
ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದಿದ್ದಾಳೆ. ಆದರೆ ಅಲ್ಲಿ ಪೊಲೀಸರು ಹಾಗೂ ಅರ್ಚಕರು ಆಕೆಯ ವೇಷಭೂಷಣ ನೋಡಿ ಒಳಗೆ ಪ್ರವೇಶಿಸುವುದನ್ನು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವತಿ ಅಲ್ಲಿ ಅರ್ಚಕರು ಹಾಗೂ ಪೊಲೀಸರ ಜೊತೆ ಜಗಳ ಮಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ದೇಗುಲಗಳಿಗೆ ಮೈ ತೋರಿಸುವಂತಹ ಬಟ್ಟೆ ಧರಿಸಿ ಹೋಗುವಂತಿಲ್ಲ, ಕೇವಲ ಸಂಪ್ರದಾಯಿಕ ಧಿರಿಸು ಧರಿಸಬೇಕು. ಹಲವು ದೇವಸ್ಥಾನಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳು ಹಾಗೂ ಬೋರ್ಡ್‌ಗಳನ್ನು ಹಾಕಿರುವುದನ್ನು ನೀವು ನೋಡಿರುತ್ತಿರಿ. ಸೀರೆ, ಪಂಚೆ ಹಾಗೂ ಸಂಪ್ರದಾಯಿಕ ಧಿರಿಸುಗಳನ್ನು ಧರಿಸಿ ಬನ್ನಿ ಪಾಶ್ಚಿಮಾತ್ಯ ಧಿರಿಸುಗಿಗೆ ಅನುಮತಿ ಇಲ್ಲ ಎಂಬ ಬೋರ್ಡ್ಗಳು ಬಹುತೇಕ ದೇಗುಲಗಳಲ್ಲಿ ಇರುತ್ತವೆ. ಆದರೂ ಅನೇಕರು ಸ್ಲೀವ್‌ಲೆಸ್ ಬ್ಲೌಸ್, ಟೀ ಶರ್ಟ್ ಜೀನ್ಸ್ ಪ್ಯಾಂಟ್ ತೊಟ್ಟು ದೇಗುಲಕ್ಕೆ ಬರುವುದನ್ನು ಕಾಣಬಹುದು. ಹಾಗೆಯೇ ಇಲ್ಲೊಬ್ಬಳು ಯುವತಿ ಮೊಣಾಕಾಲಿಗಿಂತ ಮೇಲೆ ನಿಲ್ಲುವ ಚಡ್ಡಿ ಹಾಗೂ ಟೀ ಶರ್ಟ್ ತೊಟ್ಟು ದೇಗುಲಕ್ಕೆ ಬಂದಿದ್ದಾಳೆ. ಆದರೆ ಅಲ್ಲಿ ಅರ್ಚಕರು ಆಕೆಗೆ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಕುಪಿತಳಾದ ಆಕೆ ಅಲ್ಲಿ ಪೊಲೀಸರು ಹಾಗೂ ಅರ್ಚಕನ ಜೊತೆ ವಾಗ್ವಾದ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಹಿಂದೂ ಪವಿತ್ರ ಕ್ಷೇತ್ರ ಎನಿಸಿರುವ ಹರಿದ್ವಾರದ ದಕ್ಷಿಣ ಕಾಳಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಅರ್ಚಕರು ಆಕೆಗೆ ಪ್ರವೇಶ ನಿರಾಕರಿಸಿದ್ದಾಗ ಆಕೆ ಜಗಳ ಮಾಡಲು ಶುರು ಮಾಡಿದ್ದಾಳೆ. ಇಂತಹ ನಿಯಮಗಳನ್ನೆಲ್ಲಾ ಜನ ಮಾಡಿರೋದು ದೇವರಲ್ಲ ಎಂದು ಹೇಳುವ ಮೂಲಕ ಆಕೆ ಆಕ್ರೋಶ ಹೊರಹಾಕಿದ್ದಾಳೆ. ಈ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದೆ. ಜನ ಮಹಿಳೆಯ ವೇಷಭೂಷಣ ಹಾಗೂ ದೇವಾಲಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸುವುದಕ್ಕೆ ಈ ಘಟನೆ ಕಾರಣ ಆಯ್ತು.
ವೈರಲ್ ಆದ ವಿಡಿಯೋದಲ್ಲಿ ಮಹಿಳೆ ನಾನು ಯಾರ ಮಾತನ್ನೂ ಕೇಳುವುದಿಲ್ಲ, ನೀವು ಜನರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಬೇಕು ಎಂದು ಮಹಿಳಾ ಪೊಲೀಸ್‌ಗೆ ಆ ಮಹಿಳೆ ಹೇಳುವುದನ್ನು ಕೇಳಬಹುದು. ಇದರ ಜೊತೆಗೆ ವೀಡಿಯೋ ಮಾಡಿದ ಮಹಿಳೆಯೊಬ್ಬರ ಧ್ವನಿಯೂ ಹಿನ್ನೆಲೆಯಲ್ಲಿ ಕೇಳುತ್ತಿದ್ದು, ಅವಳು ಶಾರ್ಟ್ಸ್ ಧರಿಸಿ ದೇವಸ್ಥಾನಕ್ಕೆ ಹೋಗಿದ್ದಾಳೆ ಮತ್ತು ಈಗ ತಾನು ಮಾಡುವುದು ಸರಿ ಇದೆ ಎಂದು ಆಕೆ ಅರ್ಚಕ ಮತ್ತು ಪೊಲೀಸರೊಂದಿಗೆ ಜಗಳವಾಡುತ್ತಿದ್ದಾಳೆ, ಇವಳಿಗೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ ಎಂದು ವೀಡಿಯೋ ಮಾಡಿದ ಮಹಿಳೆ ಹೇಳಿಕೊಂಡಿದ್ದಾರೆ.
ಈ ಘಟನೆ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ದೇಗುಲದ ಅರ್ಚಕರ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ದೇಗುಲದಲ್ಲಿ ವಸ್ತ್ರಸಂಹಿತೆಯೂ ದೀರ್ಘಾಕಾಲದ ಪದ್ಧತಿಯಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ದೇವಾಲಯಗಳು ತಮ್ಮ ಎಲ್ಲಾ ಸ್ಥಳಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಹೊಂದಿವೆ, ಸ್ತ್ರೀ ಪುರುಷ ಎಂಬ ಬೇವಿಲ್ಲದೇ ಇದನ್ನು ಬಾಲ್ಯದಿಂದಲೇ ಕಲಿಸಲಾಗುತ್ತದೆ. ದುಃಖಕರವೆಂದರೆ ಜನರಿಗೆ ಸಾಮಾನ್ಯ ಜ್ಞಾನದ ಕೊರತೆ ಇರುವುದರಿಂದ ಅದನ್ನು ನಿಯಮಗಳಾಗಿ ವಿಧಿಸಬೇಕಾಗಿದೆ ಎಂದು ಒಬ್ಬರು ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ದೇವಾಲಯದ ಆಡಳಿತ ಮಂಡಳಿಯು ಕೆಲವು ಮಾರ್ಗಸೂಚಿಗಳನ್ನು ನಿಗದಿಪಡಿಸಿದಾಗ, ಅವುಗಳನ್ನು ಪಾಲಿಸಿ ನಿಮಗೆ ಇಷ್ಟವಾಗದಿದ್ದರೆ ಅಲ್ಲೊಂದು ಸೀನ್ ಸೃಷ್ಟಿಸುವ ಬದಲು ಹೊರಗೆ ಪ್ರಾರ್ಥನೆ ಮಾಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಂಪ್ರದಾಯವನ್ನು ಗೌರವಿಸುವುದು ಬಹಳ ಮುಖ್ಯ. ಹಿಂದೂ ದೇವಾಲಯಗಳು ಪಾವಿತ್ರ್ಯತೆ ಮತ್ತು ಸಂಪ್ರದಾಯವನ್ನು ಕಾಪಾಡಲು ಎಲ್ಲಾ ಸಂದರ್ಶಕರಿಗೆ ಸ್ಪಷ್ಟವಾದ ಡ್ರೆಸ್ ಕೋಡ್ ಅನ್ನು ಕಾಯ್ದುಕೊಳ್ಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ