* ಜೈಪುರದ ವರ್ಲ್ಡ್ ಟ್ರೇಡ್ ಪಾರ್ಕ್ ಮಾಲ್‌ನ ಶೋರೂಂನಲ್ಲಿ ಬಟ್ಟೆ ಕಳ್ಳತನ ಆರೋಪ
* ಮಹಿಳೆಯೊಬ್ಬರ ಬಟ್ಟೆಗಳನ್ನು ಬಲವಂತವಾಗಿ ತೆಗೆಸಿ ಪರಿಶೀಲನೆ
* ಶೋರೂಂ ಮಾಲೀಕ ಹಾಗೂ ಉದ್ಯೋಗಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
ಜೈಪುರ(ಡಿ.23): ಜೈಪುರದ ವರ್ಲ್ಡ್ ಟ್ರೇಡ್ ಪಾರ್ಕ್ ಮಾಲ್‌ನ ಶೋರೂಂನಲ್ಲಿ ಬಟ್ಟೆ ಕಳ್ಳತನ ಆರೋಪದ ಮೇಲೆ ಮಹಿಳೆಯೊಬ್ಬರ ಬಟ್ಟೆಗಳನ್ನು ಬಲವಂತವಾಗಿ ತೆಗೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮಹಿಳೆ ಶೋರೂಂ ಮಾಲೀಕ ಹಾಗೂ ಉದ್ಯೋಗಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಸಂತ್ರಸ್ತೆ ಡಿ.20 ರಂದು ರಾತ್ರಿ 7:45 ಕ್ಕೆ ಮಾಲ್‌ನಲ್ಲಿರುವ ಶೋರೂಮ್‌ಗೆ ಶಾಪಿಂಗ್‌ಗೆ ತೆರಳಿದ್ದರು. ಮಹಿಳೆ ಕೆಲವು ಉಡುಪುಗಳನ್ನು ಟ್ರಯಲ್ ಮಾಡಲು ಶೋ ರೂಂನ ಬಟ್ಟೆ ಬದಲಾಯಿಸುವ ಕೋಣೆಗೆ ಹೋಗಿದ್ದಳು. ಆದರೆ ಗಾತ್ರ ಸರಿಯಿಲ್ಲದಿದ್ದಾಗ ಸಂತ್ರಸ್ತ ಮಹಿಳೆ ತನ್ನ ಅಳತೆಯ ಬಟ್ಟೆಗಳನ್ನು ಮಾರಾಟಗಾರರಿಂದ ಕೇಳಿ ಪಡೆದಿದ್ದಾಳೆ.
ಟ್ರಯಲ್ ರೂಂನಲ್ಲಿ ಡ್ರೆಸ್ ಟ್ರೈ ಮಾಡಿದ ನಂತರ ಮಹಿಳೆ ತನಗೆ ಇಷ್ಟವಾದ ಡ್ರೆಸ್ ಹಾಕಿಕೊಂಡು ಹೊರಬಂದು ಬಿಲ್ಲಿಂಗ್ ಮಾಡಲು ಕ್ಯಾಶ್ ಕೌಂಟರ್ ಗೆ ಹೋದಳು. ಅದೇ ಸಮಯದಲ್ಲಿ, ಮಾರಾಟಗಾರ ಮಹಿಳೆಯನ್ನು ಪರೀಕ್ಷಿಸಿ ಟ್ರಯಲ್ ರೂಂಗೆ ಕೊಂಡೊಯ್ದ ಬಟ್ಟೆಯಲ್ಲಿ ಒಂದು ಕಡಿಮೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಮಹಿಳೆ ಶೋರೂಂ ಉದ್ಯೋಗಿಗೆ ತನ್ನ ಬ್ಯಾಗ್ ತೋರಿಸಿ ತನ್ನ ಲಗೇಜ್ ಕೂಡಾ ಚೆಕ್ ಮಾಡಿಸಿದ್ದಾಳೆ. ಆದರೆ ಸಂತ್ರಸ್ತೆಯ ಬ್ಯಾಗ್‌ನಲ್ಲಿ ಏನೂ ಸಿಗದಿದ್ದಾಗ, ಸೇಲ್ಸ್‌ಮ್ಯಾನ್ ಶೋರೂಮ್‌ನ ಇತರ ಸಿಬ್ಬಂದಿ ಮತ್ತು ಗಾರ್ಡ್‌ಗಳನ್ನು ಕರೆದಿದ್ದಾರೆ.
undefined
ಮಹಿಳೆ ಶೋರೂಂ ಮ್ಯಾನೇಜರ್‌ಗೆ ಸಂಪೂರ್ಣ ವಿಷಯ ತಿಳಿಸಿದರೂ ಕೇಳದೆ ಮಹಿಳಾ ಸಿಬ್ಬಂದಿಗೆ ಕರೆ ಮಾಡಿ ಬಟ್ಟೆ ಕಳಚಿ ಹುಡುಕುವಂತೆ ಹೇಳಿದ್ದಾರೆ. ಮಹಿಳಾ ಸಿಬ್ಬಂದಿ ಎಲ್ಲರ ಸಮ್ಮುಖದಲ್ಲಿ ಮಹಿಳೆಯನ್ನು ಬಟ್ಟೆ ಬದಲಾಯಿಸುವ ಕೋಣೆಗೆ ಕರೆದೊಯ್ದು ಶೋರೂಂ ಮಾಲೀಕರು ಮತ್ತು ವ್ಯವಸ್ಥಾಪಕರ ಒತ್ತಾಯದ ಮೇರೆಗೆ ಸಂತ್ರಸ್ತೆಯ ಎಲ್ಲಾ ಬಟ್ಟೆಗಳನ್ನು ತೆಗೆದು ಹುಡುಕಿದ್ದಾರೆ. ಹೀಗಿದ್ದರೂ ಯಾವುದೇ ಬಟ್ಟೆ ಪತ್ತೆಯಾಗಿಲ್ಲ.
ಈ ವೇಳೆ ಸಂತ್ರಸ್ತ ಮಹಿಳೆ ತನಗಾದ ಅವಮಾನದಿಂದ ಅಳಲಾರಮಭಿಸಿದ್ದಾರೆ. ಹೀಗಿದ್ದರೂ ಯಾರು ಆಕೆಗೆ ಸಮಾಧಾನ ಹೇಳಿಲ್ಲ. ಬಳಿಕ ಸಂತ್ರಸ್ತ ಮಹಿಳೆ ಹೆಚ್ಚುವರಿ ಆಯುಕ್ತರನ್ನು ಭೇಟಿ ಮಾಡಿ ಹೆಚ್ಚುವರಿ ಆಯುಕ್ತರ ಸೂಚನೆ ಮೇರೆಗೆ ಶೋರೂಂ ಮಾಲೀಕರು ಹಾಗೂ ನೌಕರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯ ಕುಟುಂಬಸ್ಥರು ಜವಾಹರ ವೃತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.