ ಮಾಡಿಕೊಂಡಿದ್ದರು. ಡಿಸೆಂಬರ್‌  13 ಅವರ ತಂದೆ ಸೇನೆಯ ಸೇವೆಗೆ ಸೇರಿದ ದಿನವೂ ಆಗಿತ್ತು. 

ಹೂ ಹಾರ ಹಾಕೋ ಮೊದಲು ಕಿಸ್ ಕೇಳಿದ ವರ, ಕೊಟ್ಲಾ ವಧು?

ಈ ಪತ್ರವು ತನ್ನ ಹೃದಯದಲ್ಲಿ ಹೇಗೆ ವಿಶೇಷ ಸ್ಥಾನವನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳುತ್ತಾ, ವಧು ಸುವನ್ಯಾ, ನನ್ನ ತಂದೆ ಒಂದೇ ಪತ್ರವನ್ನು ಮೂರು ಬಾರಿ ವಿಭಿನ್ನ ಶಾಯಿಗಳನ್ನು ಬಳಸಿ ಬರೆದಿದ್ದರು.  ಏಕೆಂದರೆ ನಾನು ಯಾವುದನ್ನು ಇಷ್ಟಪಡುತ್ತೇನೆ ಎಂದು ಅವರಿಗೆ ಖಚಿತವಾಗಿ ತಿಳಿದಿರಲಿಲ್ಲ. ಮೂಲ ಪತ್ರವನ್ನು ಫ್ರೇಮ್‌ ಹಾಕಿ ಇರಿಸಿರುವ ಆಕೆ, ಅದನ್ನು ತಂದೆ ನೋಡಿದಾಗ ಅವರು ಎಷ್ಟು ಭಾವುಕರಾಗಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದು ಚೆನ್ನಾಗಿದೆಯೇ, ನಿನಗೆ ಇದು ತುಂಬಾ ಇಷ್ಟವಾಯಿತೇ? ಎಂದು ಅವರು ತುಂಬಿ ಬಂದ ಕಣ್ಣುಗಳನ್ನೊರೆಸುತ್ತಾ ಕೇಳಿದ್ದರು. 

ಬೆಳಗ್ಗಿನವರೆಗೂ ಮುಂದುವರೆದ ಮದುವೆ ಸಂಪ್ರದಾಯ... ಮಂಟಪದಲ್ಲೇ ನಿದ್ದೆಗೆ ಜಾರಿದ ವಧು

ಇತ್ತ ವೇಲ್‌ನಲ್ಲಿ ತನ್ನ ತಂದೆಯ ಪತ್ರವನ್ನು ಬರೆಸಿದ ಬಗ್ಗೆ ಆಕೆಯ ಕುಟುಂಬಸ್ಥರನ್ನು ಕೇಳಿದಾಗ ಅವರು, ಲೆಹೆಂಗಾವನ್ನು ನೋಡುವ ಮೊದಲು ಇದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಿದರು. ನಾವು ತಂದೆಯ ಬಗ್ಗೆ ಜಾಸ್ತಿ ಮಾತನಾಡುವುದೇ ಇಲ್ಲ ಏಕೆಂದರೆ ಅದು ನಮ್ಮ ಹೃದಯವನ್ನು ಭಾರವಾಗಿಸುತ್ತದೆ. ಆದರೆ ಈ ಐಡಿಯಾವನ್ನು ಪ್ರತಿಯೊಬ್ಬರು ಇಷ್ಟ ಪಟ್ಟಿರಬಹುದು. ನನ್ನ ಬದುಕಿನ ತುಂಬಾ ಮಹತ್ವಪೂರ್ಣವಾದ ದಿನದಂದು ನನ್ನ ತಂದೆ ಇಲ್ಲದೇ ಇರುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು ಎಂದು ವಧು ಸುವನ್ಯಾ ಹೇಳಿದ್ದಾರೆ. ಅಪ್ಪ ಹೊರಟು ಹೋದಾಗಿನಿಂದ ಇಡೀ ಪತ್ರವನ್ನು ಮತ್ತೊಮ್ಮೆ ಓದುವ ಧೈರ್ಯವನ್ನು ತಾನು ಮಾಡಿಲ್ಲ. ಆದರೂ ಅವರ ಆ ಪತ್ರ ಅವರ ಇರುವಿಕೆಯನ್ನು ತೋರಿಸಿತು ಎಂದರು.

click me!