
ಇಂದೋರ್ (ಅ.01) ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಗಿ ಮೊನಾಲಿಸಾ ಭೋಸ್ಲೆ ಕೆಲವೇ ದಿನಗಳಲ್ಲಿ ಭಾರತದ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಳು. ಸಿನಿಮಾದಲ್ಲಿ ಆಫರ್, ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಮೊನಾಲಿಸಾ ಕಾಣಿಸಿಕೊಳ್ಳುವ ಮೂಲಕ ಸೆಲೆಬ್ರೆಟಿಯಾಗಿ ಉತ್ತಮ ಆದಾಯ ಪಡೆಯಲು ಆರಂಭಿಸಿದ್ದಳು. ಇದರ ನಡುವೆ ಪೋಷಕರ ಇಚ್ಚೆಗೆ ವಿರುದ್ಧವಾಗಿ ಫರ್ಮಾನ್ ಖಾನ್ ಜೊತೆ ವಿವಾಹವಾಗಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು. ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೆ, ಸೋಶಿಯಲ್ ಮೀಡಿಯಾಗಳಲ್ಲೂ ಆಕ್ರೋಶ ಹೆಚ್ಚಾಗಿತ್ತು. ಇದರ ನಡುವೆ ಮೊನಾಲಿಸಾ ಹುಟ್ಟಿದ ದಿನಾಂಕ ಕುರಿತು ಕೋಲಾಹವೇ ಎದ್ದಿತ್ತು. ಮೊನಾಸಿಲಾ ಅಪ್ರಾಪ್ತೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತು ಪ್ರಕರಣದಲ್ಲಿ ಮೊನಾಸಿಲಾಗೆ ಮಧ್ಯಪ್ರದೇಶ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಮೊನಾಲಿಸಾ ಭೋಸ್ಲೆ ಹುಟ್ಟಿದ ದಿನಾಂಕ ಕುರಿತು ತೀವ್ರ ಗೊಂದಲ ಸೃಷ್ಟಿಯಾಗಿತ್ತು. 2008 ಎಂದಿದ್ದ ಡೇಟ್ ಆಫ್ ಬರ್ತ್ ದಾಖಲೆಯನ್ನು ಬಳಿಕ 2009 ಎಂದು ಬದಲಿಸಲಾಗಿತ್ತು. ಈ ಕುರಿತು ನಗರಾಧಿಕಾರಿ ಆದೇಶವನ್ನು ಹೊರಡಿಸಿದ್ದರು. ಆದರೆ ದಿನಾಂಕ ಬದಲಾವಣೆ ವೇಳೆ ಮೊನಲಿಸಾ ಭೋಸ್ಲೆ ವಾದವನ್ನು ಅಧಿಕಾರಿಗಳು ಆಲಿಸಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ನಗರಾಧಿಕಾರಿ ಹೊರಡಿಸಿದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂಧೋರ್ ಪೀಠ ರದ್ದುಗೊಳಿಸಿದೆ. ಇಷ್ಟೇ ಅಲ್ಲ ಪುನರ್ ಪರಿಶೀಲನೆ ನಡೆಸಿ, ಮೊನಾಲಿಸಾ ಅವರ ಅಭಿಪ್ರಾಯವನ್ನು ಕೇಳುವಂತೆ ಸೂಚಿಸಿದೆ.
ಮೊನಲಿಸಾ ಅವರ ಹುಟ್ಟಿ ದಿನಾಂಕ ಜನವರಿ 1, 2008 ಎಂದು ನೋಂದಾವಣೆಯಾಗಿತ್ತು. ಫರ್ಮಾನ್ ಖಾನ್ ಮದುವೆ ಬಳಿಕ ಮೊನಾಲಿಸಾ ಪೋಷಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ದಾಖಲೆಗಳನ್ನು ತೆಗೆದು ಮೊನಾಲಿಸಾ ಅವರ ನಿಜವಾದ ಹುಟ್ಟಿದ ದಿನಾಂಕ ಜನವರಿ 30, 2009 ಎಂದು ಹೇಳಿದ್ದರು. ಬಳಿಕ ಸರಿಯಾದ ಹುಟ್ಟಿ ದಿನಾಂಕ ನೀಡುವಂತೆ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಸಮುದಾಯ ಆರೋಗ್ಯದ ಕೇಂದ್ರದ ಅಧಿಕಾರಿಗಳು ನಗರಾಧಿಕಾರಿಗಳಿಗೆ ರವಾನೆ ಮಾಡಿದ್ದರು. ಈ ಅರ್ಜಿ ಪರಿಶೀಲನೆ ನಡೆಸಿದ ನಗರಾಧಿಕಾರಿ 2008ರ ಹುಟ್ಟಿದ ದಿನಾಂಕ ನೋಂದಣಿ ರದ್ದು ಮಾಡಿ 2009 ಎಂದು ಆದೇಶ ನೀಡಿದ್ದರು. ಇದೀಗ ಈ ಆದೇಶದಲ್ಲಿ ಮೊನಾಲಿಸಾ ವಾದವನ್ನು, ಅಭಿಪ್ರಾಯವನ್ನು ಕೇಳಿಲ್ಲ. ಹೀಗಾಗಿ ಆದೇಶ ರದ್ದುಗೊಳಿಸಿದ ಹೈಕೋರ್ಟ್, ಪುನರ್ ಪರಿಶೀಲಿಸುವಂತೆ ಸೂಚಿಸಿದೆ.
ಫರ್ಮಾನ್ ಮದುವೆ ವೇಳೆ ಮೊನಾಲಿಸಾ ಅಪ್ರಾಪ್ತೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಮೊನಾಲಿಸಾಗೆ ಶಾಲಾ ದಾಖಲೆಗಳು ಲಭ್ಯವಿಲ್ಲ. ಹೀಗಾಗಿ ಹುಟ್ಟಿದ ದಿನಾಂಕದ ಕುರಿತು ಗೊಂದಲ ಹೆಚ್ಚಾಗಿತ್ತು. ರಾಷ್ಟ್ರೀಯ ಪರಿಶಿಷ್ಟ ಜನಜಾತಿ ಆಯೋಗ (NCST) ಆಸ್ಪತ್ರೆ ದಾಖಲೆ ಪರಿಶೀಲಿಸಿ ಮೊನಾಲಿಸಾ ಡೇಟ್ ಆಫ್ ಬರ್ತ್ ಜನವರಿ 30, 2009 ಎಂದು ಉಲ್ಲೇಖಿಸಿತ್ತು. ಹೀಗಾಗಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯ ಮದುವೆ ಪ್ರಕರಣ ಗಂಭೀರ ಸ್ಪರೂಪ ಪಡೆದುಕೊಂಡಿತ್ತು. ಈ ಕುರಿತು ರಕ್ಷಣೆ ಕೋರಿ ಹೈಕೋರ್ಟ್ ಪ್ರವೇಶಿಸಿದ್ದ ಮೊನಾಲಿಸಾಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ