ನವದೆಹಲಿ(ಜೂ.10): ಮನಸ್ಸು ಕದಡುವ, ಕೇಳಲು ಇಷ್ಟಪಡದ ರೀತಿಯಲ್ಲಿ ಅತ್ಯಾಚಾರವೊಂದು ನಡೆದಿದೆ. 10 ವರ್ಷದ ಬಾಲಕಿ ಮೇಲೆ 8 ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣದ ರೆವಾರಿ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರವನ್ನು ಮೊಬೈಲ್ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

ತನ್ನ ಸಾಲ ಸೆಟಲ್ ಮಾಡಲು ಪತ್ನಿಯನ್ನೇ ಗೆಳೆಯರಿಗೆ ಬಿಟ್ಟುಕೊಟ್ಟ!...

ಬಾಲಕಿ ಮೇಲೆರಗಿದ ಕಾಮುಕರ ಪೈಕಿ 7 ಮಂದಿ ಅಪ್ರಾಪ್ತರು ಅನ್ನೋದು ಮತ್ತೊಂದು ಆಘಾತಕಾರಿ ಅಂಶ.  ಮತ್ತೊರ್ವ 18 ತುಂಬಿದ ಯುವಕ. ಇದೀಗ ಅಪ್ರಾಪ್ತರನ್ನು ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಲಾಗಿದ್ದರೆ. 18ರ ಯುವಕನನ್ನು ಬಂಧಿಸಲಾಗಿದೆ.

ಘಟನೆ ವಿವರ:
ಲಾಕ್‌ಡೌನ್ ಕಾರಣ ಶಾಲಾ-ಕಾಲೇಜು ಬಂದ್ ಆಗಿವೆ. ರೆವಾರಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿನ ಶಾಲೆ ಮುಚ್ಚಲಾಗಿದೆ. ಬಾಲಕಿ ಮನೆ ಪಕ್ಕದಲ್ಲಿರುವ ಇದೇ ಶಾಲೆಯಲ್ಲಿ 10 ವರ್ಷದ ಬಾಲಕಿ ಹಾಗೂ ಬಾಲಕಿಯ ಸುತ್ತ ಮುತ್ತಲಿನ ಮನೆಯ 10 ರಿಂದ 15 ವರ್ಷದ ಬಾಲಕರು ಆಟವಾಡಿದ್ದಾರೆ. ಇವರ ಜೊತೆ 18 ವರ್ಷದ ಯುವಕನೂ ಸೇರಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯ​ರಿಂದ​ಲೇ ಯುವತಿ ಮೇಲೆ ಗ್ಯಾಂಗ್‌​ರೇ​ಪ್‌!...

ಆಟವಾಡುತ್ತಿದ್ದ ಬಾಲಕಿ ಮೇಲೆ 7 ಬಾಲಕರು ಹಾಗೂ 18 ತುಂಬಿದ ಯುವಕನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಸಂಪೂರ್ಣ ಘಟನೆಯನ್ನು ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾರೆ. ಬಳಿಕ ತಮ್ಮ ಗೆಳೆಯರಿಗೆ ಹಂಚಿದ್ದಾರೆ.

ಈ ವಿಡಿಯೋ ಬಾಲಕಿ ತಂದೆಯ ಮೊಬೈಲ್‌ಗೂ ರವಾನೆಯಾಗಿದೆ. ಪರಿಸ್ಥಿತಿ ಕೈಮೀರಿದೆ ಎಂದರಿತ ಬಾಲಕಿ ತಂದೆ ದೂರು ನೀಡಿದ್ದಾರೆ. ತಕ್ಷಣವೇ ದೂರು ದಾಖಲಿಸಿದ ಪೊಲೀಸರು 8 ಮಂದಿಯನ್ನೂ ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ರರನ್ನು ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಲಾಗಿದ್ದರೆ , 18 ವರ್ಷದ ಯುವಕನ್ನು ಬಂಧಿಸಲಾಗಿದೆ.