ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದಾಕೆಯ ರಕ್ಷಿಸಿದ ಕಣಜದ ಹುಳುಗಳು

By Anusha KbFirst Published May 11, 2022, 4:16 PM IST
Highlights
  • ಆತ್ಮಹತ್ಯೆ ಮಾಡಿಕೊಳ್ಳಲು ಟವರ್‌ ಏರಿದ ಮಹಿಳೆ
  • ಕುಟುಕಿ ಕೆಳಗಿಳಿಸಿದ ಕಣಜದ ಹುಳುಗಳು
  • ಪೊಲೀಸರು ಮನವೊಲಿಕೆಗೆ ಬಗ್ಗದ ಮಹಿಳೆ ಕಣಜದ ಹುಳುಗಳಿಗೆ ಶರಣಾದಳು

ಕೇರಳ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್‌ ಏರಿದ ಮಹಿಳೆಯೊಬ್ಬರನ್ನು ಕಣಜದ ಹುಳುಗಳು (wasps) ರಕ್ಷಿಸಿದ ಘಟನೆ ಕೇರಳದ ಆಲಪ್ಪುಳ ಕರಾವಳಿಯ ಕಾಯಂಕುಲಂ (Kayamkulam) ನಲ್ಲಿ ನಡೆದಿದೆ. ಸೋಮವಾರ ಸಂಜೆ ಮಹಿಳೆಯೊಬ್ಬರು ಕಾಯಂಕುಲಂನಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ (mobile tower) ಅನ್ನು ಏರಿದ್ದರು. ಮಹಿಳೆ ಟವರ್ ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದ ವಿಷಯ ತಿಳಿದು ಅಲ್ಲಿ ಸೇರಿದ ಜನ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ (mobile tower) ಹಾಗೂ ಅಗ್ನಿಶಾಮಕ ಸಿಬ್ಬಂದಿ (fire service personnel) ಮಹಿಳೆಯ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಮಾತ್ರ ಯಾರ ಮಾತು ಕೆಳದೇ ಮೇಲೆ ಮೇಲೆ ಏರಿ ಹಾರುವ ಬೆದರಿಕೆ ವೊಡ್ಡಿದ್ದಳು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ (fire crew) ಟವರ್‌ನ ಕೆಳಭಾಗದಲ್ಲಿ ಸೇಫ್ಟಿ ನೆಟ್(ಕೆಳಗೆ ಹಾರಿದರು ಜೀವಕ್ಕೆ ಹಾನಿಯಾಗದಂತೆ ರಕ್ಷಿಸುವ ನೆಟ್‌) ಅಳವಡಿಸಿದರು. 

ಈ ವೇಳೆ ಬಿಎಸ್‌ಎನ್‌ಎಲ್ ಟವರ್ ತುದಿಯಲ್ಲಿ ಕಣಜದ ಗೂಡೊಂದು (wasp nest) ಇದ್ದು, ಅವುಗಳು ಮಹಿಳೆಯ ಆಗಮನದಿಂದ ವಿಚಲಿತಗೊಂಡಿವೆ. ಗೂಡಿನಿಂದ ಎದ್ದು ಆಕೆಯ ಸುತ್ತ ಸುತ್ತ ಹಾರಲಾರಂಭಿಸಿದ ಕಣಜಗಳು ಅವಳಿಗೆ ಕುಟುಕಿವೆ. ಇದರಿಂದ ಗಾಬರಿಯಾದ ಆಕೆ ಟವರ್‌ನಿಂದ ಕೆಳಗೆ ಇಳಿಯಲು ಆರಂಭಿಸಿದ್ದಾಳೆ. ಕೆಳಗೆ ಸಮೀಪಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಅಳವಡಿಸಿದ ಸುರಕ್ಷತಾ ಬಲೆಗೆ ಹಾರಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮನವೊಲಿಸಿದರು ಕೆಳಗಿಳಿಯಾದ ಆಕೆಯನ್ನು ಕಣಜಗಳು ಕುಟುಕಿ ಕೆಳಗಿಳಿಸಿವೆ. ಹೀಗಾಗಿ ಕಣಜಗಳೇ ಆಕೆಯ ಪ್ರಾಣ ಉಳಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪಕ್ಷ ಕಡೆಗಣಿಸಿದ್ದಕ್ಕೆ ಟವರ್ ಏರಿದ!

ಈ ಮಹಿಳೆ ತಮಿಳುನಾಡು (Tamil Nadu) ಮೂಲದವರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಈಕೆಯ ಮಗುವನ್ನು ಪತಿ ಕರೆದೊಯ್ದು ವಾಪಸ್‌ ಹಿಂದಿರುಗಿಸಿಲ್ಲ ಎಂದು ಆತ ತನ್ನ ಮಗುವನ್ನು ಹಿಂದಿರುಗಿಸದೇ ಇದ್ದಲ್ಲಿ ಕೆಳಗೆ ಧುಮುಕುವುದಾಗಿ ಆಕೆ ಟವರ್ ಏರಿ ಬೆದರಿಕೆ ಹಾಕಿದ್ದಳು. ಘಟನೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಆಕೆಯ ಪತಿ ಮತ್ತು ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳು ಹೇಳಿವೆ.

ಮಂಗಳೂರು ಗಲಭೆ: ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ಕೇರಳದ ಸಾವಿರಾರು ಜನರಿಗೆ ನೋಟಿಸ್
 

ಕಳೆದ ಜನವರಿಯಲ್ಲಿ ಪತ್ನಿ ಮುನಿಸಿಕೊಂಡು ಹೋಗಿದ್ದಾಳೆಂದು ಮನನೊಂದ ವ್ಯಕ್ತಿಯೊಬ್ಬ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ(Mysore)  ವಿದ್ಯಾರಣ್ಯಪುರಂನಲ್ಲಿ (vidhyaranyapuram) ನಡೆದಿತ್ತು. ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್‌ (Gowri Shankar) ಎಂಬವರೇ ಟವರ್‌ ಹತ್ತಿ ಆತ್ಮಹತ್ಯೆಗೆ ಯತ್ನಿಸಿದವರು. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಇದರಿಂದ ಮನನೊಂದ ಪತ್ನಿ ಮನೆ ಬಿಟ್ಟು ಹೋಗಿದ್ದರು. ಹೀಗಿರುವಾಗ, ನನಗೆ ಪತ್ನಿ (Wife) ಬೇಕು. ಆಕೆ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೊಬೈಲ್‌ ಟವರ್‌ ಏರಿ ಗೌರಿಶಂಕರ್‌ ಬೆದರಿಕೆ ಹಾಕಿದ್ದರು.

ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೌರಿಶಂಕರ್‌ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೌರಿಶಂಕರ್‌ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

click me!