ಟ್ರೈನ್​ ಟಿಕೆಟ್​ ತೋರಿಸಲು ಕೇಳಿದಾಗ, ಬಟ್ಟೆ ಹರ್ಕೊಂಡು ಟಿಟಿಇ ವಿರುದ್ಧವೇ ಕೇಸ್​ ಹಾಕಿದ್ಲು! ಮುಂದೇನಾಯ್ತು ನೋಡಿ

Published : Sep 20, 2026, 04:48 PM IST
Train Ticket

ಸಾರಾಂಶ

ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು, ಟಿಕೆಟ್ ಕೇಳಿದ ಟಿಟಿಇ ವಿರುದ್ಧವೇ ಸುಳ್ಳು ಆರೋಪ ಮಾಡಲು ತನ್ನ ಬಟ್ಟೆ ಹರಿದುಕೊಂಡಿದ್ದಾಳೆ. ಆದರೆ ಟಿಟಿಇ ಈ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರಿಂದ ಆಕೆಯ ಬಣ್ಣ ಬಯಲಾಗಿದೆ. ಪ್ರಸ್ತುತ ರೈಲ್ವೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ದೆಹಲಿ: ರೈಲು ಪ್ರಯಾಣದ ಸಮಯದಲ್ಲಿ ಟಿಕೆಟ್​ ಇಲ್ಲದೇ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳಿಗೆ ಟಿಕೆಟ್​ ತೋರಿಸುವಂತೆ ಪ್ರಯಾಣ ಟಿಕೆಟ್ ಪರೀಕ್ಷಕ (TTE) ಕೇಳಿದ ಹಿನ್ನೆಲೆಯಲ್ಲಿ, ಟಿಕೆಟ್​ ಇಲ್ಲವೆಂದು ಹೇಳಿ ಸಿಕ್ಕಿಬೀಳುವ ಭಯದಲ್ಲಿ, ಬಟ್ಟೆಯನ್ನು ಹರಿದುಕೊಂಡು ಟಿಟಿಇ ಅನುಚಿತ ವರ್ತನೆ ತೋರಿದ ಎಂದು ಅವರ ವಿರುದ್ಧವೇ ಮಹಿಳೆಯೊಬ್ಬಳು ಕೇಸ್​ ಹಾಕಿರುವ ಘಟನೆ ನಡೆದಿದೆ! ಸೆಪ್ಟೆಂಬರ್ 18 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಈ ಘಟನೆ ನಂತರ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಟಿಟಿಇ ಈ ಘಟನೆಯನ್ನು ರೆಕಾರ್ಡ್​ ಮಾಡಿಕೊಂಡಿರುವ ಕಾರಣ, ಅವರು ಬಚಾವ್​ ಆಗಿದ್ದಾರೆ. ಇಲ್ಲದೇ ಹೋದರೆ, ಈ ಮಹಿಳೆ ಟಿಟಿಇಯನ್ನು ಲೈಂಗಿಕ ದೌರ್ಜನ್ಯ ಕೇಸ್​ನಲ್ಲಿ ಒಳಗೆ ಹಾಕಿಸುತ್ತಿದ್ದಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಬಟ್ಟೆ ಹರಿದುಕೊಂಡ ಮಹಿಳೆ

ವೈರಲ್​ ವಿಡಿಯೋದಲ್ಲಿ, ಚಲಿಸುವ ರೈಲಿನಲ್ಲಿ TTE ಜೊತೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬಳು ತನ್ನ ಬಟ್ಟೆಗಳನ್ನು ಹರಿದುಕೊಂಡಿರುವುದನ್ನು ನೋಡಬಹುದು. ವರದಿಗಳ ಪ್ರಕಾರ, ಟಿಟಿಇ ಟಿಕೆಟ್ ತೋರಿಸಲು ಕೇಳಿದಾಗ ವಿವಾದ ಪ್ರಾರಂಭವಾಯಿತು. ಮಹಿಳೆ ನಾನು ಹಣ ಇದಾಗಲೇ ನೀಡಿದ್ದೇನೆ, ನನ್ನ ಸಹೋದರ ಟಿಟಿಇ ಎಂದು ಹೇಳಿದ್ದಾಳೆ. ಆಕೆ ಸುಳ್ಳು ಹೇಳುತ್ತಿರುವುದು ತಿಳಿಯುತ್ತಲೇ ಟಿಟಿಇ ಅವೆಲ್ಲಾ ಬೇಡ, ಟಿಕೆಟ್​ ತೋರಿಸಿ ಎಂದಿದ್ದಾರೆ. ಇನ್ನು ತಾನು ಸಿಕ್ಕಿಬೀಳುತ್ತೇನೆ ಎಂದುಕೊಂಡ ಮಹಿಳೆ, ಬಟ್ಟೆಗಳನ್ನು ಹರಿದುಕೊಂಡು ಟಿಟಿಇ ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಚೀರಾಟ ಮಾಡಿದ್ದಾಳೆ.

ಪೊಲೀಸರಿಂದ ಪ್ರಶ್ನೆ

ಟಿಟಿಇ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿರುವುದಕ್ಕೆ ವಿಷಯ ಬೆಳಕಿಗೆ ಬಂದಿದೆ. ಆದರೆ ಇದರ ಬಗ್ಗೆ ಅರಿವಿಲ್ಲದ ಮಹಿಳೆ ಅದಾಗಲೇ 112 ಗೆ ಕರೆ ಮಾಡಿ ದೂರನ್ನು ದಾಖಲಿಸಿದ್ದಾಳೆ! ರೈಲ್ವೆ ಪೊಲೀಸರು ಮತ್ತು ಮಹಿಳಾ ಪೊಲೀಸರು ನಂತರ ಮಹಿಳೆಯನ್ನು ರೈಲಿನಿಂದ ಇಳಿಸಿದ ನಂತರ ಪ್ರಶ್ನಿಸಿದ್ದಾರೆ. ವಿಡಿಯೋ ಅನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅದರಲ್ಲಿ, ಆಕೆ, ತನ್ನನ್ನು ರಾಧಿಕಾ ತಿವಾರಿ ಎಂದು ಗುರುತಿಸಿಕೊಂಡಿದ್ದಾಳೆ. ಟಿಟಿಇ ಜೊತೆ ಜಗಳಕ್ಕಿಳಿದ ಆಕೆ, ತನ್ನ ಕುಟುಂಬ ಸದಸ್ಯರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ಟಿಟಿಇ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾಳೆ!

ನಂತರ ಅವಳು ತನ್ನ ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭಿಸಿರುವುದು ಕಂಡು ಬಂದಿದೆ. ಇದರ ತನಿಖೆ ನಡೆಯುತ್ತಿದೆ. ಆದರೆ ವಿಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿರುವ ಕಾರಣ ಟಿಟಿಇ ಬಚಾವ್​ ಆಗಬಹುದು ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ajit Doval: ಆ ದಿನ ನನ್ನ ಕಥೆ ಮುಗಿಯಿತು ಅನಿಸಿತು, ಶಾಕಿಂಗ್ ವಿಚಾರ ಹಂಚಿಕೊಂಡ ಅಜಿತ್ ದೋವಲ್
ಚುನಾವಣಾ ಆಯೋಗಕ್ಕೆ ಗೂಗ್ಲಿ, ವೋಟರ್ ಲಿಸ್ಟ್ ಪರಿಷ್ಕರಿಸುತ್ತಿರುವ ಎಲೆಕ್ಷನ್ ಕಮಿಷನರ್‌‌ಗೆ SIR ನೋಟಿಸ್