ಸತ್ತಿದ್ದು ನವಜಾತ ಶಿಶು, ಡೆತ್ ಸರ್ಟಿಫಿಕೇಟ್ ಬಂದಿದ್ದು ಜೀವಂತ ತಾಯಿ ಹೆಸರಲ್ಲಿ! ಠಾಣೆಗೆ ಹೋದ್ರೆ ಪೊಲೀಸರು ನಿರ್ಲಕ್ಷ್ಯ

Published : Oct 01, 2026, 02:55 PM IST
alive woman gets death certificate

ಸಾರಾಂಶ

ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಸಂಚಿತಾ ಎಂಬ ಮಹಿಳೆಗೆ ಎಂಸಿಡಿ ತಪ್ಪಾಗಿ ಮರಣ ಪ್ರಮಾಣಪತ್ರ ನೀಡಿದೆ. ಮೃತಪಟ್ಟ ನವಜಾತ ಶಿಶುವಿನ ಬದಲು ಬದುಕಿರುವ ತಾಯಿಯ ಹೆಸರಿನಲ್ಲಿ ಡೆತ್ ಸರ್ಟಿಫಿಕೇಟ್ ನೀಡಿರುವುದು ಆಘಾತಕ್ಕೆ ಕಾರಣವಾಗಿದೆ.

ದೆಹಲಿ (ಅ.1): ಮಹಿಳೆಯೊಬ್ಬರು ಬದುಕಿದ್ದರೂ ಸರ್ಕಾರಿ ದಾಖಲೆಯಲ್ಲಿ 'ಸತ್ತಿದ್ದಾರೆ' ಎಂದು ಮರಣ ಪ್ರಮಾಣಪತ್ರ ನೀಡಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಂಚಿತಾ ಠಾಕೂರ್(23) ಇತ್ತೀಚೆಗೆ ಸೆ.4 ರಂದು ದೆಹಲಿಯ ಮಂಗೋಲ್ಪುರಿಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆ(Sanjay Gandhi Hospital) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೂ ಮಹಿಳೆ ಮೃತಪಟ್ಟಿದ್ದಾರೆಂದು ದಾಖಲೆ ನೀಡಿರುವ ಆಸ್ಪತ್ರೆಯ ದಾಖಲೆ ನಿರ್ವಹಣೆ, ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಹಲವು ಅನುಮಾನಗಳು ಹುಟ್ಟುಹಾಕಿದೆ.

ಮೂಲಗಳ ಪ್ರಕಾರ, ಸೆ.4ರಂದು ಜನಿಸಿದ್ದ ಮಹಿಳೆಯ ನವಜಾತ ಹೆಣ್ಣು ಮಗು ಸೆಪ್ಟೆಂಬರ್ 8ರಂದು ಅಂದರೆ ನಾಲ್ಕು ದಿನ ಬಳಿಕ ಮೃತಪಟ್ಟಿದೆ. ಆದರೆ ಮೃತಪಟ್ಟ ಮಗುವಿನ ಹೆಸರಿನ ಬದಲು ಸಂಚಿತಾ ಅವರ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ದೆಹಲಿ ಮಹಾನಗರ ಪಾಲಿಕೆ (MCD) ಈ ಪ್ರಮಾಣಪತ್ರವನ್ನು ನೀಡಿ ಯಡವಟ್ಟು ಮಾಡಿದೆ.

ಜೀವಂತ ಮಹಿಳೆಯ ಡೆತ್ ಸರ್ಟಿಫಿಕೇಟ್! ಆಸ್ಪತ್ರೆ ವಿರುದ್ಧ ಆರೋಪ

ತಾಯಿ ಸಂಚಿತಾ ಮರಣ ಪ್ರಮಾಣಪತ್ರ ನೋಡಿ ಶಾಕ್ ಆಗಿದ್ದಾರೆ. ಒಂದು ಕಡೆ ನವಜಾತ ಮಗು ಸಾವಿನ ದುಃಖ ಇನ್ನೊಂದೆಡೆ ಬದುಕಿದ್ದಾಗಲೇ ಸತ್ತಿದ್ದಾಳೆಂದು ಡೆತ್ ಸರ್ಟಿಫಿಕೇಟ್ ಕಂಡು ಆಘಾತಕ್ಕೊಳಗಾದ ಮಹಿಳೆ ಸೀದಾ ಸಂಜಯ್ ಗಾಂಧಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನ ಸಂಪರ್ಕಿಸಿದ್ದಾರೆ. ನಾನು ಬದುಕಿದ್ದಾಗಲೇ ಅದ್ಹೇಗೆ ಡೆತ್ ಪ್ರಮಾಣ ನೀಡಲಾಯ್ತು ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆಯ ಗಮನಕ್ಕೆ ತಂದರೂ ತಮ್ಮ ದೂರಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನನ್ನ ಹೆಸರಲ್ಲಿ ಮರಣಪ್ರಮಾಣ ಪತ್ರ ನೀಡಿರುವ ಬಗ್ಗೆ ಸೂಕ್ತ ತನಿಖೆ, ಕ್ರಮಕ್ಕಾಗಿ ಸಂಚಿತಾ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಪೊಲೀಸರಿಂದಾಗಲಿ, ಆಸ್ಪತ್ರೆ ಆಡಳಿತ ಮಂಡಳಿಯಿಂದಾಗಲಿ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಬೇಕು, ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಂಚಿತಾ ಒತ್ತಾಯಿಸಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ಬದುಕಿರುವ ತಾಯಿ ಸತ್ತಳೆಂದು ಮರಣ ಪ್ರಮಾಣಪತ್ರ ನೀಡಿರುವುದರಿಂದ ಸಾವನ್ನಪ್ಪಿದ ನನ್ನ ನವಜಾತ ಶಿಶುವಿನ ಮರಣ ಪ್ರಮಾಣಪತ್ರ ಹೇಗೆ ದಾಖಲಿಸಲಾಗಿದೆ? ಎಂಸಿಡಿ ಮರಣ ಪ್ರಮಾಣಪತ್ರ ತಾಯಿಯ ಹೆಸರಿನಲ್ಲಿ ಹೇಗೆ ದಾಖಲಾಯ್ತು ಎಂಬ ಬಗ್ಗೆ ಇದೀಗ ಸಂಜಯ್ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಅನುಮಾನದ ಪ್ರಶ್ನೆಗಳು ಎದ್ದಿವೆ.

ಸಂಜಯ್ ಗಾಂಧಿ ಆಸ್ಪತ್ರೆ ನಿರ್ಲಕ್ಷ್ಯ? ತನಿಖೆ ಯಾವಾಗ?

ಈ ಘಟನೆ ಸರ್ಕಾರಿ ದಾಖಲೆಗಳ ನಿರ್ವಹಣೆ ಮತ್ತು ಆಸ್ಪತ್ರೆ ಅಧಿಕಾರಿಗಳು ಅನುಸರಿಸುವ ಕಾರ್ಯವಿಧಾನದ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಷ್ಟು ಗಂಭೀರವಾದ ತಪ್ಪು ಹೇಗೆ ಸಂಭವಿಸಿತು ಎಂಬ ಬಗ್ಗೆ ಸಂಜಯ್ ಗಾಂಧಿ ಆಸ್ಪತ್ರೆ, ಸಂಬಂಧಪಟ್ಟ ಇಲಾಖೆಗಳು ಈಗ ಪರಿಶೀಲಿಸುತ್ತಿವೆ. ಈ ಪ್ರಕರಣದ ತನಿಖೆಯನ್ನು ಅಧಿಕಾರಿಗಳು ಎಷ್ಟು ಬೇಗ ಪೂರ್ಣಗೊಳಿಸುತ್ತಾರೆ, ತಪ್ಪಿತಸ್ಥರಿಗೆ ಯಾವ ಶಿಕ್ಷೆ ಎಂಬುದು ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಂಭಮೇಳ ವೈರಲ್ ಮೊನಾಲಿಸಾಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ನಗರಾಧಿಕಾರಿ ಆದೇಶ ರದ್ದು
ಸಮುದ್ರದ ನೀರು ದಿಢೀರ್ ಸಿಹಿಯಾದರೆ ಏನಾಗುತ್ತೆ ಗೊತ್ತಾ? ಭೂಮಂಡಲಕ್ಕೆ ಈ ಮಹಾ ಗಂಡಾಂತರ ಖಚಿತ!