ಪತಿ ಜೊತೆ ಕಲಹ : 5 ಹೆಣ್ಣು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ತಾಯಿ

By Kannadaprabha News  |  First Published Jun 11, 2021, 8:38 AM IST
  • ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣು
  • ಐವರು ಹೆಣ್ಣುಮಕ್ಕಳೊಂದಿಗೆ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
  •  ಛತ್ತೀಸ್‌ಗಢದ ಮಹಾಸಮುಂದ್‌ ಜಿಲ್ಲೆಯ ರೈಲ್ವೆ ಕ್ರಾಸಿಂಗ್‌ ಬಳಿ ಘಟನೆ

ರಾಯ್ಪುರ (ಜೂ.11): ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬಳು, ತನ್ನ ಐವರು ಹೆಣ್ಣುಮಕ್ಕಳೊಂದಿಗೆ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಛತ್ತೀಸ್‌ಗಢದ ಮಹಾಸಮುಂದ್‌ ಜಿಲ್ಲೆಯ ರೈಲ್ವೆ ಕ್ರಾಸಿಂಗ್‌ ಬಳಿ ಬುಧವಾರ ರಾತ್ರಿ ನಡೆದಿದೆ. 

ಮಾಹಿತಿ ಪ್ರಕಾರ ಮೃತ ಉಮಾ ಸಾಹು (45) ಮತ್ತು ಪತಿಯೊಂದಿಗೆ ಗಲಾಟೆ ಆಗಿತ್ತು. 

Tap to resize

Latest Videos

10 ವರ್ಷದ ಬಾಲಕಿ ಮೇಲೆ ಎರಗಿದ 8 ಕಾಮುಕರು; ಇದರಲ್ಲಿ 7 ಮಂದಿ ಅಪ್ರಾಪ್ತರು!

ಇದರಿಂದ ನೊಂದು ರಾತ್ರೋರಾತ್ರಿ ತನ್ನ ಐವರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಬಂದು ಚಲಿಸುತ್ತಿರುವ ರೈಲಿಗೆ ಅಡ್ಡನಿಂತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳು 18,16,14,12 ಮತ್ತು 10 ವಯೋಮಾನದವರಾಗಿದ್ದಾರೆ.  

ಬೆಂಗಳೂರಲ್ಲೊಬ್ಬ ಸೈಕೋ ಗಂಡ : ಬೇರೆಯವ್ರ ಜೊತೆ ಸೆಕ್ಸ್ ಮಾಡೆಂದು ಹೆಂಡ್ತಿಗೆ ಟಾರ್ಚರ್ ...

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

click me!