SP Balasubramaniam Road : ಕಾಮ್ದಾರ್ ನಗರ ರಸ್ತೆಗೆ ಎಸ್‌ಪಿಬಿ ಸ್ಮರಣಾರ್ಥ ಸಿಎಂ ಸ್ಟಾಲಿನ್ ಘೋಷಣೆ

By Ravi Janekal  |  First Published Sep 25, 2024, 7:48 PM IST

ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಅವರ ನಿವಾಸ ಇರುವ ಚೆನ್ನೈನ ನುಂಗಂಬಾಕ್ಕಂನ ಕಾಮ್ದಾರ್ ನಗರದ ಮೊದಲ ಬೀದಿಗೆ 'ಎಸ್.ಬಿ.ಬಾಲಸುಬ್ರಮಣ್ಯಂ ರಸ್ತೆ' ಎಂದು ನಾಮಕರಣ ಮಾಡಲಾಗುವುದು ಎಂದು ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.


SP Balasubramaniam Road: ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಅವರ ನಿವಾಸ ಇರುವ ಚೆನ್ನೈನ ನುಂಗಂಬಾಕ್ಕಂನ ಕಾಮ್ದಾರ್ ನಗರದ ಮೊದಲ ಬೀದಿಗೆ 'ಎಸ್.ಬಿ.ಬಾಲಸುಬ್ರಮಣ್ಯಂ ರಸ್ತೆ' ಎಂದು ನಾಮಕರಣ ಮಾಡಲಾಗುವುದು ಎಂದು ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.

ಎಸ್‌ಬಿಬಿ ಅವರ ಸ್ಮರಣಾರ್ಥ ಅವರು ವಾಸಿಸುತ್ತಿದ್ದ ಕಾಮ್ದಾರ್ ನಗರ ಪ್ರದೇಶವನ್ನು ಎಸ್‌ಬಿಬಿ ನಗರ ಎಂದು ಮರುನಾಮಕರಣ ಮಾಡುವಂತೆ ಅವರ ಪುತ್ರ ಸರಣ್ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ವಿನಂತಿಸಿದ್ದರು. ಎಸ್‌ಪಿಬಿ ಪುಣ್ಯಸ್ಮರಣೆ ದಿನವಾದ ಇಂದು ಅವರ ಮನೆ ಇರುವ ಪ್ರದೇಶದ ರಸ್ತೆಗೆ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ. 

Latest Videos

undefined

ಗಾನಗಾರುಡಿಗ ಎಸ್‌ಪಿ ಬಾಲಸುಬ್ರಮಣ್ಯಂ ಅಭಿನಯಿಸಿದ ಚಿತ್ರಗಳು ಇಲ್ಲಿವೆ

ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದ್ದಾಗಿದೆ. ಸುಮಾರು 16 ಭಾಷೆಗಳಲ್ಲಿ ಒಟ್ಟು 40,000 ಹಾಡುಗಳನ್ನು ಹಾಡುಗಳ ಮೂಲಕ ಯಾರೂ ಸರಿಗಟ್ಟದ ದಾಖಲೆ ಮಾಡಿದ್ದಾರೆ. ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ ಮತ್ತು ಪದ್ಮಭೂಷಣವನ್ನು ಪಡೆದಿದ್ದಾರೆ. 

ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡವರು. ಎದೆ ತುಂಬಿ ಹಾಡುವ ಮೂಲಕ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ನೆನಪಾಗುವುದು ಅವರ ಮಕ್ಕಳ ಸ್ವಭಾವ ಮತ್ತು ಹಾಸ್ಯಪ್ರಜ್ಞೆ ಹಾಡುಗಳ ಮೂಲಕ, ಹಾಸ್ಯದ ಮೂಲಕ ಅಥವಾ ಮನಸಿಗೆ ತಟ್ಟುವ  ಮಾತುಗಳು ಮರೆಯಲು ಸಾಧ್ಯವೇ?

ಎಸ್‌ಪಿಬಿ ಧ್ವನಿಯಲ್ಲಿ 'ಈ ಭೂಮಿ ಬಣ್ಣದ ಬುಗುರಿ..' ಹಾಡು ಹುಟ್ಟಿದ್ದು ಹೀಗೆ, ಎಂತಾ ಸ್ಟೋರಿ ನೋಡಿ!

ಕೊವಿಡ್ ಪಾಸಿಟಿವ್ ಆದ ಬಳಿಕ ಅವರ ಆರೋಗ್ಯವೂ ಕೈಕೊಟ್ಟು 2020 ರಲ್ಲಿ ಅವರು ಕಾಲವಾಗಿದ್ದು ಭಾರತೀಯ ಚಿತ್ರರಂಗಕ್ಕಾದ ದೊಡ್ಡ ನಷ್ಟ. ಎಸ್‌ಪಿಬಿ ಇಂದಿಗೆ ಕಾಲವಾಗಿ ನಾಲ್ಕು ವರ್ಷಗಳೇ ಕಳೆದರೂ ಅವರ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳು ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಎನ್ನಬಹುದು.

பாடும் நிலா அவர்களது நினைவு நாளில், அவர் வாழ்ந்த காம்தார் நகர் பிரதான சாலைக்கு “எஸ்.பி.பாலசுப்பிரமணியம் சாலை” எனப் பெயரிடப்படும் எனும் அறிவிப்பைச் செய்வதில் பாலு அவர்களின் கோடிக்கணக்கான ரசிகர்களில் ஒருவனாக மகிழ்ச்சியும் பெருமிதமும் கொள்கிறேன்.… pic.twitter.com/UuwwR1m1E0

— M.K.Stalin (@mkstalin)
click me!