Approximate Drop Locations ಕ್ಯಾನ್ಸಲೇಶನ್ ತಪ್ಪಿಸಲು ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಮುಂದಾದ OLA!

By Suvarna News  |  First Published Dec 23, 2021, 7:17 PM IST
  • ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡದ ಕಾರಣ ಬುಕಿಂಗ್ ರದ್ದು
  • ಒಲಾಗೆ ಹೆಚ್ಚಿದ ಸಮಸ್ಯೆ ನಿವಾರಿಸಲು ಡ್ರೈವರ್ ಪಾಲುದಾರಿಕೆ ಹೆಚ್ಚಳ
  • ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಓಲಾ ಪ್ಲಾನ್

ಬೆಂಗಳೂರು(ಡಿ.23);  ಟ್ಯಾಕ್ಸಿ ಸೇವೆ ನೀಡುವ ಓಲಾಗೆ(Ola) ಎದುರಾಗಿದ್ದ ಸಮಸ್ಯೆ ನಿವಾರಿಸಲು ಹೊಸ ಪ್ಲಾನ್ ಜಾರಿಗೊಳಿಸಿದೆ. ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಸಾಧ್ಯವಾಗದ ಕಾರಣ ಓಲಾ ಬುಕಿಂಗ್ ಕ್ಯಾನ್ಸಲ್ ಆಗುವ ಪ್ರಕರಣಗಳೇ ಹೆಚ್ಚಾಗುತ್ತಿತ್ತು. ಹೀಗಾಗಿ ಓಲಾ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು(Drop Locations) ಮುಂದಾಗಿದೆ. ಇದಕ್ಕಾಗಿ ಡ್ರೈವರ್(Driver Partners) ಜೊತೆಗಿನ ಪಾಲುದಾರಿಕೆ ಹೆಚ್ಚಿಸಿದೆ. ಈ ಮೂಲಕ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಓಲಾ ತಯಾರಾಗಿದೆ.

ಓಲಾ ಬುಕಿಂಗ್(Ola Booking) ಮಾಡುವ ಮೊದಲೇ ನಿಗಿದಿತ ಸ್ಥಳ ಡ್ರಾಪ್ ಮಾಡುವ ಆಯ್ಕೆ ನೀಡಲಾಗಿದೆ. ಇದರಿಂದ ಡ್ರೈವರ್ ಪ್ರಯಾಣಿಕರನ್ನು ಅವರು ಇಳಿಯಲು ಬಯಸುವ ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಸಾಧ್ಯವಾಗಲಿದೆ. ಈ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಕಾರಣ ಓಲಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Latest Videos

undefined

Ola ಕಂಪನಿಯಲ್ಲಿ 10,000 ಉದ್ಯೋಗಾವಕಾಶಗಳು !

ಓಲಾ ಬುಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಡ್ರೈವರ್ ಕರೆ ಮಾಡಿ ಲೊಕೇಶನ್ ಕಾರಣದಿಂದ ಕ್ಯಾನ್ಸಲ್ ಮಾಡುತ್ತಿರುವ ಹಲವು ಘಟನೆಗಳು ನಡೆದಿದೆ. ಇಷ್ಟೇ ಅಲ್ಲ ಬಹುತೇಕ ಡ್ರೈವರ್‌ಗಳು ಓಲಾ ಮನಿ ಅಥವಾ ಆನ್‌ಲೈನ್ ಪೇಮೆಂಟ್ ಕಾರಣ ಡ್ರೈವರ್‌ಗಳು ಬುಕಿಂಗ್ ಕ್ಯಾನ್ಸಲ್ ಮಾಡಿದ ಘಟನೆಗಳು ಇವೆ. 

ಈ ಸಮಸ್ಯೆಗಳ ಕುರಿತು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಓಲಾ ಸಿಇಒ ಭವಿಶ್ ಅಗರ್ವಾಲ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಡ್ರೈವರ್ ಪಾಲುದಾರಿಕೆಯನ್ನು ಹೆಚ್ಚಿಸಿದ ಓಲಾ, ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಓಲಾ ತನ್ನ ಡ್ರೈವರ್ ಜೊತೆಗಿನ ಪಾಲುದಾರಿಕೆಯನ್ನು ಹೆಚ್ಚಿಸಿದೆ. ಇದರಿಂದ ಓಲಾ ಆ್ಯಪ್ ತನ್ನ ಡ್ರೈವರ್‌ಗಳಿಗೆ ನಿಗದಿತ ಡ್ರಾಪ್ ಲೊಕೇಶನ್ ತೋರಿಸಲಿದೆ. ಇಷ್ಟೇ ಅಲ್ಲ ಡ್ರೈವರ್ ಪ್ರಯಾಣಿಕರನ್ನು ಪಿಕ್ ಅಪ್ ಮಾಡಲು ಹಾಗೂ ಡ್ರಾಪ್ ಮಾಡಲು ನೆರವಾಗಲಿದೆ.

ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

ಈ ಕುರಿತು ಭವಿಷ್ ಅಗರ್ವಾಲ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಓಲಾ ಆ್ಯಪ್ ಮೂಲಕ ಬುಕಿಂಗ್ ಮಾಡುವಾಗ ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಹಾಗೂ ಆನ್‌ಲೈನ್ ಪೇಮೆಂಟ್ ಸಮಸ್ಯೆ ನಿವಾರಿಸಲಾಗಿದೆ ಎಂದು ಭವಿಷ್ ಹೇಳಿದ್ದಾರೆ.

ಓಲಾ ಬುಕಿಂಗ್ ಮಾಡಿದ ಬಳಿಕ ಡ್ರೈವರ್ ಕರೆ ಮಾಡಿ ಡ್ರಾಪ್ ಲೊಕೇಶನ್ ಕುರಿತು ಮಾಹಿತಿ ಕೇಳಿದ್ದಾರೆ. ಬಳಿಕ ಕರೆ ಕಟ್ ಮಾಡಿ ಬುಕಿಂಗ್ ಕ್ಯಾನ್ಸಲ್ ಮಾಡಲಾಗಿದೆ. ಈ ಕುರಿತು ಪ್ರಯಾಣಿಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ. ನಾಲ್ಕು ಬಾರಿ ಓಲಾ ಕ್ಯಾಬ್ ಬುಕ್ ಮಾಡಿ ಕೇವಲ ಡ್ರಾಪ್ ಲೊಕೇಶನ್ ಕಾರಣ ಬುಕಿಂಗ್ ಕ್ಯಾನ್ಸಲ್ ಮಾಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳಿಗೆ ಓಲಾ ಉತ್ತರ ನೀಡಿದೆ ಎಂದು ಭವಿಷ್ ಹೇಳಿದ್ದಾರೆ.

ಡ್ರೈವರ್ ಬುಕಿಂಗ್ ಕ್ಯಾನ್ಸಲ್ ಕಾರಣದಿಂದ ಹಲವು ಮೆಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಪ್ರಯಾಣಿಕ ಓಲಾ ಬುಕ್ ಮಾಡುತ್ತಿದ್ದಂತೆ ಡ್ರೈವರ್‌ಗೂ ಪ್ರಯಾಣಿಕನ ಡ್ರಾಪ್ ಲೊಕೇಶನ್ ಸ್ಫಷ್ಟವಾಗಿ ತೋರಿಸಲಿದೆ. ಇದರಿಂದ ಲೊಕೇಶನ್ ಕಾರಣ ಹೆಚ್ಚಿನ ಕ್ಯಾನ್ಸಲ್ ತಪ್ಪಲಸಿದೆ. ಲೊಕೇಶನ್ ನೋಡಿಕೊಂಡು ಡ್ರೈವರ್ ಪ್ರಯಾಣಿಕನ ರೈಡ್ ಸ್ವೀಕರಿಸಬಹುದು. ಲೊಕೇಶನ್ ಕಾರಣ ಓರ್ವ ಡ್ರೈವರ್ ಪ್ರಯಾಣಿಕರ ರೈಡ್ ಸ್ವೀಕರಿಸದಿದ್ದರೆ, ಮತ್ತೋರ್ವ ಡ್ರೈವರ್ ರೈಡ್ ಸ್ವೀಕರಿಸಬಹುದು. 

ಸದ್ಯ ಓಲಾ ಸಮಸ್ಯೆಗೆ ಉತ್ತರ ನೀಡಿದೆ ಎಂದಿದೆ. ಆದರೆ ಓರ್ವ ಪ್ರಯಾಣಿಕ ಬುಕ್ ಮಾಡಿದ ರೈಡನ್ನು ಯಾವ ಡ್ರೈವರ್ ಸ್ವೀಕರಿಸಿದಿದ್ದರೆ ಪ್ರಯಾಣಿಕ ಕ್ಯಾಬ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಲಿದೆ. ಈ ಸಮಸ್ಯೆಯನ್ನು ಓಲಾ ಯಾವ ರೀತಿ ನಿರ್ವಹಿಸಲಿದೆ ಅನ್ನೋದು ಮುಂದಿನ ಪ್ರಶ್ನೆಯಾಗಿದೆ.

click me!