ಅಜ್ಮೇರ್ ದರ್ಗಾದ ಒಳಗೆ ಮಹಿಳೆಯ ನೃತ್ಯ ವೈರಲ್: ವ್ಯಾಪಕ ಆಕ್ರೋಶ

Published : Jun 28, 2023, 05:59 PM IST
ಅಜ್ಮೇರ್ ದರ್ಗಾದ ಒಳಗೆ ಮಹಿಳೆಯ ನೃತ್ಯ ವೈರಲ್: ವ್ಯಾಪಕ ಆಕ್ರೋಶ

ಸಾರಾಂಶ

ರಾಜಸ್ಥಾನದ ಪ್ರಸಿದ್ಧ ಸೂಫಿ ಸಂತರ ತಾಣ ಅಜ್ಮೇರ್ ದರ್ಗಾದ ಒಳಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದು ಅಜ್ಮೀರ್ ಷರೀಫ್ ದರ್ಗಾದ ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಅಜ್ಮೇರ್: ರಾಜಸ್ಥಾನದ ಪ್ರಸಿದ್ಧ ಸೂಫಿ ಸಂತರ ತಾಣ ಅಜ್ಮೇರ್ ದರ್ಗಾದ ಒಳಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದು ಅಜ್ಮೀರ್ ಷರೀಫ್ ದರ್ಗಾದ ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಅಜ್ಮೀರ್ ದರ್ಗಾ ಷರೀಫ್ ಆವರಣದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೂಫಿ ದೇಗುಲದ ಪಾಲಕರಾಗಿರುವ ಖದೀಮ್ಸ್ ಎಂದು ಕರೆಯಲ್ಪಡುವ  ಧಾರ್ಮಿಕ ನಾಯಕರು, ಧಾರ್ಮಿಕ ಸ್ಥಳದಲ್ಲಿ ಮಹಿಳೆಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೀಡಿಯೋದಲ್ಲಿ ಅಪರಿಚಿತ ಮಹಿಳೆಯೊಬ್ಬರು ಸೂಫಿ ಸಂತರ ದರ್ಗಾದ ಧಾರ್ಮಿಕತೆಯನ್ನು ಗೌರವಿಸದೇ ಡಾನ್ಸ್ ಮಾಡಿದ್ದಾರೆ. ಈ ವೀಡಿಯೋ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಮಹಿಳೆ, ಬೂದು ಮತ್ತು ಗುಲಾಬಿ ಬಣ್ಣದ ಕುರ್ತಾ ಹಾಗೂ ದುಪಟ್ಟಾವನ್ನು ಧರಿಸಿ, ಇಯರ್‌ಫೋನ್‌ಗಳನ್ನು ಹಾಕಿಕೊಂಡು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾಳೆ. ಧಾರ್ಮಿಕ ಕೇಂದ್ರ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಮಹಿಳೆ ನೃತ್ಯ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಅಜ್ಮೇರ್ ದರ್ಗಾವೂ ರಾಜಸ್ಥಾನದ ತಾರಾಗರ್ ಬೆಟ್ಟದ ತಪ್ಪಲಿನಲ್ಲಿರುವ ಪ್ರಸಿದ್ಧ ಸೂಫಿ ತೀರ್ಥಕ್ಷೇತ್ರವಾಗಿದೆ. 13 ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯವರ ದರ್ಗಾ ಇದಾಗಿದೆ. 

ಅರ್ಜುನ್ ಕಪೂರ್ ಬರ್ತ್‌ಡೇಯಲ್ಲಿ ಚೈಯಾ ಚೈಯಾ ಹಾಡಿಗೆ ಮಲೈಕಾ ಡ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೋಲ್‌

ವರದಿಗಳ ಪ್ರಕಾರ ಈ ದರ್ಗಾಕ್ಕೆ ಭೇಟಿ ನೀಡಿದ ಇತರ ಪ್ರವಾಸಿಗರು ಈ ವೀಡಿಯೋವನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ದರ್ಗಾದ ಖದೀಮ್ಸ್‌ಗಳು, ಮಹಿಳೆ ಇದೊಂದು ಪವಿತ್ರ ಕ್ಷೇತ್ರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ದೇಶದ ಅತ್ಯಂತ ಪೂಜ್ಯ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಅಜ್ಮೀರ್ ದೇಗುಲಕ್ಕೆ ಹಲವು ಸಮುದಾಯಗಳ ಜನ ಭೇಟಿ ನೀಡುತ್ತಾರೆ.

ದೇಗುಲ, ಧಾರ್ಮಿಕ ಸ್ಥಳಗಳು ಎಂಬುದನ್ನು ಲೆಕ್ಕಕ್ಕೆ  ತೆಗೆದುಕೊಳ್ಳದೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಎಲ್ಲೆಂದರಲ್ಲಿ ಕುಣಿಯುತ್ತಾ ವೀಡಿಯೋ ರೆಕಾರ್ಡ್ ಮಾಡುವುದು ಇತ್ತೀಚೆಗೆ ಸಾಮಾನ್ಯ ಎನಿಸಿದ್ದು, ಈ ವರ್ತನೆಗೆ ಎಲ್ಲೆಡೆ ತೀವ್ರ ಆಕ್ರೋಶ ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೆ ನಿಯಮಗಳನ್ನು ಹೇರಬೇಕು ಎಂದು ಜನ ಆಗ್ರಹಿಸಿದ್ದಾರೆ. ಹಾಗಂತ ಇದೇನು ಮೊದಲ ಪ್ರಕರಣವಲ್ಲ, ಈ ಹಿಂದೆ ಉಜ್ಜಯಿನಿಯ ಮಹಾಕಾಲ್ ದೇಗುಲದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡಿದ ವೀಡಿಯೋ ಕೂಡ ವೈರಲ್ ಆಗಿ ನಂತರ ಭಾರಿ ವಿವಾದಕ್ಕೆ ಕಾರಣವಾಗಿತ್ತು.

'ಬುಟ್ಟ ಬೊಮ್ಮಾ' ಹಾಡಿಗೆ ಪೂಜಾ ಹೆಗ್ಡೆ ಮತ್ತು ವಿಜಯ್ ರೀಲ್ಸ್; ವೈರಲ್ ವಿಡಿಯೋ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ