ಬೇಯಿಸಿದ ಮೊಟ್ಟೆ ತಿನ್ನುವ ಮೊದಲು ಎಚ್ಚರ : ಪ್ರಾಣವನ್ನೇ ಕಳೆದುಕೊಂಡ ಮಹಿಳೆ

By Suvarna NewsFirst Published Oct 15, 2021, 12:02 PM IST
Highlights
  • ಬೇಯಿಸಿದ ಮೊಟ್ಟೆಯಿಂದಾಗಿ ಹೋಯ್ತು ಮಹಿಳೆಯ ಪ್ರಾಣ
  • ಮೊಟ್ಟೆ ತಿನ್ನುವ ಮೊದಲು ಎಚ್ಚರ ವಹಿಸಿ 

ಕರ್ನೂಲ್ (ಅ.15): ಎಚ್ಚರ, ಬೇಯಿಸಿದ ಮೊಟ್ಟೆ (Boiled Egg) ತಿನ್ನುವಾಗ ಹುಷಾರಾಗಿರಿ. ಆಂಧ್ರ ಪ್ರದೇಶದ (Andhra Pradesh) ಕರ್ನೂಲ್ (Karnool) ಜಿಲ್ಲೆಯ ನೇರಲಪಲ್ಲಿ ಎಂಬಲ್ಲಿ ಮಹಿಳೆಯೋರ್ವರು (Woman) ಬೇಯಿಸಿದ ಮೊಟ್ಟೆ ತಿನ್ನುವಾಗ ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಮನೆಯಲ್ಲಿ ಮೊಟ್ಟೆ ಬೇಯಿಸಿದ್ದು ನೀಲಮ್ಮ(50) ಅದನ್ನು ಊಟದ ಜೊತೆ ಸೇವಿಸುತ್ತಿದ್ದರು. ಅದರೆ ಮೊಟ್ಟೆ ಮಹಿಳೆಯ ಗಂಟಲಿನಲ್ಲಿ ಸಿಲುಕಿಕೊಂಡು ಆಕೆ ಪ್ರಾಣ ಕಳೆದುಕೊಂಡಿದ್ದಾರೆ. 

ಮೊಟ್ಟೆ ಗಂಟಲಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಅದನ್ನು ಹೊರಕ್ಕೆ ಉಗಿಯಲು ಯತ್ನಿಸಿದ್ದಾರೆ. ಆದರೆ ಅವರ ಯತ್ನ ಫಲಿಸದೆ ಉಸಿರುಗಟ್ಟಿ (Stuck Breathing) ನಿಧನರಾಗಿದ್ದಾರೆ. 

ಬೇಯಿಸಿದ ಬಳಿಕ ಎಷ್ಟು ಸಮಯದೊಳಗೆ ಮೊಟ್ಟೆ ಸೇವಿಸಬೇಕು?

ಮೊಟ್ಟೆ ಗಂಟಲಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ನೀಲಮ್ಮ ಪ್ರಜ್ಞೆ (Unconsious) ಕಳೆದುಕೊಂಡಿದ್ದು, ಈ ವೇಳೆ ಕುಟುಂಬಸ್ಥರು ಗಂಟಲಿನಿಂದ ಮೊಟ್ಟೆ ತೆಗೆಯಲು ಯತ್ನಿಸಿದರು ಫಲಿಸದೆ ಪ್ರಾಣ ಹೋಗಿದೆ. 

ಮೊಟ್ಟೆಯನ್ನು ಕತ್ತರಿಸದೇ ಹಾಗೆಯೇ ಬಾಯಲ್ಲಿ ಇರಿಸಿಕೊಂಡಿದ್ದು ಸೀದಾ ಗಂಟಲಲ್ಲಿ ಸಿಲುಕಿಕೊಳ್ಳಲು ಕಾರಣವಾಗಿದೆ. ನಿರ್ಲಕ್ಷ್ಯದಿಂದಾಗಿ ಮಹಿಳೆ ಮೊಟ್ಟೆಯಿಂದ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. 

ಮೊಟ್ಟೆ ಹೇಗೇಗೋ ತಿಂದ್ರೂ ಅಪಾಯ: ಎಷ್ಟು ತಿಂದ್ರೆ ಓಕೆ ?

ಈ ರೀತಿ ಆಹಾರ ಪದಾರ್ಥಗಳು ಗಂಟಲಲ್ಲಿ ಸಿಲುಕಿಕೊಂಡು ಸಾವು ಸಂಭವಿಸುವುದು ಇದೇ ಮೊದಲಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು (children) ವಿವಿಧ ಆಹಾರ (Food) ಪದಾರ್ಥಗಳನ್ನು ಗಂಟಲಲ್ಲಿ ಸಿಲುಕಿಸಿಕೊಂಡು ಸಾವನ್ನಪ್ಪುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ.  ಇದೀಗ ಮಹಿಳೆಯೋರ್ವರು ಮೊಟ್ಟೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 

ನೀರು ಸಿಲುಕೊ ಸಾವನ್ನಪ್ಪಿದ್ದ ವ್ಯಕ್ತಿ

 

 ಮಂಗಳೂರಿನಲ್ಲಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿತ್ತು.  ಬಾಯಾರಿದ ಕೂಲಿ ಕಾರ್ಮಿಕ ಅವಸರದಲ್ಲಿ ನೀರು ಕುಡಿಯುವಾಗ ನೀರು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಘಟನೆ ಕೋಟೆಬಾಗಿಲಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪುತ್ತಿಗೆಪದವು ನಿವಾಸಿ ವಿಕ್ರಮ ಗೌಡ ಅವರ ಮಗ ವಸಂತ ಗೌಡ (38) ಮೃತಪಟ್ಟಿದ್ದರು.

ಮಗನ ದೇಹ ಮಣ್ಣು ಮಾಡಿದ ಪೋಷಕರು, 5 ವರ್ಷದ ನಂತರದ DNA ವರದಿ ಹೇಳಿದ್ದೇ ಬೇರೆ!

ಈತ ಕೋಟೆಬಾಗಿಲಿನಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ. ಕೆಲಸದ ಮಧ್ಯೆ ಬಾಯಾರಿಕೆಯಾಯಿತೆಂದು ಅವಸರದಲ್ಲಿ ನೀರು ಕುಡಿದಿದ್ದಾರೆ. ನೀರು ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿತ್ತೆನ್ನಲಾಗಿದ್ದು ತಕ್ಷಣ ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಿಸದೆ ಮೃತಪಟ್ಟರೆನ್ನಲಾಗಿದೆ. ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಎಂದು ಕೇಸು ದಾಖಲಾಗಿತ್ತು.

click me!