Free Food ನೀಡಲು ನಿರಾಕರಿಸಿದ ಹೋಟೇಲ್‌ ಸಿಬ್ಬಂದಿಗೆ ಥಳಿಸಿದ ಮುಂಬೈ ಪೊಲೀಸರು

By Suvarna News  |  First Published Dec 23, 2021, 6:57 PM IST
  • ಹೋಟೇಲ್‌ ಸಿಬ್ಬಂದಿಗೆ ಥಳಿಸಿದ ಮುಂಬೈ ಪೊಲೀಸ್‌
  • ಆಹಾರ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ
  • ಮುಂಬೈ ಪೊಲೀಸ್‌ ಕೃತ್ಯಕ್ಕೆ ವ್ಯಾಪಕ ಖಂಡನೆ

ಮುಂಬೈ: ಉಚಿತ ಆಹಾರ ನೀಡಲು ನಿರಾಕರಿಸಿದ ಹೋಟೇಲ್‌ ಸಿಬ್ಬಂದಿಗೆ ಮುಂಬೈ ಪೊಲೀಸ್‌ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ ಘಟನೆ ಮುಂಬೈನ ಪೂರ್ವ ಸಾಂತಕ್ರೂಜ್‌ (Santacruz East) ನಲ್ಲಿ ನಡೆದಿದೆ. ಹೋಟೇಲ್‌ ಮುಚ್ಚುವ ಸಮಯಕ್ಕೆ ಹೋಟೆಲ್‌ಗೆ ಆಗಮಿಸಿದ ಪೊಲೀಸ್‌ರು ಆಹಾರ ಕೇಳಿ ಹೊಟೇಲ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಪೊಲೀಸರ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜೊತೆಗೆ ಪೊಲೀಸರ ಈ ಅಸಹ್ಯ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿಕ್ರಮ್‌ ಪಾಟೀಲ್‌ ರೆಸ್ಟೋರೆಂಟ್‌ ಒಂದಕ್ಕೆ ಮಧ್ಯರಾತ್ರಿ ಭೇಟಿ ನೀಡಿದ್ದು, ಅಲ್ಲಿನ ಸಿಬ್ಬಂದಿಗೆ ಥಳಿಸುತ್ತಿರುವ ದೃಶ್ಯ ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿದೆ. ಸಾಂತಕ್ರೂಜ್‌ನಲ್ಲಿರುವ  ಸ್ವಾಗತ್‌ ಡೈನಿಂಗ್‌ ಬಾರ್‌ (Swagat Dining Bar) ನಲ್ಲಿ ಈ ಘಟನೆ ನಡೆದಿದೆ. ಬರುವಾಗಲೇ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿಕ್ರಮ್‌ ಪಾಟೀಲ್‌ ಮದ್ಯ ಸೇವಿಸಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

He is API Vikram Patil, attached to Vakola Pol Stn of , who is seen hitting the cashier of restaurant at 12.35 am because the manager refused to give him FREE food and DRINK as the kitchen had closed: pic.twitter.com/3WrD9FocVM

— Diwakar Sharma (@DiwakarSharmaa)

Tap to resize

Latest Videos

 

ಈ ವೇಳೆ ಮಧ್ಯರಾತ್ರಿ ಸಮಯ 12.35 ಆಗಿದ್ದು, ಹೋಟೇಲ್‌ ಮ್ಯಾನೇಜರ್‌ ಗಣೇಶ್‌ ಪಾಟೀಲ್‌ (Ganesh Patil) ಇನ್ಸ್‌ಪೆಕ್ಟರ್‌ಗೆ ಅಡುಗೆ ಮನೆ ಬಂದ್‌ ಆಗಿದೆ ಎಂದು ಹೇಳಿದ್ದಾರೆ. ಆದರೆ ಈ ವೇಳೆ ಕೋಪದಿಂದ ತೂರಾಡಿದ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ( Assistant Police Inspector) ವಿಕ್ರಮ್‌ ಪಾಟೀಲ್‌ (Vikram Patil) ಅವಾಚ್ಯ ಶಬ್ಧಗಳಿಂದ  ಹೊಟೇಲ್‌ ಸಿಬ್ಬಂದಿಗೆ ನಿಂದಿಸಲು ಶುರು ಮಾಡಿದ್ದಾರೆ. ಅಲ್ಲದೇ ಕ್ಯಾಶ್‌ ಕೌಂಟರ್‌ನಲ್ಲಿದ್ದ ಮ್ಯಾನೇಜರ್‌ಗೆ ಒಂದೇ ಸಮನೇ ಹೊಡೆಯಲು ಶುರು ಮಾಡಿದ್ದಾರೆ. ಈ ವೇಳೆ ಹೊಟೇಲ್‌ನಲ್ಲಿದ್ದ ಇತರ ಸಿಬ್ಬಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌ನನ್ನು ಪಕ್ಕಕ್ಕೆ ಎಳೆದು ನಿಲ್ಲಿಸಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು  ಪೊಲೀಸ್‌ ಇನ್ಸ್‌ಪೆಕ್ಟರ್‌ ನಡತೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

Mumbai Police Helps: ವಿಶೇಷ ಚೇತನನಿಗೆ ರಸ್ತೆ ದಾಟಲು ನೆರವಾದ ಮುಂಬೈ ಟ್ರಾಫಿಕ್‌ ಪೊಲೀಸ್‌

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಜಾಲತಾಣವಾದ ಟ್ವಿಟ್ಟರ್ ಪೇಜ್‌ ಯಾವಾಗಲೂ  ವಿವಿಧ ಸುರಕ್ಷತಾ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಚಮತ್ಕಾರಿ ವಿಧಾನದಲ್ಲಿ ಜನರಿಗೆ ನೆನಪಿಸುವ ಕಾರ್ಯಕ್ಕೆ  ಹಾಗೂ ಹಾಸ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ. ಕೇವಲ ಮುಂಬೈ ಪೊಲೀಸರಲ್ಲದೇ ಇತ್ತೀಚಿನ ದಿನಗಳಲ್ಲಿ ಅನೇಕ ಪೊಲೀಸರು ಜನಸ್ನೇಹಿ ಕಾರ್ಯಗಳಿಗೆ ಹೆಸರಾಗಿದ್ದರು. ಆದರೆ ಡಿ.22 ರಂದು ನಡೆದ ಘಟನೆ ಮುಂಬೈ ಪೊಲೀಸರಿಗಿದ್ದ ಘನತೆಯನ್ನು ಕಳೆಗುಂದುವಂತೆ ಮಾಡಿದೆ. 

ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!

ಈ ಹಿಂದೆ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ರಸ್ತೆ ದಾಟಲು ಪೊಲೀಸ್‌ ಒಬ್ಬರು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊವನ್ನು ಟ್ವಿಟ್ಟರ್‌ ಪೇಜ್‌ನಲ್ಲಿ ಶೇರ್‌ ಮಾಡಲಾಗಿತ್ತು. ಮುಂಬೈನ  ಹೆಡ್ ಕಾನ್‌ಸ್ಟೇಬಲ್ ರಾಜೇಂದ್ರ ಸೋನಾವಾನೆ ಅವರು ವಿಶೇಷ ಚೇತನ ವ್ಯಕ್ತಿಗೆ ಸಹಾಯ ಹಸ್ತ ನೀಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿತ್ತು.. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ (CSMT) ರಸ್ತೆಯ ಜನನಿಬಿಡ ಜಂಕ್ಷನ್ ಅನ್ನು ದಾಟಲು ಕಷ್ಟ ಪಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಕೈ ಹಿಡಿದ ಸೋನಾವಾನೆ ಆತನನ್ನು ರಸ್ತೆ ದಾಟಿಸಿದ್ದರು. 

click me!